ಸ್ವರ್ಗದಲ್ಲಿ ತೇಲಾಡಿದ ಸುಬ್ರಮಣ್ಯ; ಫೋಟೋಗಳಲ್ಲಿ ನೋಡಿ
ನಟ ಅಮೋಘ ಆದಿತ್ಯ ಅವರು ಮಲೆನಾಡಿನ ಪ್ರವಾಸದಲ್ಲಿ ತಮ್ಮ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹುಲಿಕಲ್ ಘಾಟಿಯ ಸೌಂದರ್ಯವನ್ನು 'ಸ್ವರ್ಗ' ಎಂದು ವರ್ಣಿಸಿದ್ದಾರೆ. ಅಭಿಮಾನಿಗಳು ಅವರ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರಾವಣಿ ಸುಬ್ರಮಣ್ಯ ಖ್ಯಾತಿಯ ನಟ ಅಮೋಘ ಆದಿತ್ಯ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಾನು ಸ್ವರ್ಗದಲ್ಲಿದ್ದೇನೆ ಎಂದು ಸುಬ್ಬು ಹೇಳಿಕೊಂಡಿದ್ದಾರೆ.
ಮಲೆನಾಡು ಭಾಗಕ್ಕೆ ಭೇಟಿ ನೀಡಿರುವ ಅಮೋಘ ಆದಿತ್ಯ, ಅಲ್ಲಿಯ ನೈಸರ್ಗಿಕ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡು ಹಲವು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋಗಳಿಗೆ ಲೈಕ್ಸ್ ಮತ್ತು ಚೆಂದದ ಕಮೆಂಟ್ ಮಾಡಿದ್ದಾರೆ.
ವಿಡಿಯೋವೊಂದರಲ್ಲಿ ತಾವು ಹುಲಿಕಲ್ ಘಾಟಿಯಲ್ಲಿರೋದಾಗಿ ಅಮೋಘ್ ತಿಳಿಸಿದ್ದಾರೆ. ಮಳೆ, ಚಳಿ ಮತ್ತು ಮೋಡಗಳ ಮಧ್ಯೆ ನಾನಿದ್ದೇನೆ ಎಂದಿರುವ ಸುಬ್ಬು, ಸ್ವರ್ಗ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸೋಲೋ ಟ್ರಿಪ್ ಮಾಡುತ್ತಿರೋದಾಗಿ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸುಬ್ಬು ಫೋಟೋಗಳಿಗೆ ಕಮೆಂಟ್ ಮಾಡಿರುವ ನೆಟ್ಟಿಗರು, ನಿಮ್ಮ ಅಭಿನಯ ತುಂಬಾ ಖುಷಿ ಆಗುತ್ತೆ ಗುರುಗಳೇ ನಿಮ್ಮ ಕಟ್ಟಾ ಅಭಿಮಾನಿ ಆಗ್ಬಿಟ್ಟಿದ್ದೇನೆ. ಈ ಪ್ಲೇಸ್ ಬ್ರೋ ಸ್ವರ್ಗ, ವಾತಾವರಣ ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಧಾರಾವಾಹಿ ಕಥೆ!
ಮದುವೆ ಆಗಿದ್ದಾಗಿನಿಂದ ವೀರೇಂದ್ರ ಸರ್ ದೇಸಾಯಿ ಮತ್ತು ಸುಬ್ಬು ನಡುವೆ ಅಂತರವುಂಟಾಗಿತ್ತು. ಮದನ್ ಮಾಡಿದ ಕೆಲಸದಿಂದಾಗಿ ವೀರೇಂದ್ರ ಮತ್ತು ಸುಬ್ಬು ಮತ್ತೆ ಒಂದಾಗಿದ್ದಾರೆ. ಇಷ್ಟು ದಿನ ಮಿನಿಸ್ಟರ್ ಮನೆಯಲ್ಲಿದ್ದ ಸುಬ್ಬು ಕುಟುಂಬಸ್ಥರು ಹಿಂದಿರುಗಿದ್ದಾರೆ.
ಮನೆಗೆ ಬಂದಿರುವ ವಿಜಯಾಂಬಿಕೆ ಯಾಕೆ ನಿಮ್ಮನ್ನು ಇಷ್ಟು ದ್ವೇಷ ಮಾಡ್ತಾರೆ ಎಂದು ಕೇಳಿದ್ದಾನೆ. ಇದಕ್ಕೆ ಶ್ರಾವಣಿ ಸಹ ಕಾರಣ ಗೊತ್ತಿಲ್ಲವಲ್ಲ. ಆದ್ರೆ ಸಾಲಿಗ್ರಾಮಕ್ಕೂ ಮತ್ತು ವಿಜಯಾಂಬಿಕೆಗೂ ಲಿಂಕ್ ಇದೆ. ತನ್ನ ಕೊರಳಲ್ಲಿರುವ ತಾಳಿ ಸಹ ತನ್ನ ಅಮ್ಮನದ್ದು ಎಂಬ ವಿಷಯವನ್ನು ಸುಬ್ಬು ಮುಂದೆ ಶ್ರಾವಣಿ ಹೇಳಿದ್ದಾಳೆ.