MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • Bhagyalakshmi: ಮತ್ತೊಂದು ಮದ್ವೆಯಾದ ಅಮ್ಮನ ಕಂಡ್ರೆ ಗುರ್​ ಎನ್ನೋ ತನ್ವಿ, ಇಲ್ನೋಡಿ ಭರ್ಜರಿ ಸ್ಟೆಪ್​

Bhagyalakshmi: ಮತ್ತೊಂದು ಮದ್ವೆಯಾದ ಅಮ್ಮನ ಕಂಡ್ರೆ ಗುರ್​ ಎನ್ನೋ ತನ್ವಿ, ಇಲ್ನೋಡಿ ಭರ್ಜರಿ ಸ್ಟೆಪ್​

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಅಮ್ಮ ಭಾಗ್ಯಳನ್ನು ದ್ವೇಷಿಸುವ ಮಗಳು ತನ್ವಿ, ನಿಜ ಜೀವನದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ನಟಿ ಸುಷ್ಮಾ ಕೆ. ರಾವ್ ಮತ್ತು ಅಮೃತಾ ಗೌಡ ಒಟ್ಟಿಗೆ ಮಾಡುವ ಡ್ಯಾನ್ಸ್ ರೀಲ್ಸ್‌ಗಳು  ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿವೆ.

2 Min read
Author : Suchethana D
Published : Apr 26 2026, 06:14 PM IST
Share this Photo Gallery
  • FB
  • TW
  • Linkdin
  • Whatsapp
16
ಭಾಗ್ಯಳ ಮತ್ತೊಂದು ಮದುವೆ
Image Credit : Jio Hotstar

ಭಾಗ್ಯಳ ಮತ್ತೊಂದು ಮದುವೆ

ಸದ್ಯ ಭಾಗ್ಯಲಕ್ಷ್ಮಿಯಲ್ಲಿ ಭಾಗ್ಯಳ ಮತ್ತೊಂದು ಹಂತದ ಗೋಳು ಶುರುವಾಗಿದೆ. ಆದಿಯ ಜೊತೆ ಮದುವೆಯೇನೋ ಆಗಿದೆ. ತಾಂಡವ್​ಗೆ ಸಂಪೂರ್ಣ ತದ್ವಿರುದ್ಧ ಆಗಿರೋ ಆದಿ, ಭಾಗ್ಯಳ ಜೀವನದಲ್ಲಿ ತಂಗಾಳಿ ತಂದಿದ್ದಾನೆ. ಆದರೆ ಅದರ ಜೊತೆನೇ ನಾದಿನಿ, ಅತ್ತೆ ಕಾಟ ಭಾಗ್ಯಳ ಕಾಡುತ್ತಿದೆ. ಅದೇ ಇನ್ನೊಂದೆಡೆ ಮಗಳು ತನ್ವಿ ಅಮ್ಮನನ್ನು ಕಂಡು ದ್ವೇಷ ಮಾಡುತ್ತಿದ್ದಾಳೆ. ಅಪ್ಪನ ಕೆಟ್ಟತನ, ದುಷ್ಟಬುದ್ಧಿ ಗೊತ್ತಿದ್ದರೂ, ಮಗಳು ತನ್ವಿಗೆ ಅಮ್ಮ ಇನ್ನೊಂದು ಮದುವೆಯಾಗಿರುವುದು ಇಷ್ಟವಿಲ್ಲ. ಹೆಜ್ಜೆ ಹೆಜ್ಜೆಗೂ ಅಮ್ಮನನ್ನು ಅವಮಾನಿಸುತ್ತಿದ್ದಾಳೆ. ಅವಳಿಗೆ ಅಮ್ಮನ ಮೇಲೆ ಇನ್ನಿಲ್ಲದ ದ್ವೇಷ.

26
ಬಿಡುವಾದಾಗಲೆಲ್ಲಾ ರೀಲ್ಸ್​
Image Credit : anchor_sushmakrao instagram

ಬಿಡುವಾದಾಗಲೆಲ್ಲಾ ರೀಲ್ಸ್​

ಇದು ಸೀರಿಯಲ್​ ವಿಷ್ಯವಾದರೆ, ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಮತ್ತು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಅವರು ಭರ್ಜರಿ ರೀಲ್ಸ್​ ಮಾಡುತ್ತಲೇ ಇರುತ್ತಾರೆ. ಇದೀಗ ತಮಿಳು ಚಿತ್ರ Pavazha Malliಯ ಹಿಟ್​ ಹಾಡಿಗೆ ಇಬ್ಬರೂ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಇವರ ಜೋಡಿಗೆ ಫ್ಯಾನ್ಸ್​ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅಷ್ಟಕ್ಕೂ ಶೂಟಿಂಗ್​ನಿಂದ ಬಿಡುವು ಆದಾಗಲೆಲ್ಲ ಸುಷ್ಮಾ ಅವರು ಭಾಗ್ಯಲಕ್ಷ್ಮಿ ಟೀಮ್​ ಜೊತೆ ಹೀಗೆ ಸ್ಟೆಪ್​ ಹಾಕುತ್ತಲೇ ಇರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಅವರು, ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ.

Related Articles

Related image1
ಟೀಚರ್ಸ್​ ವಾಷ್​ರೂಮ್​ನಲ್ಲಿದ್ದಾಗ ಬಾಗಿಲು ಹಾಕೋದೆಂದ್ರೆ ಸಕತ್​ ಇಷ್ಟ: ತರ್ಲೆ ದಿನಗಳ ನೆನೆದ ನಟ ಚಂದನ್
Related image2
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
36
ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ
Image Credit : anchor_sushmakrao instagram

ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ

ಇನ್ನು ಸುಷ್ಮಾ ಕೆ. ರಾವ್‌ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.

46
ಹಲವು ಪ್ರಶಸ್ತಿ ಪಡೆದ ಸುಷ್ಮಾ ರಾವ್​
Image Credit : anchor_sushmakrao instagram

ಹಲವು ಪ್ರಶಸ್ತಿ ಪಡೆದ ಸುಷ್ಮಾ ರಾವ್​

2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

56
ತನ್ವಿಯಾಗಿ ಅಮೃತಾ ಗೌಡ
Image Credit : Instagram

ತನ್ವಿಯಾಗಿ ಅಮೃತಾ ಗೌಡ

ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್​ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ.

66
 ಅಮ್ಮ-ಮಗಳ ರೀಲ್ಸ್​ಗೆ ಫಿದಾ
Image Credit : Instagram

ಅಮ್ಮ-ಮಗಳ ರೀಲ್ಸ್​ಗೆ ಫಿದಾ

ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್​ ಅಮ್ಮ-ಮಗಳ ರೀಲ್ಸ್​ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಸುಷ್ಮಾ ಕೆ ರಾವ್

Latest Videos
Recommended Stories
Recommended image1
ಮಗಳು ನೈಸಾ ಹೊಸ ಫೋನ್ ಒಡೆದುಹಾಕಿದ್ದೆ, 3 ವರ್ಷ ಮಾತಾಡಿರಲಿಲ್ಲ: ಕಾಜೋಲ್ ಶಾಕಿಂಗ್ ಮಾತು
Recommended image2
ಕೇರಳದಲ್ಲಿ 'ಮೈಸಾ' ಶೂಟಿಂಗ್: ಹಿಂದೆಂದೂ ಮಾಡದ ಬೋಲ್ಡ್ ಪಾತ್ರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ!
Recommended image3
ಮೀನಾ 'ನೋ ಎಂದಿದ್ದಕ್ಕೆ ಸೌಂದರ್ಯ 'ಯೆಸ್' ಅಂದ್ರು.. ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?
Related Stories
Recommended image1
ಟೀಚರ್ಸ್​ ವಾಷ್​ರೂಮ್​ನಲ್ಲಿದ್ದಾಗ ಬಾಗಿಲು ಹಾಕೋದೆಂದ್ರೆ ಸಕತ್​ ಇಷ್ಟ: ತರ್ಲೆ ದಿನಗಳ ನೆನೆದ ನಟ ಚಂದನ್
Recommended image2
ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved