ಅನುಷ್ಕಾ ಶರ್ಮಾ@38: ನಡುಗುತ್ತಲೇ ಲವ್ ಮಾಡಿದ್ದ ಕೊಹ್ಲಿ- ಸಿನಿಮಾ ಮೀರಿಸೋ ಲವ್ಸ್ಟೋರಿ ಕೇಳಿ
ನಟಿ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ವಿಶೇಷವಾಗಿ, ಅವರ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಯ ಪ್ರೇಮಕಥೆಯ ಬಗ್ಗೆ ಈ ಲೇಖನ ವಿವರಿಸುತ್ತದೆ. ಜಾಹೀರಾತು ಚಿತ್ರೀಕರಣದ ವೇಳೆ ಭೇಟಿಯಾದಾಗ ಅನುಷ್ಕಾಳನ್ನು ನೋಡಿ ವಿರಾಟ್ ಹೇಗೆ ಆತಂಕಗೊಂಡಿದ್ದರು ಸ್ನೇಹ ಪ್ರೀತಿಗೆ ತಿರುಗಿ ಮದುವೆಯವರೆಗೆ ಬಂದಿದ್ದು ಹೀಗೆ.

ಅನುಷ್ಕಾ ಶರ್ಮಾ ಹುಟ್ಟುಹಬ್ಬ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಇಂದು ಅರ್ಥಾತ್ ಮೇ 1 ಹುಟ್ಟುಹಬ್ಬದ ಸಂಭ್ರಮ. ಮೇ 1, 1988 ರಂದು ಜನಿಸಿರುವ ಅನುಷ್ಕಾ ಅವರು 38 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅನುಷ್ಕಾ ಶರ್ಮಾ ಸುಮಾರು 7-8 ವರ್ಷಗಳಿಂದ ಚಲನಚಿತ್ರಗಳಿಂದ ದೂರವಿದ್ದಾರೆ. ಅವರು ಶಾರುಖ್ ಖಾನ್ ಅವರೊಂದಿಗೆ ರಬ್ ನೆ ಬನಾ ದಿ ಜೋಡಿ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಚೊಚ್ಚಲ ಚಿತ್ರ ಬ್ಲಾಕ್‌ಬಸ್ಟರ್ ಆಗಿತ್ತು. ಅಂದಿನಿಂದ ಅವರು ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅಕ್ಷಯ್ ಕುಮಾರ್, ಆಮಿರ್ ಖಾನ್, ಸಲ್ಮಾನ್ ಖಾನ್, ಶಾಹಿದ್ ಕಪೂರ್ ಮತ್ತು ರಣವೀರ್ ಸಿಂಗ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಕಳೆದ 7-8 ವರ್ಷಗಳಿಂದ ಚಲನಚಿತ್ರಗಳಿಂದ ದೂರವಿದ್ದಾರೆ. ಪ್ರಸ್ತುತ, ಅವರು ತಮ್ಮ ಕ್ರಿಕೆಟಿಗ ಪತಿ ವಿರಾಟ್ ಕೊಹ್ಲಿ ಮತ್ತು ಅವರ ಮಕ್ಕಳೊಂದಿಗೆ ಜೀವನವನ್ನು ಆನಂದಿಸುತ್ತಿದ್ದಾರೆ.
ಕೊಹ್ಲಿ ಜೊತೆಗಿನ ಪ್ರೀತಿ
ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮತ್ತು ವಿರಾಟ್ ಕೊಹ್ಲಿಯ ಮೊದಲ ಭೇಟಿ, ಸ್ನೇಹ ಮತ್ತು ಪ್ರೇಮಕಥೆಯ ರೋಚಕ ಸ್ಟೋರಿ ಇಲ್ಲಿದೆ. ಅವರ ಮೊದಲ ಭೇಟಿಯ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಈ ಜೋಡಿಯ ಮೊದಲ ಭೇಟಿಯ ಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ. ವಿರಾಟ್, ಅನುಷ್ಕಾ ಅವರನ್ನು ಮೊದಲ ಬಾರಿಗೆ ನೋಡಿದಾಗ, ಅವರು ಆತಂಕಗೊಂಡಿದ್ದರಂತೆ.
ನಡುಗುತ್ತಲೇ ಲವ್
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2013 ರಲ್ಲಿ ಶಾಂಪೂ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಅನುಷ್ಕಾ ಅವರನ್ನು ನೋಡಿ ವಿರಾಟ್ ಆಘಾತಕ್ಕೊಳಗಾದರು. ಅವರೇ ಸಂದರ್ಶನವೊಂದರಲ್ಲಿ ಅನುಷ್ಕಾ ಅವರೊಂದಿಗಿನ ತಮ್ಮ ಮೊದಲ ಭೇಟಿಯ ಕಥೆಯನ್ನು ಹಂಚಿಕೊಂಡಿದ್ದರು. ಅನುಷ್ಕಾ ಅವರನ್ನು ನೋಡಿ ಭಯಪಟ್ಟಿದ್ದೆ. ಅವರು ತುಂಬಾ ಫೇಮಸ್ ವ್ಯಕ್ತಿ ಆಗಿದ್ದರಿಂದ ಅವರ ಬಳಿ ಮಾತನಾಡಲು ನಡುಗುತ್ತಿದ್ದೆ. ಆ ಬಳಿಕ ಆಕೆ ತುಂಬಾ ಸಾಫ್ಟ್ ಎನ್ನುವುದು ತಿಳಿಯಿತು ಎಂದಿದ್ದಾರೆ ಕೊಹ್ಲಿ.
ಅನುಷ್ಕಾ-ವಿರಾಟ್ ಅವರ ಸಂಭಾಷಣೆ
ಜಾಹೀರಾತಿನ ಚಿತ್ರೀಕರಣಕ್ಕಾಗಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭೇಟಿಯಾದರು ಎಂದು ಹೇಳಲಾಗುತ್ತದೆ. ಆಗ ಅನುಷ್ಕಾ ಹೈ ಹೀಲ್ಸ್ ಧರಿಸಿ ಬಂದಿದ್ದರಂತೆ. ಅದರಲ್ಲಿ ಕೊಹ್ಲಿಗಿಂತಲೂ ಅವರು ಎತ್ತರವಾಗಿ ಕಾಣಿಸುತ್ತಿದ್ದರು. ಅದಕ್ಕೆ ಕೊಹ್ಲಿ ಅವರು, ಆತಂಕದಿಂದ, "ಇದಕ್ಕಿಂತ ಎತ್ತರದ ಹಿಮ್ಮಡಿಗಳು ನಿಮಗೆ ಸಿಗಲಿಲ್ಲವೇ?" ಎಂದು ಕೇಳಿದಾಗ ಅನುಷ್ಕಾ, "ಕ್ಷಮಿಸಿ" ಎಂದು ಉತ್ತರಿಸಿದ್ದರು.
ಇಟಲಿಯಲ್ಲಿ ಮದುವೆ
ತಮ್ಮ ಮೊದಲ ಜಾಹೀರಾತಿನ ಚಿತ್ರೀಕರಣದ ನಂತರ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ನೇಹಿತರಾದರು ಮತ್ತು ಆಗಾಗ್ಗೆ ಭೇಟಿಯಾಗಲು ಪ್ರಾರಂಭಿಸಿದರು. ಕ್ರಮೇಣ, ಅವರು ಪ್ರೀತಿಯಲ್ಲಿ ಸಿಲುಕಿದರು. ಆದಾಗ್ಯೂ, ಅವರು ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟರು. ನಂತರ, ಅವರು 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ನೆನಪಿನ ಶಕ್ತಿ ಇಷ್ಟ
ಸ್ಟಾರ್ ಸ್ಪೋರ್ಟ್ಸ್‌ನೊಂದಿಗಿನ ಹಳೆಯ ಚಾಟ್‌ನಲ್ಲಿ, ನಟಿ ತಮಗೆ ವಿರಾಟ್ ಏಕೆ ಇಷ್ಟವಾಗಿದ್ದರು ಎನ್ನುವುದನ್ನು ಹೇಳಿದ್ದರು. ಡೇಟಿಂಗ್ ಪ್ರಾರಂಭಿಸುವ ಮೊದಲು ವಿರಾಟ್ ಅವರ ಉತ್ತಮ ನೆನಪಿನ ಶಕ್ತಿ ನನ್ನನ್ನು ಪ್ರಭಾವಿತಗೊಳಿಸಿತು ಎಂದು ಬಹಿರಂಗಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್, "ನನ್ನ ನೆನಪು ಸ್ವಲ್ಪ ಚೆನ್ನಾಗಿದೆ, ಹಾಗಾಗಿ ಅನುಷಾ ಹಲವಾರು ಡೇಟ್ಸ್ ನೆನಪಿನಲ್ಲಿ ಇಟ್ಟುಕೊಳ್ಳಲು ನನಗೆ ಹೇಳುತ್ತಿರುತ್ತಾಳೆ. ಅವಳಿಗಾಗಿ ನಾನು ಹೀಗೆ ಮಾಡಲೇಬೇಕಿದೆ ಎಂದು ಚಟಾಕಿ ಹಾರಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

