Seetha Rama Serial ಭಾಗ 2 ಬರಲಿದೆಯಾ? ವಾಹಿನಿ ಕೊಟ್ಟ ಸುಳಿವು ಏನು?
ಸೀತಾರಾಮʼ ಧಾರಾವಾಹಿ ತನ್ನ ಪ್ರೀತಿಯ ಪ್ರೇಕ್ಷಕರಿಗೆ ಸಿಹಿಯ ವಿದಾಯ ಹೇಳಿದೆ. ಈ ವೇಳೆ ʼಸೀತಾರಾಮ 2’ ಬರಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

ಜೀ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ, “ಪ್ರಿಯರೇ, ನಮ್ಮ, ನಿಮ್ಮ ನಡುವೆ ಸಿಹಿ ಸೇತುವೆ ಕಟ್ಟಿದ ಸೀತಾರಾಮ ಧಾರಾವಾಹಿಗೆ ವಿದಾಯ ಹೇಳುವ ಸಮಯ ಬಂದಿದೆ. ಎರಡು ವರ್ಷಗಳ ಹಿಂದೆ ಪ್ರಸಾರ ಆರಂಭಿಸುವ ಮುನ್ನವೇ ನಿಮ್ಮ ಪ್ರೀತಿ ಗಳಿಸಿದ ಸೀತಾರಾಮ ಇಂದಿಗೂ ಕನ್ನಡಿಗರ ನೆಚ್ಚಿನ ಕಥೆಗಳಲ್ಲೊಂದು ಎಂಬ ಹೆಮ್ಮೆ ನಮಗಿದೆ” ಎಂದು ಹೇಳಿದೆ.
“ಸಿಹಿಯೊಂದಿಗೆ ನೀವೂ ಮಗುವಾಗಿದ್ದೀರಿ. ನಮ್ಮೊಂದಿಗೆ ನಕ್ಕಿದ್ದೀರಿ, ಅತ್ತಿದ್ದೀರಿ, ಎಡವಿದಾಗ ಮುದ್ದಾದ ಗದರಿ ಮತ್ತೆ ಜೊತೆ ನಡೆದಿದ್ದೀರಿ. ಪ್ರತಿಯೊಂದು ಅಂತ್ಯವೂ ಹೊಸ ಆರಂಭಕ್ಕೆ ಮುನ್ನುಡಿ ಎಂಬ ಮಾತಿದೆ. ನಾವು ಕೂಡ ಹೊಸ ರೂಪದಲ್ಲಿ, ಹೊಸ ಕಥೆಯೊಂದಿಗೆ ಮತ್ತೆ ನಿಮ್ಮೆದುರು ಬರಲು ಕಾತರರಾಗಿದ್ದೇವೆ. ಸೀತಾರಾಮ ಕುಟುಂಬದ ಪ್ರತಿಯೊಬ್ಬ ಕಲಾವಿದರಿಗೂ, ತಂತ್ರಜ್ಞರಿಗೂ ನಿಮಗೂ ಸಿಹಿಯಾದ ಕೃತಜ್ಞತೆಗಳು” ಎಂದು ಹೇಳಿದೆ.
“ಮತ್ತೆ ಸಿಗೋಣ, ಧನ್ಯವಾದಗಳು ನಿಮ್ಮ ಅಭಿಮಾನವೇ ನಮಗೆ ಪ್ರೀತಿಯ ಇಂಧನ, ಸದಾ ಹೀಗೇ ಇರಲಿ ನಮ್ಮ ಭಾವ ಬಂಧನ! ನವಿರಾದ ಕಥೆಗೆ ಸಿಹಿಯಾದ ವಿದಾಯ..ಮತ್ತೆ ಭೇಟಿಯಾಗೋಣ ಹೊಸ ರೂಪದಲ್ಲಿ!” ಎಂದು ವಾಹಿನಿಯು ಹೇಳಿದ್ದಕ್ಕೆ ‘ಸೀತಾರಾಮ 2’ ಬರಬಹುದಾ ಎಂಬ ಪ್ರಶ್ನೆ ಎದ್ದಿದೆ.
ʼಸೀತಾರಾಮʼ ಧಾರಾವಾಹಿಯಲ್ಲಿ ಸಿಹಿ-ಶ್ರೀರಾಮ್-ಸೀತಾ ಕಥೆಯೇ ಇದರ ಜೀವಾಳವಾಗಿತ್ತು. ಈಗ ʼಸೀತಾರಾಮʼ ಧಾರಾವಾಹಿ 2 ಯಾವಾಗ ಬರೋದು ನಿಜಾನಾ? ಬಂದ್ರೂ ಯಾವಾಗ ಬರತ್ತೆ ಎಂಬ ಕುತೂಹಲ ಶುರುವಾಗಿದೆ.
ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಎನ್ನುವವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಧಾರಾವಾಹಿ ಮುಗಿಯುತ್ತಿದ್ದಂತೆ ಅವರು ಮದುವೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನು ನಟ ಗಗನ್ ಚಿನ್ನಪ್ಪ ಅವರು ಯಾವ ಧಾರಾವಾಹಿ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ. ಪೂಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್, ಜಯದೇವ್ ಮೋಹನ್ ಮುಂತಾದವರು ಕೂಡ ಈ ಧಾರಾವಾಹಿಯಲ್ಲಿ ನಟಿಸಿದ್ದರು.