- Home
- Entertainment
- TV Talk
- Amuthadhaare Serial: ಯಾರೂ ಊಹಿಸದ ಹೆಜ್ಜೆ ಇಟ್ಟ ಭೂಮಿಕಾ; ವೀಕ್ಷಕರನ್ನು ಇನ್ನು ಹಿಡಿಯೋಕಾಗಲ್ಲ!
Amuthadhaare Serial: ಯಾರೂ ಊಹಿಸದ ಹೆಜ್ಜೆ ಇಟ್ಟ ಭೂಮಿಕಾ; ವೀಕ್ಷಕರನ್ನು ಇನ್ನು ಹಿಡಿಯೋಕಾಗಲ್ಲ!
Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಯಾರೂ ಊಹಿಸದ ಘಟನೆ ನಡೆದು ಹೋಯ್ತು. ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಭೂಮಿ ಈ ರೀತಿ ಮಾಡ್ತಾಳೆ ಎಂದು ಅಂದುಕೊಂಡಿರಲಿಲ್ಲ. ಇದು ವೀಕ್ಷಕರಿಗಂತೂ ಸಖತ್ ಹಬ್ಬ ಎಂದು ಹೇಳಬಹುದು.

ಜಯದೇವ್ ಅಂದುಕೊಂಡ ಹಾಗೆ ಆಯ್ತು
ಜಯದೇವ್, ಗೌತಮ್-ಭೂಮಿ ಮಗ ಆಕಾಶ್‌ನನ್ನು ಕಿಡ್ನ್ಯಾಪ್ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದನು. ಈ ವಿಚಾರವು ಭೂಮಿಗೆ ಗೊತ್ತಾಗಿದೆ. ಹೀಗಾಗಿ ಅವಳು ಮಲ್ಲಿ ಜೊತೆ ಮತ್ತೆ ಆ ಮನೆಗೆ ಬಂದಿದ್ದಾಳೆ. ಭೂಮಿಕಾಳೇ ತನ್ನ ಮನೆಗೆ ಬರಬೇಕು ಎಂದು ಜಯದೇವ್ ಅಂದುಕೊಂಡಿದ್ದನು, ಅದರಂತೆ ಆಯ್ತು.
ಜಯದೇವ್‌ಗೆ ಮತ್ತೆ ಆಸ್ತಿ ಸಿಗೋದು ಡೌಟ್
ಭೂಮಿಕಾ ಬಂದಕೂಡಲೇ ಜಯದೇವ್, ಒಂದಿಷ್ಟು ಪೇಪರ್ ಕೊಟ್ಟು ಸಹಿ ಮಾಡು ಎಂದಿದ್ದಾನೆ. ಭೂಮಿಕಾ ಸಹಿ ಮಾಡಿದ್ದಾಳೆ, ಜಯದೇವ್ ಪ್ರಕಾರ ಈಗ ಗೌತಮ್ ಆಸ್ತಿಯೆಲ್ಲವೂ ಅವನ ಪಾಲಾಗಿದೆ. ಒಟ್ಟಿನಲ್ಲಿ ಇಷ್ಟು ಸುಲಭಕ್ಕೆ ಜಯದೇವ್‌ಗೆ ಮತ್ತೆ ಆಸ್ತಿ ಸಿಗೋದು ಡೌಟ್ ಎಂದು ಹೇಳಬಹುದು.
ಇನ್ಮುಂದೆ ಆಗೋದು ಸಂಗಮ ಅಲ್ಲ ಸಂಗ್ರಾಮ
ಜಯದೇವ್ ಕೊಟ್ಟ ಪೇಪರ್‌ಗೆ ಸಹಿ ಹಾಕಿರೋ ಭೂಮಿ, “ಇನ್ನು ಯಾವತ್ತೂ ನಾವು ನಿಮ್ಮ ಮುಖ ನೋಡಬಾರದು, ತಾಳ್ಮೆ ಕಟ್ಟೆ ಒಡೆಯೋದು ಒಂದೇ, ಆಣೆಕಟ್ಟೆ ಒಡೆಯೋದು ಒಂದೆ, ಭೂಕಂಪೂ ಆಗತ್ತೆ, ಜ್ವಾಲಾಮುಖಿಯೂ ಒಡೆಯತ್ತೆ. ಇಷ್ಟು ವರ್ಷ ತಾಳ್ಮೆಯಿಂದ ಇದ್ದು ಬಂದೆ. ಇನ್ಮುಂದೆ ಆಗೋದು ಸಂಗಮ ಅಲ್ಲ ಸಂಗ್ರಾಮ” ಎಂದು ವಾರ್ನಿಂಗ್ ಮಾಡಿದ್ದಾಳೆ.
ಭೂಮಿಕಾ ಇಷ್ಟು ಮಾತಾಡ್ತಾಳೆ ?
ಭೂಮಿಕಾ ಇಷ್ಟು ಮಾತಾಡ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅಂದು ಶಕುಂತಲಾ ಭೂಮಿಗೆ, “ನೀನು ಈ ಮನೆಯಿಂದ ಈ ಮನೆಯವರಿಂದ ದೂರ ಇದ್ದರೆ ಮಾತ್ರ ಎಲ್ಲರೂ ಚೆನ್ನಾಗಿ ಇರುತ್ತಾರೆ” ಎಂದು ಎಚ್ಚರಿಕೆ ಕೊಟ್ಟಿದ್ದಳು. ಅದರಂತೆ ಭೂಮಿಕಾ ಮನೆ ಬಿಟ್ಟು ಹೋಗಿದ್ದಳು.
ಭೂಮಿಕಾ ಆಸೆ ಈಡೇರಲ್ಲ
ಈಗ ಗೌತಮ್ ಕೂಡ ಭೂಮಿಕಾ ಜೊತೆ ವಠಾರದಲ್ಲಿದ್ದಾನೆ. ಗೌತಮ್ ಜೊತೆ ತಾನು ಸೇರಬೇಕು, ನಾವು ಒಟ್ಟಿಗೆ ಇರಬೇಕು ಎಂದು ಭೂಮಿಕಾ ಬಯಸುತ್ತಿದ್ದಳು. ಈಗ ಜಯದೇವ್ ಮತ್ತೆ ಎಂಟ್ರಿ ಕೊಟ್ಟಿರೋದಿಕ್ಕೆ, ಮತ್ತೆ ಇನ್ನೇನಾದರೂ ಸಮಸ್ಯೆ ಆಗಲಿದೆ ಎಂದು ಭೂಮಿ, ಗೌತಮ್‌ನಿಂದ ದೂರ ಆದರೂ ಕೂಡ ಆಶ್ಚರ್ಯವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

