- Home
- Entertainment
- TV Talk
- ನನಗೆ ಸಿಎಂ ಮಲಗೋ ಜಾಗ ಕೊಟ್ರು, ನನ್ ನಾಯಿ DCM ಜಾಗದಲ್ಲಿ ಮಲಗಿತ್ತು ಎಂದ Bigg Boss ಡಾಗ್ ಸತೀಶ್
ನನಗೆ ಸಿಎಂ ಮಲಗೋ ಜಾಗ ಕೊಟ್ರು, ನನ್ ನಾಯಿ DCM ಜಾಗದಲ್ಲಿ ಮಲಗಿತ್ತು ಎಂದ Bigg Boss ಡಾಗ್ ಸತೀಶ್
ಬಿಗ್ಬಾಸ್ ಖ್ಯಾತಿಯ ಡಾಗ್ ಸತೀಶ್ ಅವರು, ಡಿಸಿಎಂ ಮಲಗುವ ಜಾಗದಲ್ಲಿ ತಮ್ಮ ನಾಯಿ ಮಲಗಿತ್ತು ಮತ್ತು ತಮಗೆ ಸಿಎಂ ಮಲಗುವ ಜಾಗವನ್ನು ನೀಡಲಾಗಿತ್ತು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಅವರು ಹೇಳಿದ್ದೇನು ಕೇಳಿ…

ಬಿಗ್ಬಾಸ್ ಡಾಗ್ ಸತೀಶ್
ಬಿಗ್ಬಾಸ್ ಡಾಗ್ ಸತೀಶ್ (Bigg Boss Dog Satish) ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದರಂತೆ ಹೇಳಿಕೆ ಕೊಡುತ್ತಲೇ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಬಾಯಿ ಬಿಟ್ಟರೆ ಕೋಟಿ ಲೆಕ್ಕದಲ್ಲಿಯೇ ಮಾತನಾಡುವ ಡಾಗ್ ಸತೀಶ್ ಅವರು, ನೀಡುತ್ತಿರುವ ಹೇಳಿಕೆಗಳನ್ನು ಹಲವು ಕಂಟೆಂಟ್ ಕ್ರಿಯೇಟರ್ಗಳು ತಮ್ಮ ಟಿಆರ್ಪಿ ವಸ್ತುವಾಗಿಸಿಕೊಳ್ಳುತ್ತಿದ್ದಾರೆ.
ಸಾಕ್ಷಿ ಕೊಡ್ತೇನೆ
ಡಾಗ್ ಸತೀಶ್ ಅವರು ತಾವು ಹೇಳುವ ಮಾತುಗಳನ್ನು ಜನರು ನಂಬುವುದಿಲ್ಲ ಎನ್ನುವ ಕಾರಣಕ್ಕೆ ಸಾಕ್ಷಿ ಕೊಡುತ್ತೇನೆ, ನನ್ನ ಬಳಿ ಸಾಕ್ಷಿ ಇದೆ, ವಿಡಿಯೋ ಇದೆ ಎನ್ನುವ ಮೂಲಕವೇ ಮಾತು ಆರಂಭಿಸುತ್ತಾರೆ. ಜೊತೆಗೆ ಒಂದಿಷ್ಟು ಹೇಳಿಕೆಗಳಿಗೆ ಸಾಕ್ಷಿ ಒದಗಿಸಿದರೂ, ಜಾಲತಾಣದಲ್ಲಿ ಮಾತ್ರ ಟ್ರೋಲ್ ನಿಂತಿಲ್ಲ.
ಡಿಸಿಎಂ ಮಲಗೋ ಜಾಗದಲ್ಲಿ
ಇದೀಗ ಅವರು, ಆ್ಯಂಕರ್ ವಿಷ್ ಎನ್ನುವ ಇನ್ಸ್ಟಾಗ್ರಾಮ್ಗೆ ನೀಡಿರುವ ಸ್ಟೇಟ್ಮೆಂಟ್ ಮಾತ್ರ ಶಾಕಿಂಗ್ ಆಗಿದೆ. ಅದರಲ್ಲಿ ಅವರು, ನಾನು ಆ ಸ್ಥಳಕ್ಕೆ ಹೋದಾಗ ಸಿಎಂ ಮಲಗೋ ಜಾಗವನ್ನು ನನಗೆ ಕೊಟ್ಟಿದ್ದರು, ಡಿಸಿಎಂ ಮಲಗುವ ಜಾಗದಲ್ಲಿ ನನ್ನ ನಾಯಿ ಮಲಗಿತ್ತು ಎಂದು ಹೇಳಿದ್ದಾರೆ!
ಡಿಸಿ ಮೇಡಂ ನನ್ನ ನೋಡಿ...
ನಾನು ಸಿಂಪಲ್ ಡ್ರೆಸ್ನಲ್ಲಿ ಹೋಗಿದ್ದೆ. ಅಲ್ಲಿಯ ಡಿಸಿ ಮೇಡಮ್ಮು ಬಂದು ನನ್ನ ನಾಯಿ ನೋಡಿದರು. ನಾಯಿಯ ಜೊತೆಗೆ ಒಂದು ಫೋಟೋ ಬೇಕು ಅಂದೆ. ಆದರೆ ನಾಯಿಯನ್ನು ನೋಡಿದ ಮೇಡಂ ಥೂ ಎಂದರು. ಆಮೇಲೆ ನಾನು ಆ ನಾಯಿ 20 ಕೋಟಿಯದ್ದು ಎಂದೆ ಎನ್ನುತ್ತಲೇ ಮುಂದಾಗಿರುವುದನ್ನು ರೋಚಕವಾಗಿ ವಿವರಿಸಿದ್ದಾರೆ ಸತೀಶ್.
ಮಾಲೀಕರೇ ಬೇಕು ಎಂದರು!
ನನ್ನ ನಾಯಿಯ ಬೆಲೆ ಕೇಳಿದ ಬಳಿಕ ಆ ಮೇಡಂ, ನನಗೆ ನಾಯಿ ಬೇಡ, ಅದರ ಮಾಲೀಕ ಬೇಕು ಎಂದು ನನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು ಎಂದು ಹೇಳಿದ್ದಾರೆ!
ಚಿತ್ರ-ವಿಚಿತ್ರ ಹೇಳಿಕೆ
ಒಟ್ಟಿನಲ್ಲಿ ದಿನಕ್ಕೊಂದರಂತೆ ಕಂಡಕಂಡಲ್ಲಿ ಚಿತ್ರ-ವಿಚಿತ್ರ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರದಲ್ಲಿ ಇರಬೇಕು ಎಂದು ಅಂದುಕೊಂಡಂತೆ ಕಾಣುತ್ತಿದೆ ಡಾಗ್ ಸತೀಶ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

