ರೋಚಕ ತಿರುವು ಪಡೆದುಕೊಂಡ ನಾ ನಿನ್ನ ಬಿಡಲಾರೆ; ಮಾಳವಿಕಾ ಮಾಯಾ ಲೋಕದಲ್ಲಿರೋರು ಯಾರು?
Naa Ninna Bidalare serial latest update: ನಾ ನಿನ್ನ ಬಿಡಲಾರೆ ಧಾರಾವಾಹಿಯು ರೋಚಕ ತಿರುವು ಪಡೆದಿದ್ದು, ಸತ್ತಳೆಂದು ಭಾವಿಸಲಾಗಿದ್ದ ಶರತ್ ತಾಯಿ ದಾಕ್ಷಾಯಿಣಿ ಬದುಕಿರುವುದನ್ನು ಮಾಳವಿಕಾ ಬಹಿರಂಗಪಡಿಸಿದ್ದಾಳೆ.

ನಾ ನಿನ್ನ ಬಿಡಲಾರೆ ಸೀರಿಯಲ್
ನಾ ನಿನ್ನ ಬಿಡಲಾರೆ ಸೀರಿಯಲ್ ಮತ್ತೊಮ್ಮೆ ರೋಚಕ ತಿರುವು ಪಡೆದುಕೊಂಡಿದೆ. ಶರತ್‌ಗೆ ಮಾಳವಿಕಾ ಮಲತಾಯಿ. ಶರತ್ ತಾಯಿ ದಾಕ್ಷಾಯಿಣಿ ನಿಧನದ ಬಳಿಕ ಜಗನ್ನಾಥ್ ಜೊತೆ ಮಾಳವಿಕಾ ಮದುವೆ ಆಗಿದೆ ಅಂತಾನೇ ಎಲ್ಲರೂ ತಿಳಿದುಕೊಂಡಿದ್ದರು. ಇಷ್ಟು ದಿನ ಅದೇ ರೀತಿಯಲ್ಲಿಯೇ ಕಥೆಯನ್ನು ತೋರಿಸಲಾಗಿತ್ತು.
ಶರತ್ ತಾಯಿ ದಾಕ್ಷಾಯಿಣಿ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಶರತ್ ತಾಯಿ ದಾಕ್ಷಾಯಿಣಿ ಬದುಕಿರೋದನ್ನು ತೋರಿಸಲಾಗಿದೆ. ನನ್ನ ವಿರುದ್ಧ ಮಾತನಾಡಿದವರಿಗೆ ಏನು ಮಾಡುತ್ತೇನೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಮಾಯಾಗೆ ಮಾಳವಿಕಾ ತೋರಿಸಿದ್ದಾಳೆ. ಶರತ್ ತನ್ನನ್ನು ಮದುವೆಯಾಗಲಿಲ್ಲ ಎಂಬ ಹತಾಶೆಯಿಂದ ಮಾಳವಿಕಾ ವಿರುದ್ಧವೇ ಮಾತನಾಡಿದ್ದಾಳೆ.
ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ
ಮಾಯಾಳ ನಡೆಯಿಂದ ಕೆಂಡವಾದ ಮಾಳವಿಕಾ, ಆಕೆಯನ್ನು ತನ್ನ ಮಾಯಾಲೋಕಕ್ಕೆ ಕರೆದುಕೊಂಡು ಬಂದಿದ್ದಾಳೆ. ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ ಮಾಡಲು ಬಂದಿದ್ದಳು. ತನ್ನಲ್ಲಿರುವ ಮಾಂತ್ರಿಕ ಶಕ್ತಿಯಿಂದ ಮಾಯಾಳನ್ನು ತಡೆದ ಮಾಳವಿಕಾ, ಕಪಾಳಕ್ಕೆ ಎರಡು ಏಟು ಸಹ ನೀಡಿದ್ದಾಳೆ. ಮಾಳವಿಕಾ ಆಡಿಸೋ ಆಟದ ಗೊಂಬೆ ಅನ್ನೋ ವಿಷಯ ಮಾಯಾಗೆ ಗೊತ್ತಿಲ್ಲ.
ಇದನ್ನೂ ಓದಿ: ಅಂಬಿಕಾ ಸೀರೆ ಧರಿಸಿದ ದುರ್ಗಾಳನ್ನು ನೋಡಿ ವೀಕ್ಷಕರಲ್ಲಿ ಗೊಂದಲ; ಕೊನೆಗೂ ಬಂದ ಮಾಳವಿಕಾ
ಆತ್ಮ
ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಆಗಾಗ ಮುಚ್ಚಿದ ಮಡಿಕೆಯನ್ನು ತೋರಿಸಲಾಗುತ್ತದೆ. ಈ ಮಡಿಕೆಯಲ್ಲಿ ಶಂಭು ತಾಯಿಯ ಆತ್ಮವಿದೆ ಎಂದು ತೋರಿಸಲಾಗಿದೆ. ಇನ್ನುಳಿದ ಎರಡು ಮಡಿಕೆಯಲ್ಲಿ ಹಿತಾ ಮತ್ತು ಅಂಬಿಕಾ ಆತ್ಮವನ್ನು ತುಂಬಿಸಿ ಅಮ್ಮನನ್ನು ಅಮರ ಮಾಡೋದು ಮಾಳವಿಕಾಳ ಉದ್ದೇಶವಾಗಿದೆ. ಇದಕ್ಕಾಗಿ ಈ ಹಿಂದೆ ಅಂಬಿಕಾಳ ಆತ್ಮವನ್ನು ಮಾಯಾ ಕನ್ನಡಿಯಲ್ಲಿ ಬಂಧಿಸಿಡಲಾಗಿತ್ತು. ಇದೀಗ ಅದೇ ರೀತಿ ಶರತ್ ತಾಯಿಯನ್ನು ಬಂಧಿಸಿಡಲಾಗಿದೆಯಾ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್ ವಿಡಿಯೋ ವೈರಲ್
ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನ
ಈ ಪ್ರೋಮೋ ನೋಡಿದ ನೆಟ್ಟಿಗರು, ಓ ದೇವರೇ ಆ ಇನ್ನೊಂದು ಆತ್ಮ ಶಂಭು ಅವ್ರ ಹೆಂಡತಿ ದುರ್ಗಾ,ಅಂಬಿಕಾ ಅವ್ರ ಅಮ್ಮ ಅಂದುಕೊಂಡಿದ್ವಿ. ಆದರೆ ಇದು ಶರತ್ ಅಮ್ಮ ದಾಕ್ಷಾಯಣಿ. ಶಂಭು ಅಂಬಿಕಾ ಮುಂದೆ ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನಡೆಯುವುದಿಲ್ಲ ಮಾಳವಿಕಾ ದುಷ್ಟ ಶಕ್ತಿಗಳ ಅಂತ್ಯ ಆಗಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನಿಮ್ಮ ನೆಚ್ಚಿನ ಸೀರಿಯಲ್ ನಟರು ಯಾರು? ನಿಮ್ಮ ವೋಟ್ನಿಂದ ಬೆಸ್ಟ್ ತಾರೆಯರ ಆಯ್ಕೆ- ಫುಲ್ ಡಿಟೇಲ್ಸ್ ಇಲ್ಲಿದೆ