- Home
- Entertainment
- TV Talk
- 'ವಧು' ಸೀರಿಯಲ್ ಡಿವೋರ್ಸ್ ಲಾಯರ್ ಆಸ್ಪತ್ರೆಗೆ ದಾಖಲು: ಐಸಿಯುಗೆ ಶಿಫ್ಟ್- ನಟಿ ದುರ್ಗಶ್ರೀಗೆ ಆಗಿದ್ದೇನು
'ವಧು' ಸೀರಿಯಲ್ ಡಿವೋರ್ಸ್ ಲಾಯರ್ ಆಸ್ಪತ್ರೆಗೆ ದಾಖಲು: ಐಸಿಯುಗೆ ಶಿಫ್ಟ್- ನಟಿ ದುರ್ಗಶ್ರೀಗೆ ಆಗಿದ್ದೇನು
'ವಧು' ಸೀರಿಯಲ್ ಖ್ಯಾತಿಯ ನಟಿ ದುರ್ಗಶ್ರೀ, ತೆಲುಗಿನ 'ಸಂಧ್ಯಾರಾಗಂ' ಧಾರಾವಾಹಿಯಿಂದ ಏಕಾಏಕಿ ಹೊರಬಂದಿದ್ದರು. ಗರ್ಭಾಶಯದ ಸಿಸ್ಟ್ ಸಮಸ್ಯೆಯಿಂದಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಧಾರಾವಾಹಿ ತೊರೆಯಬೇಕಾಯಿತು ಎಂದು ಅವರು ಇದೀಗ ಸ್ಪಷ್ಟಪಡಿಸಿದ್ದಾರೆ.

ಡಿವೋರ್ಸ್ ಲಾಯರ್
ಡಿವೋರ್ಸ್ ಲಾಯರ್ ಎಂದೇ ಫೇಮಸ್ ಆದವರು ನಟಿ ದುರ್ಗಶ್ರೀ. ಕಲರ್ಸ್ ಕನ್ನಡದ ‘ವಧು’ ಸೀರಿಯಲ್ನಲ್ಲಿ ಈ ಪಾತ್ರ ಮಾಡುವ ಮೂಲಕ ಜನಮನ ಗೆದ್ದಿರೋ ನಟಿ ದುರ್ಗಶ್ರೀ ಸದ್ಯ ತೆಲುಗು ಸೀರಿಯಲ್ನಲ್ಲಿ ಬಿಜಿ ಇದ್ದರು. ಆದರೆ ಏಕಾಏಕಿ ನಟಿ ಸೀರಿಯಲ್ನಿಂದ ಹೊರಬಂದು ಅಚ್ಚರಿ ಮೂಡಿಸಿದ್ದರು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಡಿಯೋ ಶೇರ್ ಮಾಡಿ ಅಭಿಮಾನಿಗಳನ್ನು ದಂಗು ಬಡಿಸಿದ್ದರು.
ತೆಲುಗುವಿನಲ್ಲಿಯೂ ಫೇಮಸ್
ಅಷ್ಟಕ್ಕೂ ನಟಿ ದುರ್ಗಶ್ರೀ ವಧು ಸೀರಿಯಲ್ಗೂ ಮುನ್ನ ಉದಯ ಟಿವಿಯ ಜನಪ್ರಿಯ ಧಾರಾವಾಹಿ ‘ನೇತ್ರಾವತಿ’ ಕನ್ನಡಕ್ಕೆ ಪರಿಚಿತರಾದವರು. ತೆಲುಗುವಿನಲ್ಲಿಯೂ ಇವರು ಫೇಮಸ್ ನಟಿ. ‘ಅರ್ಧಾಂಗಿ’, ‘ಮಧುರಾ ನಗರಿಯಲೋ’ ಸೀರಿಯಲ್‌ಗಳಲ್ಲಿ ನಟಿಸಿದ್ದದಾರೆ. ‘ಸಂಧ್ಯಾರಾಗಂ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ದುರ್ಗಶ್ರೀ ಮಾಡುತ್ತಿದ್ದರು. ಆದರೆ, ಅಲ್ಲಿಂದ ಹೊರನಡೆದರು.
ಫ್ಯಾನ್ಸ್ ಶಾಕ್
ನಟಿಗೆ ಏನಾಯ್ತು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಕೊನೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದು ಕೇಳಿ ಮತ್ತಷ್ಟು ಶಾಕ್ಗೆ ಒಳಗಾಗಿದ್ದರು. ಇದೀಗ ಆ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ. ಗರ್ಭಾಶಯದಲ್ಲಿ ಸಿಸ್ಟ್ (Uterus Cyst) ಕಾಣಿಸಿಕೊಂಡಿದ್ದರಿಂದ ತುರ್ತಾಗಿ ಆಪರೇಷನ್ ಅಗತ್ಯವಿತ್ತು. ಈ ಕಾರಣದಿಂದ ಸೀರಿಯಲ್ ಬಿಟ್ಟು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ ಎಂದಿದ್ದಾರೆ.
ನಟಿ ಹೇಳಿದ್ದೇನು?
ವಿಡಿಯೋದಲ್ಲಿ ನಟಿ, ಸಂಧ್ಯಾರಾಗಂ ಸೀರಿಯಲ್ ಆರಂಭವಾಗಿ ಒಂದು ವರ್ಷವಾಯ್ತು. ಈ ಸೀರಿಯಲ್ನಲ್ಲಿ ಜನ ನನ್ನನ್ನು ತುಂಬಾ ಇಷ್ಟಪಟ್ಟಿದ್ದರು. ಆದರೆ ನಾನು ಹೊರಬರಬೇಕಾಯ್ತು. ಹಲವಾರು ಅಭಿಮಾನಿಗಳು ಈ ಬಗ್ಗೆ ನನ್ನನ್ನು ಪ್ರಶ್ನಿಸಿದ್ದರು. ಆದರೆ ಅವರಿಗೆ ಉತ್ತರಿಸುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಇದಕ್ಕಾಗಿ ತುಂಬಾ ಮಂದಿ ಬೇಸರ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಈಗ ವಿಡಿಯೋ ಮೂಲಕ ವಿಷಯ ತಿಳಿಸುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.
ನನ್ನ ಕನಸಿನ ಪ್ರಾಜೆಕ್ಟ್
ಅಷ್ಟಕ್ಕೂ ಸಂಧ್ಯಾರಾಗಂ ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು. ಇಲ್ಲಿ ಛಾನ್ಸ್ ಸಿಕ್ಕಾಗ ಕುಣಿದಾಡಿದ್ದೆ. ಆದರೆ ನನ್ನ ಆರೋಗ್ಯ ಕೈಕೊಟ್ಟಿತು. ಆದ್ದರಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಹೈದರಾಬಾದ್‌ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ತಕ್ಷಣ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು ಎಂದಿದ್ದಾರೆ.
ತುರ್ತಾಗಿ ಅಡ್ಮಿಟ್
ಆಗ ತುರ್ತಾಗಿ ಅಡ್ಮಿಟ್ ಆಗಲೇಬೇಕಾಯಿತು. ವೈದ್ಯರು ನನ್ನನ್ನು ಐಸಿಯುಗೆ ಶಿಫ್ಟ್ ಮಾಡಿದರು. ನಂತರ ಗರ್ಭಾಶಯದಲ್ಲಿ ಸಿಸ್ಟ್ ಇರುವುದು ತಿಳಿದು ಆಪರೇಷನ್ ಮಾಡಬೇಕಾಯ್ತು. ಆದ್ದರಿಂದ ಆ ಸಮಯದಲ್ಲಿ ಈ ವಿಷಯವನ್ನು ಯಾರಿಗೂ ಹೇಳಲು ಆಗಲಿಲ್ಲ. ಆಪರೇಷನ್ ನಂತರ ಸುಮಾರು ಒಂದೂವರೆ ತಿಂಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿ ಇದ್ದೆ. ಈಗ ವಿಷಯ ತಿಳಿಸುತ್ತಿದ್ದೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

