ಹೊಸ ವರ್ಷಕ್ಕೆ ಮತ್ತೆ ಜೊತೆಯಾದ Shreerastu Shubhamastu ತಂಡ: ವೈಬ್ಸ್ ಹೇಗಿದೆ ನೋಡಿ
ವೀಕ್ಷಕರ ಮನಗೆದ್ದಿದ್ದ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ತಂಡವು ಮತ್ತೆ ಒಂದಾಗಿದೆ. ಸೀರಿಯಲ್ ಮುಕ್ತಾಯಗೊಂಡು ನಾಲ್ಕು ತಿಂಗಳ ನಂತರ, ನಟಿ ಸುಧಾರಾಣಿ ಸೇರಿದಂತೆ ಇಡೀ ತಂಡ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶ್ರೀರಸ್ತು ಶುಭಮಸ್ತು ಸೀರಿಯಲ್
ಮಧ್ಯ ವಯಸ್ಸಿನ ಪ್ರೀತಿ-ಪ್ರೇಮದ ಕಥಾ ಹಂದರ ಹೊಂದಿ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದ್ದ ನಟಿ ಸುಧಾರಾಣಿ ಮತ್ತು ನಟ ಅಜಿತ್ ಹಂದೆ ಅವರ ಶ್ರೀರಸ್ತು ಶುಭಮಸ್ತು ಸೀರಿಯಲ್ (Shreerastu Shubhamastu Serial) ತಂಡ ಮತ್ತೆ ಜೊತೆಯಾಗಿದೆ.
ಹೊಸ ವರ್ಷದ ವೈಬ್ಸ್
ಕಳೆದ ಆಗಸ್ಟ್ 31ರಂದು ಈ ಸೀರಿಯಲ್ ಮುಕ್ತಾಯ ಕಂಡಿದೆ. ಇದೀಗ ನಾಲ್ಕು ತಿಂಗಳ ಬಳಿಕ ಈ ಸೀರಿಯಲ್ ತಂಡ ಮತ್ತೆ ಜೊತೆಯಾಗಿದೆ. ಇದರ ವಿಡಿಯೋ ಅನ್ನು ಈ ಸೀರಿಯಲ್ನಲ್ಲಿ ತುಳಸಿ ಪಾತ್ರ ಮಾಡಿದ್ದ ಹಿರಿಯ ನಟಿ ಸುಧಾರಾಣಿ ಶೇರ್ ಮಾಡಿಕೊಂಡಿದ್ದಾರೆ.
ಹೊಸ ವರ್ಷದ ಶುಭಾಶಯ
ಎಲ್ಲರಿಗೂ ಮುಂಚಿತವಾಗಿಯೇ ಹೊಸ ವರ್ಷ 2026ರ ಶುಭಾಶಯಗಳು ಎಂದು ಬರೆದುಕೊಂಡಿರುವ ನಟಿ, ಇದರಲ್ಲಿ ಸಕತ್ ಆಗಿ ರ್ಯಾಪ್ ಡಾನ್ಸ್ ಮಾಡಿರುವುದನ್ನು ನೋಡಬಹುದು.
ಇಡೀ ತಂಡ
ಇವರ ಜೊತೆಗೆ ಶ್ರೀರಸ್ತು ಶುಭಮಸ್ತುವಿನ ಇಡೀ ತಂಡವೇ ಇದೆ. ನಿಧಿ ಪಾತ್ರಧಾರಿ ಅನನ್ಯಾ ಮೋಹನ್, ಅವಿನಾಶ್ ಪಾತ್ರಧಾರಿ ಅರ್ಫಾ ಶರೀಫ್, ಸಂಧ್ಯಾ ಪಾತ್ರಧಾರಿ ದೀಪಾ ಕಟ್ಟೆ, ದೀಪಾ ಆಗಿದ್ದ ಲಾವಣ್ಯ ಭಾರದ್ವಾಜ್ ಸೇರಿದಂತೆ ಎಲ್ಲಾ ಕಲಾವಿದರನ್ನೂ ಇದರಲ್ಲಿ ನೋಡಬಹುದಾಗಿದೆ.
ಸೀರಿಯಲ್ ಸ್ಟೋರಿ
ಅಂದಹಾಗೆ ಈ ಸೀರಿಯಲ್ ವಿಧವೆ ಮಾಧವ ಮತ್ತು ತುಳಸಿ ಅವರ ಸ್ನೇಹ ಮತ್ತು ಪ್ರೀತಿಯ ಕಥೆಯಾಗಿದ್ದು, ಮರುಮದುವೆಯ ಕಷ್ಟಗಳನ್ನು ನಿಭಾಯಿಸುವುದನ್ನು ತೋರಿಸುತ್ತದೆ. 2022 ರಲ್ಲಿ ಪ್ರಾರಂಭವಾಗಿ 2025 ರ ಆಗಸ್ಟ್ ವರೆಗೆ ಪ್ರಸಾರವಾಯಿತು. ಇದು ಮರಾಠಿ ಸೀರಿಯಲ್ 'ಅಗ್ಗಾಬಾಯಿ ಸಾಸುಬಾಯಿ' ನ ರಿಮೇಕ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

