Kannada

ಮೂಗುತಿ ಮಲ್ಲಿ

ಉದಯ ಟಿವಿಯಲ್ಲಿ ಇತ್ತೀಚೆಗಷ್ಟೇ ಶುರುವಾದ ಹೊಚ್ಚ ಹೊಸ ಸೀರಿಯಲ್ ಮೂಗುತಿ ಮಲ್ಲಿ. ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿತ್ತು, ವೀಕ್ಷಕರು ಧಾರಾವಾಹಿ ಇಷ್ಟಪಟ್ಟಿದ್ದಾರೆ.

Kannada

50 ಸಂಚಿಕೆ ಪೂರೈಸಿದ ಮಲ್ಲಿ

ಇದೀಗ ಮೂಗುತಿ ಮಲ್ಲಿ ಧಾರಾವಾಹಿ 50 ಸಂಚಿಕೆಗಳನ್ನು ಪೂರೈಸಿದ್ದು, ಆ ಸಂಭ್ರಮವನ್ನು ಹೈದರಾಬಾದಿಗೆ ತೆರಳಿ ಸೆಲೆಬ್ರೇಟ್ ಮಾಡಿದ್ದಾರೆ ಮಲ್ಲಿ ಟೀಮ್.

Image credits: Instagram
Kannada

ಹೈದರಾಬಾದಿನಲ್ಲಿ ಮಲ್ಲಿ ಟೀಮ್

ಮೂಗುತಿ ಮಲ್ಲಿ ನಾಯಕ, ನಾಯಕಿ ಹಾಗೂ ತಂಡ ಕೆಲವು ಸದಸ್ಯರು ಹೈದಬಾದಿಗೆ ತೆರಳಿದ್ದು, ಅಲ್ಲಿ ಚಾರ್ ಮಿನಾರ್ ಹಾಗೂ ವಿವಿಧ ತಾಣಗಳಿಗೆ ತೆರಳಿ ಟೀಮ್ ಔಟಿಂಗ್ ಮಾಡಿದ್ದಾರೆ.

Image credits: Instagram
Kannada

ತೆಲುಗಿನಲ್ಲೂ ಮೂಗುತಿ ಮಲ್ಲಿ

ಅಂದ ಹಾಗೆ ‘ಮೂಗುತಿ ಮಲ್ಲಿ’ ಸೀರಿಯಲ್ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಕೂಡ ‘ಮುಕ್ಕೆರ ಮೀನಾಕ್ಷಿ’ ಎನ್ನುವ ಹೆಸರಿನಲ್ಲಿ ಏಕಕಾಲದಲ್ಲಿ ಪ್ರಸಾರವಾಗುತ್ತಿದೆ.

Image credits: Instagram
Kannada

ಮುತ್ತಿನ ನಗರಿಯಲ್ಲಿ ಸಂಭ್ರಮಿಸಿದ ಮೀನಾಕ್ಷಿ

ತೆಲುಗಿನಲ್ಲಿ ಮೀನಾಕ್ಷಿಯಾಗಿ ನಟಿಸುತ್ತಿರುವ ಕನ್ನಡದ ಮಲ್ಲಿ ಇದೀಗ ಹೈದರಾಬಾದಿನಲ್ಲಿ 50 ಸಂಚಿಕೆಗಳ ಸಂಭ್ರಮವನ್ನೂ ತಂಡದ ಜೊತೆ ಸಂಭ್ರಮಿಸಿದ್ದಾರೆ.

Image credits: Instagram
Kannada

ಮಲ್ಲಿಯಾಗಿ ನಟಿಸುತ್ತಿರುವ ತನುಜಾ

ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ರಂಗಭೂಮಿ ಕಲಾವಿದೆ ತನುಜಾ ವೆಂಕಟೇಶ್ ಮಲ್ಲಿ ಹಾಗೂ ಮೀನಾಕ್ಷಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇವರು ಹೈದರಾಬಾದ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Image credits: Instagram
Kannada

ನಾಯಕನಾಗಿ ಚಂದನ್

ಅಂದ ಹಾಗೆ ಧಾರಾವಾಹಿಯಲ್ಲಿ ನಾಯಕ ವಿರಾಜ್ ಆಗಿ ಈ ಹಿಂದೆ ‘ಅಂತರಪಟ’ ಸೀರಿಯಲ್ ನಾಯಕನಾಗಿದ್ದ ಹಾಗೂ ನೇಹಾ ಗೌಡ ಪತಿ ಚಂದನ್ ಗೌಡ ನಟಿಸುತ್ತಿದ್ದಾರೆ.

Image credits: Instagram
Kannada

ಜನ ಮೆಚ್ಚಿಕೊಂಡ ಸೀರಿಯಲ್

ಚೂಟಿ ಹುಡುಗಿ, ಶ್ರೀಮಂತನ ಹುಡುಗನ ಈ ಲವ್ ಸ್ಟೋರಿ ಜನರಿಗಂತೂ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಹಿರಿಯ ನಟಿ ಅಂಬಿಕಾ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Image credits: Instagram

ನಟನೆಗೆ ಗುಡ್ ಬೈ ಹೇಳಿ…. ಆಫ್ರಿಕಾದಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ನಟಿ ಸಂಜನಾ ಬುರ್ಲಿ

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು

Niveditha Gowda ಭರ್ಜರಿ ಬರ್ತ್ ಡೇ ಸೆಲೆಬ್ರೇಶನ್… ಬಿಗ್ ಬಾಸ್ ಸುಂದ್ರಿಯ ವಯಸ್ಸೆಷ್ಟು ಗೊತ್ತಾ?

ಅಮ್ಮನ ಹುಟ್ಟುಹಬ್ಬ: ಬಾಲ್ಯದ ಫೋಟೊ ಹಂಚಿ ವಿಶ್ ಮಾಡಿದ ಈ ಕಿರುತೆರೆ ಚೆಲುವೆ ಯಾರು?