- Home
- Entertainment
- TV Talk
- Amruthadhaare: ದೇಶವನ್ನೇ ಬಿಡೋದಿದ್ರೆ ಇಷ್ಟ್ಯಾಕೆ ಬಿಲ್ಡಪ್ ಬೇಕಿತ್ತು? ಸೀರಿಯಲ್ ವೀಕ್ಷಕರೇ ಶಾಕ್
Amruthadhaare: ದೇಶವನ್ನೇ ಬಿಡೋದಿದ್ರೆ ಇಷ್ಟ್ಯಾಕೆ ಬಿಲ್ಡಪ್ ಬೇಕಿತ್ತು? ಸೀರಿಯಲ್ ವೀಕ್ಷಕರೇ ಶಾಕ್
ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ, ಜೈದೇವ್‌ಗೆ ಸವಾಲು ಹಾಕಿದ್ದ ಭೂಮಿಕಾ, ಇದೀಗ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾಳೆ. ಕುಟುಂಬ ಸಮೇತ ದೇಶ ತೊರೆಯಲು ಮುಂದಾಗಿರುವ ಆಕೆಯ ನಿರ್ಧಾರ ಗೌತಮ್ ಹಾಗೂ ವೀಕ್ಷಕರಿಗೆ ತೀವ್ರ ಆಘಾತವನ್ನುಂಟುಮಾಡಿದೆ.

ಅಮೃತಧಾರೆ ಸೀರಿಯಲ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ವೀಕ್ಷಕರು ಕಥಾ ನಾಯಕಿ ಭೂಮಿಕಾ ತೆಗೆದುಕೊಂಡ ನಿರ್ಧಾರಕ್ಕೆ ಶಾಕ್ ಆಗಿದ್ದಾರೆ. ಕೋಟ್ಯಧಿಪತಿ ಗೌತಮ್ ದಿವಾನ್ ಪತ್ನಿಯಾಗಿರುವ ಭೂಮಿಕಾ, ಸದ್ಯ ಮಧ್ಯಮ ವರ್ಗದ ಮಹಿಳೆಯಂತೆ ಪುಟ್ಟ ವಠಾರದಲ್ಲಿ ವಾಸವಾಗಿದ್ದಾಳೆ.
ಭೂಮಿಕಾ ಹೇಳಿದ ಡೈಲಾಗ್
ಆಸ್ತಿಯೆಲ್ಲವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಜೈದೇವ್ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ತನ್ನನ್ನು ಭೇಟಿಯಾಗಿದ್ದ ಅಪ್ಪುನೇ ಗೌತಮ್ ಮಗ ಎಂದು ತಿಳಿದ ಜೈದೇವ್ ಆತನನ್ನು ಉಪಾಯದಿಂದ ದಿವಾನ್ ಮನೆಗೆ ಕರೆದುಕೊಂಡು ಬಂದಿದ್ದನು. ಮಗನನ್ನ ಕರೆದುಕೊಂಡು ಹೋಗಲು ಜೈದೇವ್ ಬಳಿಗೆ ಬಂದಾಗ ಭೂಮಿಕಾ ಹೇಳಿದ ಡೈಲಾಗ್‌ಗೆ ವೀಕ್ಷಕರು ಶಿಳ್ಳೆ ಚಪ್ಪಾಳೆ ಹೊಡೆದಿದ್ದರು.
ಭೂಮಿಕಾ ದಿವಾನ್ ಕಂಬ್ಯಾಕ್
ಭೂಮಿಕಾ ಮಾತುಗಳನ್ನು ಕೇಳಿದ ನಂತರ ಸೀರಿಯಲ್‌ನಲ್ಲಿ ಮತ್ತೆ ಹಳೆಯ ಭೂಮಿಕಾ ದಿವಾನ್ ಕಂಬ್ಯಾಕ್ ಅಂತ ವೀಕ್ಷಕರು ನಿರೀಕ್ಷಿಸಿದ್ದರು. ಆದ್ರೆ ಇದೀಗ ಭೂಮಿಕಾ ತೆಗೆದುಕೊಂಡ ನಿರ್ಧಾರ ವೀಕ್ಷಕರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ದೇಶದಿಂದ ಹೋಗುವದಿದ್ರೆ ಯಾಕೆ ಇಷ್ಟು ಬಿಲ್ಡಪ್ ಬೇಕಿತ್ತು ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.
ದೇಶ ತೊರೆಯಲು ಮುಂದಾದ ಭೂಮಿಕಾ
ಹೌದು, ಕೆಡಿ ಜೈದೇವ್‌ನಿಂದ ದೂರವಿರಲು ಭೂಮಿಕಾ ಕುಟುಂಬ ಸಮೇತ ದೇಶ ತೊರೆಯಲು ಮುಂದಾಗಿದ್ದಾಳೆ. ಅಪ್ಪು ಸಹ ಈ ಊರು ಬೇಡ ಅಂತ ಹೇಳಿದ್ದಾನೆ. ಭೂಮಿಕಾ ದೇಶ ತೊರೆಯುತ್ತಿರುವ ವಿಷಯತ ತಿಳಿದ ಗೌತಮ್ ಸಹ ಶಾಕ್ ಆಗಿದ್ದಾನೆ. ಮಗಳು ಮಿಂಚುಳಿಂದ ಗೌತಮ್‌ಗೆ ಈ ವಿಷಯ ಗೊತ್ತಾಗಿದೆ.
ಇದನ್ನೂ ಓದಿ: Amuthadhaare Serial: ಯಾರೂ ಊಹಿಸದ ಹೆಜ್ಜೆ ಇಟ್ಟ ಭೂಮಿಕಾ; ವೀಕ್ಷಕರನ್ನು ಇನ್ನು ಹಿಡಿಯೋಕಾಗಲ್ಲ!
ವೀಕ್ಷಕರು ಹೇಳಿದ್ದೇನು?
ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿದ ವೀಕ್ಷಕರು ತಮ್ಮ ಅಭಿಪ್ರಾಯುವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಯಾಕೋ ಓವರ್ ಆಯ್ತು. ಹೋಗೋದಾದ್ರೆ ಗೌತಮ್‌ನನ್ನು ಜೊತೆಯಲ್ಲಿ ಕರ್ಕೊಂಡು ಹೋಗಿ. ಆಗ ಕಥೆಯೇ ಮುಗಿಯುತ್ತದೆ ಎಂದು ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: Amruthadhaare Serial: ಶಾಶ್ವತವಾಗಿ ಭೂಮಿ-ಗೌತಮ್‌ನನ್ನು ದೂರ ಮಾಡಿದ್ನಾ JD ಅಲ್ಲ ಕೇಡಿ ಜಯದೇವ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

