- Home
- Entertainment
- TV Talk
- Gagan Chinnappa: 5 ಕಾರ್ ಪಾರ್ಕಿಂಗ್‌ಗೆ 15000 ರೂ. ಕಟ್ತಿದ್ದೆ: ಶೋಕಿ ಜೀವನಕ್ಕೆ Seetha Rama Serial ಗಗನ್ ಚಿನ್ನಪ್ಪ ಬ್ರೇಕ್
Gagan Chinnappa: 5 ಕಾರ್ ಪಾರ್ಕಿಂಗ್‌ಗೆ 15000 ರೂ. ಕಟ್ತಿದ್ದೆ: ಶೋಕಿ ಜೀವನಕ್ಕೆ Seetha Rama Serial ಗಗನ್ ಚಿನ್ನಪ್ಪ ಬ್ರೇಕ್
ʼಸೀತಾರಾಮʼ ಧಾರಾವಾಹಿ ಮುಕ್ತಾಯ ಆಗಿದ್ದು, ರಾಮ್ ಪಾತ್ರಧಾರಿ ನಟ ಗಗನ್ ಚಿನ್ನಪ್ಪ ಅವರು ಮಾಧ್ಯಮವೊಂದರ ಜೊತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
- FB
- TW
- Linkdin
Follow Us
)
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಗಗನ್ ಅವರು ನಟನೆ ಮೇಲಿನ ಒಲವಿನಿಂದ ಲಕ್ಷ ಲಕ್ಷ ಹಣ ಗಳಿಸುತ್ತಿದ್ದ ಕೆಲಸಕ್ಕೆ ಗುಡ್‌ಬೈ ಹೇಳಿದ್ದರು. ಆದರೆ ಒಂದು ಕಾಲದಲ್ಲಿ ಅವರು ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿದ್ದರಂತೆ.
FDFS ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಗಗನ್ ಚಿನ್ನಪ್ಪ, “ಸೀತಾರಾಮ ಧಾರಾವಾಹಿಯಲ್ಲಿ ನಟಿಸುವಾಗಲೇ ಐದು-ಆರು ಕಾರ್ ತಗೊಂಡೆ. ಈಗ ಎಲ್ಲ ಮಾರಿ ಎರಡು ಕಾರ್‌ಇಟ್ಟುಕೊಂಡಿದೀನಿ. ಜಿಪ್ಸಿ, ಆಡಿಕ ಕ್ಯಾಮ್ರಿ ಕಾರ್ ಮಾರಿದ್ದೇನೆ. ಪಾರ್ಕಿಂಗ್‌ಗೆ ತಿಂಗಳಿಗೆ 15 ಸಾವಿರ ರೂಪಾಯಿಗೆ ಕಟ್ಟುತ್ತಿದ್ದೆ. ಈ ರೀತಿ ದುಡ್ಡು ಖರ್ಚು ಮಾಡೋದು ಸಾಕು ಅಂತ ಮಾರಿದೆ” ಎಂದಿದ್ದಾರೆ.
“ಕೂರ್ಗ್‌ನಲ್ಲಿ ಒಂದು ಸೈಟ್ ಖರೀದಿ ಮಾಡಿದ್ದೆ, ಅಲ್ಲಿ ಈಗ ಮನೆ ಕಟ್ಟುತ್ತಿದ್ದೇನೆ. ಅಪ್ಪ-ಅಮ್ಮ ಕೊಡಗಿನಲ್ಲಿದ್ದಾರೆ. ಅಕ್ಕ ಮುಂಬೈನಲ್ಲಿ ಸೆಟಲ್ ಆಗಿದ್ದಾಳೆ. ಸೆಕೆಂಡ್ ಪಿಯುಸಿಯಲ್ಲಿದ್ದಾಗಿನಿಂದ ನಾನು ಮನೆಯಿಂದ ಹೊರಗಡೆ ಇದ್ದೇನೆ. ನಾನು ಒಳ್ಳೆಯ ಸಂಬಳ ಪಡೆದು, ಕೆಲಸ ಬಿಟ್ಟಾಗ ನನ್ನ ಪಾಲಕರು ತಲೆಕೆಡಿಸಿಕೊಂಡಿದ್ದರು. ಎಲ್ಲ ಪಾಲಕರಿಗೂ ಈ ರೀತಿ ಆಗುತ್ತದೆ” ಎಂದು ಹೇಳಿದ್ದಾರೆ.
"ನಾನು ಕರಿಯರ್ ಮೇಲೆ ತುಂಬ ಗಮನ ಕೊಡುತ್ತಿದ್ದೆ. ನನ್ನ ಜೀವನ ಹೀಗೆ ಇರಬೇಕು ಅಂತ ಇತ್ತು. ಅದಕ್ಕಾಗಿ ನಾನು ಶ್ರಮ ಹಾಕಿದ್ದೇನೆ. ಮುಂದೆಯೂ ಹಾಕುವೆ” ಎಂದು ಗಗನ್ ಹೇಳಿದ್ದಾರೆ.
“ಸೀತಾರಾಮ ನನಗೆ ತುಂಬ ಕೊಟ್ಟಿದೆ. ನನ್ನ ಧಾರಾವಾಹಿ ನೋಡಿ ತಾಯಿ ತುಂಬ ಖುಷಿಪಟ್ಟಿದ್ದರು. ಕೊಡಗಿನಲ್ಲಿ ನನ್ನ ಅಪ್ಪ ಎಲ್ಲೇ ಹೋದರೂ ಗಗನ್‌ತಂದೆ ಅಂತ ಎಲ್ಲರೂ ಹೇಳುತ್ತಿರುತ್ತಾರೆ. ನನ್ನಿಂದ ನೀನು ಅಂತ ಅಪ್ಪ ರೇಗಿಸ್ತಾರೆ” ಎಂದು ಗಗನ್ ಹೇಳಿದ್ದಾರೆ.