MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಈ ಹೆಂಗಸ್ರು ಯಾಕೆ ಹೀಗೆ ಅಂತಾನೆ ಅರ್ಥ ಆಗಲ್ಲ: Nanda Gokula ಪ್ರಿಯಾ ಭಾರಿ ಅಸಮಾಧಾನ

ಈ ಹೆಂಗಸ್ರು ಯಾಕೆ ಹೀಗೆ ಅಂತಾನೆ ಅರ್ಥ ಆಗಲ್ಲ: Nanda Gokula ಪ್ರಿಯಾ ಭಾರಿ ಅಸಮಾಧಾನ

'ನಂದಗೋಕುಲ' ಧಾರಾವಾಹಿಯ ಖಳನಾಯಕಿ ಪ್ರಿಯಾ ಪಾತ್ರಧಾರಿ ಅರ್ಪಿತಾ ಗೌಡ, ತಮ್ಮ ಪಾತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ನಕಾರಾತ್ಮಕ ಕಮೆಂಟ್‌ಗಳ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರೇ ತಮ್ಮನ್ನು ಕೆಟ್ಟದಾಗಿ ನಿಂದಿಸುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

2 Min read
Author : Suchethana D
Published : May 02 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
16
ನೆಗೆಟಿವ್​ ಕಮೆಂಟ್ಸ್​ ಬಗ್ಗೆ
Image Credit : arpitha gowda instagam

ನೆಗೆಟಿವ್​ ಕಮೆಂಟ್ಸ್​ ಬಗ್ಗೆ

ಸೀರಿಯಲ್​ ಪಾತ್ರಧಾರಿಗಳಿಗೆ ವಿಭಿನ್ನ ರೀತಿಯ ಕಮೆಂಟ್ಸ್​ ತುಂಬಾ ಕಾಮನ್​. ಅದು ನೆಗೆಟಿವ್​ ಶೇಡ್​ನ ಪಾತ್ರಗಳಲ್ಲಿ ನಟಿಸುತ್ತಿದ್ದರೆ ಅದಕ್ಕೆ ಬರುವಷ್ಟು ನೆಗೆಟಿವ್​ ಕಮೆಂಟ್ಸ್​ಗಳಿಂದ ಕೆಲವು ನಟಿಯರು ತುಂಬಾ ನೋವು ಅನುಭವಿಸುವುದು ಇದೆ. ಸೀರಿಯಲ್​ಗಳಲ್ಲಿ ಬರುವ ಪಾತ್ರ ಕೇವಲ ಒಂದು ಪಾತ್ರ ಎಂದು ನೋಡದೇ,ಕೆಲವೊಮ್ಮೆ ಆ ಪಾತ್ರದ ಮೂಲಕ ವೈಯಕ್ತಿಕವಾಗಿಯೂ ಕೀಳು ಮಟ್ಟದ ಭಾಷೆ ಪ್ರಯೋಗಿಸಿ ಕಮೆಂಟ್​ ಮಾಡುವವರು ಇದ್ದಾರೆ. ಇದರ ಬಗ್ಗೆ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನಂದಗೋಕುಲ' ಸೀರಿಯಲ್​ ವಿಲನ್​ ಪ್ರಿಯಾ ಮಾತನಾಡಿದ್ದಾರೆ.

26
ನೋವು ತೋಡಿಕೊಂಡ ನಟಿ
Image Credit : arpitha gowda instagam

ನೋವು ತೋಡಿಕೊಂಡ ನಟಿ

ಈ ಸೀರಿಯಲ್​ನಲ್ಲಿ ಸೊಸೆಯ ಪಾತ್ರದಲ್ಲಿ ನಟಿಸ್ತಿರೋ ನಟಿಯ ಹೆಸರು ಅರ್ಪಿತಾ ಗೌಡ. araginientertainment ಚಾನೆಲ್​ ಜೊತೆ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಹಂಚಿಕೊಂಡಿರುವ ನಟಿ, ತಮಗೆ ಬರ್ತಿರೋ ನೆಗೆಟಿವ್​ ಕಮೆಂಟ್ಸ್​ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅತ್ಯಂತ ಕೆಟ್ಟದ್ದಾಗಿ ಕಮೆಂಟ್ಸ್​ ಮಾಡುವವರ ಪೈಕಿ ಹೆಣ್ಣುಮಕ್ಕಳೇ ಹೆಚ್ಚಿನವರು. ಇವರು ಏಕೆ ಹೀಗೆ ಎಂದು ನನಗೆ ಗೊತ್ತಾಗ್ತಿಲ್ಲ. ತುಂಬಾ ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ. ಅವರಿಗೆ ನಮ್ಮನ್ನು ಕಂಡ್ರೆ ಯಾಕೆ ಹೀಗೆ ಎನ್ನೋದೇ ಗೊತ್ತಾಗುವುದಿಲ್ಲ ಎಂದಿದ್ದಾರೆ.

Related Articles

Related image1
ಯಾಸ್ಮಿನ್​ ಆಗಿ ಬುರ್ಖಾದಲ್ಲಿ ಕಾಣಿಸಿಕೊಂಡ ಖ್ಯಾತ ಬಹುಭಾಷಾ ನಟಿ! ಮತಾಂತರದ ಬಗ್ಗೆ ಹೇಳಿದ್ದೇನು?
Related image2
ಅನುಷ್ಕಾ ಶರ್ಮಾ@38: ನಡುಗುತ್ತಲೇ ಲವ್​ ಮಾಡಿದ್ದ ಕೊಹ್ಲಿ- ಸಿನಿಮಾ ಮೀರಿಸೋ ಲವ್​ಸ್ಟೋರಿ ಕೇಳಿ
36
ಅವರಿಗಾದ್ರೆ ಒಂದು, ನಮಗಾದ್ರೆ ಇನ್ನೊಂದು...
Image Credit : arpitha gowda instagam

ಅವರಿಗಾದ್ರೆ ಒಂದು, ನಮಗಾದ್ರೆ ಇನ್ನೊಂದು...

ಸೀರಿಯಲ್​ಗಳಲ್ಲಿ ಯಾವುದೇ ಅಸಭ್ಯ ಬಟ್ಟೆ ಹಾಕದೇ, ನೀಟಾಗಿ ಇದ್ರೂ ಕೆಟ್ಟ ಕೆಟ್ಟ ಕಮೆಂಟ್ಸ್​ ಮಾಡ್ತಾರೆ. ಆದರೆ ಅರೆಬರೆ ಡ್ರೆಸ್​ ಹಾಕಿಕೊಂಡು, ಹೇಗೇಗೋ ಕಾಣಿಸಿಕೊಳ್ಳುವವರು ಮುಂದೆ ಯಾವಾಗ ವಿಡಿಯೋ ಹಾಕ್ತಾರೆ ಎಂದು ಕಾಯುತ್ತಾ ಕುಳಿತಿರುತ್ತಾರೆ. ಆದರೆ ನಮ್ಮಂಥವರಿಗೆ ಮಾತ್ರ ಕೆಟ್ಟದ್ದಾಗಿ ಕಮೆಂಟ್​ ಹಾಕೋದು, ಅದೂ ಹೆಚ್ಚಾಗಿ ಮಹಿಳೆಯರೇ ಅನ್ನೋದು ತುಂಬಾ ನೋವಿನ ಸಂಗತಿ ಎಂದಿದ್ದಾರೆ.

46
ಏನಿದು ಪ್ರಿಯಾ ಪಾತ್ರ
Image Credit : arpitha gowda instagram

ಏನಿದು ಪ್ರಿಯಾ ಪಾತ್ರ

ಅಂದಹಾಗೆ ಈ ಸೀರಿಯಲ್​ನಲ್ಲಿ ಪ್ರಿಯಾಳದು ತುಂಬಾ 'ಪೋಸೆಸಿವ್' ಆದ ಹಾಗೂ ಸ್ವಾರ್ಥದ ಸ್ವಭಾವ. ಅತ್ತೆ-ಮಾವ ಮತ್ತು ಮನೆಯ ಎಲ್ಲರ ಪ್ರೀತಿ ತನಗೆ ಮಾತ್ರ ಸಿಗಬೇಕು ಎಂದು ಬಯಸುವ ಆಕೆಯ ವರ್ತನೆಯಿಂದ ಮನೆಯಲ್ಲಿ ಆಗಾಗ ಕಲಹಗಳು ಏರ್ಪಡುತ್ತವೆ.

56
ಸಿನಿಮಾದಲ್ಲಿ ನಟನೆ
Image Credit : arpitha gowda instagram

ಸಿನಿಮಾದಲ್ಲಿ ನಟನೆ

ಅಂದಹಾಗೆ ನಟಿ ಅರ್ಪಿತಾ ಗೌಡ ಶಿವಮೊಗ್ಗದವರು. ರಮ್ಯಾ ಅವರು ನಾಯಕಿ ಆಗಿರುವ ‘ನಾಗರಹಾವು’ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಆ ಸಿನಿಮಾದಲ್ಲಿ ನಾಗದೇವತೆ ಪಾತ್ರಕ್ಕೆ ಹುಡುಗಿ ಹುಡುಕುತ್ತಿದ್ದರು. ಅವರಿಗೆ ಒಂದು ಇಮ್ಯಾಜಿನೇಷನ್​ ಇತ್ತು. ಆದ್ರೆ ಯಾವ ಹುಡುಗಿನೂ ಸೂಟ್​ ಆಗಲಿಲ್ಲ. ನನ್ನ ಪರಿಚಯದವರೊಬ್ಬರು ನನ್ನನ್ನು ಕರೆಸಿದ್ದರು. ಸುಮ್ಮನೇ ಹೋಗಿದ್ದೆ, ಸೆಲೆಕ್ಟ್​ ಆಗಿಬಿಟ್ಟೆ ಎಂದು ಈ ಹಿಂದೆ ನಟಿ ನೆನಪಿಸಿಕೊಂಡಿದ್ದರು.

66
ಕುಟುಂಬದ ಹಿನ್ನೆಲೆ
Image Credit : arpitha gowda instagram

ಕುಟುಂಬದ ಹಿನ್ನೆಲೆ

ಅಂದಹಾಗೆ ಅರ್ಪಿತಾ ಅವರಿಗೆ ಮದುವೆಯಾಗಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ. ಮದುವೆಯಾದ ಮೇಲೆ ಬಣ್ಣದ ಲೋಕ ಬೇಡ ಅಂದುಕೊಂಡಿದ್ರಂತೆ. ಆದರೆ ಪತಿಯ ಸಪೋರ್ಟ್​ನಿಂದ ಇಲ್ಲಿಯವರೆಗೂ ಬಂದೆ ಎಂದಿದ್ದಾರೆ ನಟಿ. ಆಗ ‘ಸತ್ಯ’ ಧಾರಾವಾಹಿಯಿಂದ ಕಾಲ್ ಬಂದು ಅಲ್ಲಿ ನಟಿಸಿದ್ದರು. ಅದಾದ ಬಳಿಕ ನೂರು ಜನ್ಮಕ್ಕೂ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಸಂಬಂಧಗಳು

Latest Videos
Recommended Stories
Recommended image1
ಒಟಿಟಿಗೆ ಬಂದ ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌ರ Love Mocktail 3 Movie; ಯಾವಾಗ ರಿಲೀಸ್?‌
Recommended image2
Annayya Serial: ಮಾಡಬಾರದ್‌ ಮಾಡೋಕೆ ಹೋಗಿ ಚಟ್ನಿಪುಡಿ ಆದ ಜಿಮ್‌ ಸೀನ; ರೌದ್ರಾವತಾರ ತಾಳಿದ ಮಾರಿಗುಡಿ ಶಿವು
Recommended image3
Amruthadhaare Serial: ಮುಗೀತು ಜಯದೇವ್‌ ಅಧ್ಯಾಯ; ಹೆತ್ತ ತಾಯಿಗೆ ಕಣ್ಣೀರು ಹಾಕಿಸಿದೋರು ಉಳಿದ ಚರಿತ್ರೆ ಇದ್ಯಾ?
Related Stories
Recommended image1
ಯಾಸ್ಮಿನ್​ ಆಗಿ ಬುರ್ಖಾದಲ್ಲಿ ಕಾಣಿಸಿಕೊಂಡ ಖ್ಯಾತ ಬಹುಭಾಷಾ ನಟಿ! ಮತಾಂತರದ ಬಗ್ಗೆ ಹೇಳಿದ್ದೇನು?
Recommended image2
ಅನುಷ್ಕಾ ಶರ್ಮಾ@38: ನಡುಗುತ್ತಲೇ ಲವ್​ ಮಾಡಿದ್ದ ಕೊಹ್ಲಿ- ಸಿನಿಮಾ ಮೀರಿಸೋ ಲವ್​ಸ್ಟೋರಿ ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved