ಉದಯ ಟಿವಿಯ ಹೊಸ ಧಾರಾವಾಹಿಗಳಲ್ಲಿ ಮಿಂಚಲಿದ್ದಾರೆ ಕಲರ್ಸ್ ಕನ್ನಡದ ನಾಯಕಿಯರು
Sun Udaya Serials: ಉದಯ ಟಿವಿ ಇದಿಗ ಸನ್ ಉದಯ ಎಂದು ಬದಲಾಗಿದ್ದು, ಜೊತೆಗೆ ಹೊಸ ಹೊಸ ಧಾರಾವಾಹಿಗಳ ಮೂಲಕ ಸದ್ದು ಮಾಡಲು ತಯಾರಿ ನಡೆಸಿದೆ. ಕಲರ್ಸ್ ಕನ್ನಡದಲ್ಲಿ ಮಿಂಚಿದ್ದ ನಾಯಕಿಯರೆಲ್ಲಾ ಇದೀಗ ಉದಯ ಟಿವಿಯ ಮೂಲಕ ದೊಡ್ಡದಾಗಿ ಕಂ ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ.

ಸನ್ ಉದಯ
ಇತ್ತೀಚೆಗಷ್ಟೇ ಉದಯ ಟಿವಿಯ ಹೆಸರು ಸನ್ ಉದಯ ಎಂದು ಬದಲಾಗಿತ್ತು. ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಉದಯ ಟಿವಿ ಹೊಸ ಕಥೆಗಳೊಂದಿಗೆ ಶೀಘ್ರದಲ್ಲೇ ಬರಲಿದೆ. ಅದರಲ್ಲೂ ಸ್ಟಾರ್ ನಾಯಕಿಯರೆಲ್ಲಾ ಉದಯ ಟಿವಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಸನ್ ಉದಯದಲ್ಲಿ ಕಲರ್ಸ್ ಕನ್ನಡದ ನಾಯಕಿಯರು
ಇನ್ನು ಕಲರ್ಸ್ ಕನ್ನಡದಲ್ಲಿ ಒಂದು ಕಾಲದಲ್ಲಿ ಮಿಂಚಿದ ನಾಯಕಿಯರು ಇದೀಗ ಸನ್ ಉದಯದಲ್ಲಿ ನಾಯಕಿಯರಾಗಿ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ಯಾವೆಲ್ಲಾ ನಟಿಯರು ಇದೀಗ ಸನ್ ಉದಯ ಮೂಲಕ ಕಿರುತೆರೆಗೆ ಗ್ರಾಂಡ್ ರೀ ಎಂಟ್ರಿ ಕೊಡುತ್ತಾರೆ ಅನ್ನೋದನ್ನು ನೋಡೋಣ.
ಲಕ್ಷ್ಮೀ ಬಾರಮ್ಮ ಖ್ಯಾತಿಯ ಕೀರ್ತಿ/ ತನ್ವಿ ರಾವ್
ಕಲರ್ಸ್ ಕನ್ನಡಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದ ಮೂಲಕ ಕನ್ನಡಿಗರ ಮನವನ್ನೇ ಗೆದ್ದಿದ್ದ ನಟಿ ತನ್ವಿ ರಾವ್, ಇದೀಗ ಸನ್ ಉದಯದಲ್ಲಿ ‘ಭಾಗ್ಯವಂತರು’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪ್ರೊಮೊ ಬಿಡುಗಡೆಯಾಗಿದ್ದು, ಸಖತ್ ಆಗಿ ಸೌಂಡ್ ಮಾಡ್ತಿದೆ.
ಭಾಗ್ಯವಂತರು
ಸುಚೇಂದ್ರ ಪ್ರಸಾದ್ ತಂದೆಯಾಗಿ ನಟಿಸಿರುವ ಹಾಗೂ ತನ್ವಿ ರಾವ್ ಮಗಳು ಜನನಿಯಾಗಿ ನಟಿಸಿರುವ ಧಾರಾವಾಹಿ ಇದು. ತಂದೆ ಪಟ್ಟ ಕಷ್ಟಕ್ಕೆ ಅರ್ಥ ಕೊಡಲು ರೆಡಿಯಾಗಿರುವ ಮಗಳ ಕಥೆ ಭಾಗ್ಯವಂತರು. ಇದು ತಂದೆ-ಮಗಳ ಬಾಂಡಿಂಗ್ ಕಥೆಯಾಗಿದ್ದು, ಶೀಘ್ರದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಶ್ರೀ ಗೌರಿ ಖ್ಯಾತಿಯ ಅಮೂಲ್ಯಾ ಓಂಕಾರ್
ಇನ್ನು ಕಮಲಿ ಹಾಗೂ ಶ್ರೀ ಗೌರಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಅಮೂಲ್ಯ ಓಂಕಾರ್ ಅವರು ಇದೀಗ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ. ಇದು ಮಹಾಲಕ್ಷ್ಮೀಯ ಮದುವೆಯ ಕಥೆಯಾಗಿದ್ದು, ಮದುವೆಯಾದ ಮೇಲೂ ತಾನು ದುಡಿದ ಹಣವನ್ನು ತವರು ಮನೆಗೆ ಕೊಡುವ ಕಂಡೀಶನ್ ಹಾಕಿ ಮದುವೆಯಾಗುತ್ತಿರುವ ಹುಡುಗಿಯ ಕಥೆ ಇದಾಗಿದೆ.
ವೈಷ್ಣವಿ ಗೌಡ ಕೂಡ ಸನ್ ಉದಯದಲ್ಲಿ ನಟಿಸ್ತಾರ?
ಹೀಗೆ ಕಲರ್ಸ್ ಕನ್ನಡದ ಇಬ್ಬರು ನಟಿಯರ ಪ್ರೊಮೋ ರಿಲೀಸ್ ಆಗಿದ್ದು, ಜನರು ಪ್ರೊಮೊ ಇಷ್ಟಪಟ್ಟಿದ್ದಾರೆ. ಇನ್ನು ಶೀಘ್ರದಲ್ಲಿ ‘ಅಗ್ನಿ ಸಾಕ್ಷಿ’ ಮತ್ತು ‘ಸೀತಾ ರಾಮ’ ಖ್ಯಾತಿಯ ವೈಷ್ಣವಿ ಗೌಡ ಸಹ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದು ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

