MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಒಂದೇ ಸಮಯದಲ್ಲಿ ಎರಡು ಬೇರೆ ಬೇರೆ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ಅಕ್ಕ-ತಂಗಿ

ಒಂದೇ ಸಮಯದಲ್ಲಿ ಎರಡು ಬೇರೆ ಬೇರೆ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ಅಕ್ಕ-ತಂಗಿ

Sonu Gowda - Neha Gowda: ಕನ್ನಡ ಕಿರುತೆರೆಯ ಎರಡು ವಿಭಿನ್ನ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ವಿಭಿನ್ನ ಧಾರಾವಾಹಿಗಳಲ್ಲಿ, ಒಂದೇ ಸಮಯಕ್ಕೆ ಅಕ್ಕ, ತಂಗಿಯರ ಎಂಟ್ರಿಯಾಗಿದೆ. ಕನ್ನಡದ ಈ ಜನಪ್ರಿಯ ಅಕ್ಕತಂಗಿಯರು ಮತ್ತೆ ಮೋಡಿ ಮಾಡೋದಕ್ಕೆ ಬಂದಿದ್ದಾರೆ. 

1 Min read
Author : Pavna Das
Published : Jun 10 2026, 04:19 PM IST
Share this Photo Gallery
  • FB
  • TW
  • Linkdin
  • Whatsapp
16
ಕನ್ನಡ ಕಿರುತೆರೆ
Image Credit : Instagram

ಕನ್ನಡ ಕಿರುತೆರೆ

ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಹೊಸತನಕ್ಕೆ ಕೊರತೆ ಇಲ್ಲ. ಅದರಲ್ಲೂ ಧಾರಾವಾಹಿ ಕಥೆಗಳನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಜನಪ್ರಿಯ ಅತಿಥಿ ಕಲಾವಿದರನ್ನು ಕರೆಸುತ್ತಲೇ ಇರುತ್ತಾರೆ. ಇದೀಗ ಕನ್ನಡದ ಜನಪ್ರಿಯ ಅಕ್ಕ-ತಂಗಿ ಜೋಡಿ ಎರಡು ವಿಭಿನ್ನ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೋನು ಗೌಡ- ನೇಹಾ ಗೌಡ
Image Credit : Instagram

ಸೋನು ಗೌಡ- ನೇಹಾ ಗೌಡ

ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿಯರಾದ ಸೋನು ಗೌಡ ಹಾಗೂ ನೇಹಾ ಗೌಡ ಇದೀಗ ಜೊತೆಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಒಂದೇ ಧಾರಾವಾಹಿಯಲ್ಲಿ ಅಲ್ಲ. ಬೇರೆ ಬೇರೆ ವಾಹಿನಿಗಳ, ಎರಡು ವಿಭಿನ್ನ ಧಾರಾವಾಹಿಯಲ್ಲಿ ಅಕ್ಕ-ತಂಗಿ ನಟಿಸುತ್ತಿದ್ದಾರೆ.

Related Articles

Related image1
ಅಜ್ಜಿ ಹೆಸ್ರೂ ಅಲ್ಲ, ಏನೂ ಅಲ್ಲ: ಮಗಳಿಗೆ ಶಾರದಾ ಹೆಸರು ಇಟ್ಟಿರುವ ಹಿಂದಿನ ಕುತೂಹಲ ತೆರೆದಿಟ್ಟ ನಟಿ Neha Gowda
Related image2
ಆ ಹುಡುಗಿ ನನ್ನ ಚಾರಿತ್ರ್ಯವಧೆ ಮಾಡ್ತಿದ್ದಾಳೆ, ಮತ್ತೊಂದಿಷ್ಟು ವಿಡಿಯೋ ವೈರಲ್‌ ಮಾಡ್ತಿದ್ದಾಳೆ: Sonu Gowda ಆರೋಪ
36
ಅಗ್ನಿಸಾಕ್ಷಿಯಲ್ಲಿ ನೇಹಾ ಗೌಡ
Image Credit : our own

ಅಗ್ನಿಸಾಕ್ಷಿಯಲ್ಲಿ ನೇಹಾ ಗೌಡ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಗೊಂಬೆ ಖ್ಯಾತಿಯ ನೇಹಾ ಗೌಡ ಈಗಷ್ಟೇ ಶುರುವಾಗಿರುವ ಹೊಚ್ಚ ಹೊಸ ಧಾರಾವಾಹಿ ಅಗ್ನಿ ಸಾಕ್ಷಿಯಲ್ಲಿ ನಟಿಸಿದ್ದಾರೆ. ಇದೊಂದು ಗೆಸ್ಟ್ ಅಪಿಯರೆನ್ಸ್ ಆಗಿದ್ದು, ಸಾಕ್ಷಿಯ ಮನಸನ್ನು ಬದಲಾಯಿಸಲು ಸ್ಪೂರ್ತಿಯಾಗಿ ಬರುವ ಗೊಂಬೆ ಪಾತ್ರದಲ್ಲಿ ನಟಿಸಿದ್ದಾರೆ.

46
ಶಾರದೆ ಧಾರಾವಾಹಿಯಲ್ಲಿ ಸೋನು ಗೌಡ
Image Credit : Instagram

ಶಾರದೆ ಧಾರಾವಾಹಿಯಲ್ಲಿ ಸೋನು ಗೌಡ

ಇನ್ನು ನಟಿ ಸೋನು ಗೌಡ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶಾರದೆ’ ಧಾರಾವಾಹಿಯಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕೂಡ ಗೆಸ್ಟ್ ಅಪಿಯರೆನ್ಸ್ ಆಗಿದೆ. ಎರಡೂ ಧಾರಾವಾಹಿಗಳು ಒಂದೇ ಸಮಯದಲ್ಲಿ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ.

56
ಚಂದನವನದ ನಟಿ ಸೋನು
Image Credit : our own

ಚಂದನವನದ ನಟಿ ಸೋನು

‘ಇಂತಿ ನಿನ್ನ ಪ್ರೀತಿಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನು ಗೌಡ, ಇಲ್ಲಿವರೆಗೆ ಕನ್ನಡ, ತಮಿಳು, ಮಲಯಾಳಂ ಸೇರಿ ಸುಮಾರು 40 ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸಿಂದ್ಲಿಂಗು2’ ಇವರು ನಟಿಸಿದ ಕೊನೆಯ ಚಿತ್ರ. ಇನ್ನು ಸೋನು ಗೌಡ ಜೀ ಕನ್ನಡದ ಜನಪ್ರಿಯ ‘’ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರದಲ್ಲಿ ಮಿಂಚಿದ್ದರು.

66
ಮಗುವಾದ ಬಳಿಕ ನಟನೆಯಿಂದ ದೂರ
Image Credit : Instagram

ಮಗುವಾದ ಬಳಿಕ ನಟನೆಯಿಂದ ದೂರ

ನೇಹಾ ಗೌಡ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಬಳಿಕ ನಮ್ಮ ಲಚ್ಚಿ ಧಾರಾವಾಹಿ ಹಾಗೂ ತಮಿಳಿನ ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದರು. ಮಗುವಾದ ಬಳಿಕ ನಟನೆಯಿಂದ ದೂರ ಉಳಿದಿದ್ದ ನಟಿ, ಕೆಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಬಹುದಿನಗಳ ಬಳಿಕ ಇದೀಗ ಅಗ್ನಿ ಸಾಕ್ಷಿಯಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೋನು ಗೌಡ
ನೇಹಾ ಗೌಡ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
Latest Videos
Recommended Stories
Recommended image1
Jodi No 1 ಶೋನಲ್ಲಿ ಸಂಸಾರದ ವಿಷ್ಯ ಇಟ್ಕೊಂಡು ಜಗಳ ಆಡಿದ ಗೀತಾ ಭಾರತಿ ಭಟ್ ದಂಪತಿ; ಸಮಾಧಾನ ಮಾಡಿದ ರಾಜೇಶ್ ನಟರಂಗ
Recommended image2
Kwatle Kitchen 2: ನಾಯಿ ಅಂದ್ರೆ ಜಡ್ಜ್​ಗಳು ಎನ್ನೋದಾ ರಕ್ಷಿತಾ ಶೆಟ್ಟಿ? ನಟಿ ಮೇಘನಾ ರಾಜ್​ ಶಾಕ್​
Recommended image3
ಪಾರ್ಟಿ, ಕೇಕ್ ಏನೂ ಇಲ್ಲ… ಅರ್ಥಪೂರ್ಣವಾಗಿ ಆನಿವರ್ಸರಿ ಆಚರಿಸಿಕೊಂಡ ನಟಿ ವೈಷ್ಣವಿ ಗೌಡ
Related Stories
Recommended image1
ಅಜ್ಜಿ ಹೆಸ್ರೂ ಅಲ್ಲ, ಏನೂ ಅಲ್ಲ: ಮಗಳಿಗೆ ಶಾರದಾ ಹೆಸರು ಇಟ್ಟಿರುವ ಹಿಂದಿನ ಕುತೂಹಲ ತೆರೆದಿಟ್ಟ ನಟಿ Neha Gowda
Recommended image2
ಆ ಹುಡುಗಿ ನನ್ನ ಚಾರಿತ್ರ್ಯವಧೆ ಮಾಡ್ತಿದ್ದಾಳೆ, ಮತ್ತೊಂದಿಷ್ಟು ವಿಡಿಯೋ ವೈರಲ್‌ ಮಾಡ್ತಿದ್ದಾಳೆ: Sonu Gowda ಆರೋಪ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved