ಕನ್ನಡ ಧಾರಾವಾಹಿಗಳ ಜನಪ್ರಿಯತೆಯನ್ನು ಆಧರಿಸಿ, ಜೀ ಕನ್ನಡ ವಾಹಿನಿಯು 'ಜೀ ಕುಟುಂಬ ಅವಾರ್ಡ್ 2025' ಅನ್ನು ಆಯೋಜಿಸಿದೆ. ವೀಕ್ಷಕರು ತಮ್ಮ ನೆಚ್ಚಿನ ನಟ-ನಟಿಯರು ಮತ್ತು ಪಾತ್ರಗಳಿಗೆ ಜೀ ವ್ಯಾನ್, ವೆಬ್‌ಸೈಟ್ ಲಿಂಕ್, ಅಥವಾ ವಾಟ್ಸ್​ಆ್ಯಪ್​ ಮೂಲಕ ಮತ ಚಲಾಯಿಸಿ ಆಯ್ಕೆ ಮಾಡಬಹುದು.

ಎಷ್ಟೋ ಮಂದಿಗೆ ಪ್ರತಿದಿನವೂ ಸೀರಿಯಲ್​ ನೋಡಲೇ ಬೇಕು. ಹಲವರಿಗಂತೂ ಒಂದು ದಿನ ಮಿಸ್​ ಆದರೂ ಏನೋ ಕಳೆದುಕೊಂಡ ಅನುಭವ. ಊಟ ಆದ್ರೂ ಬಿಟ್ಟಾರು ಸೀರಿಯಲ್​ ಬಿಡಲ್ಲ ಎನ್ನುವವರೂ ಇದ್ದಾರೆ. ಅದರಲ್ಲಿಯೂ ಒಂದು ಹೆಜ್ಜೆ ಮುಂದೆ ಇರೋದು ಮಹಿಳೆಯರೇ. ಇದೇ ಕಾರಣಕ್ಕೆ ಸಿನಿಮಾಗಳೆಲ್ಲವೂ ಪುರುಷ ಪ್ರಧಾನ ಆಗಿದ್ರೆ, ಧಾರಾವಾಹಿಗಳು ಮಾತ್ರ ಮಹಿಳಾ ಪ್ರಧಾನ. ಭಾಷೆ ಯಾವುದೇ ಇರಲಿ, ಎಲ್ಲಾ ಸೀರಿಯಲ್​ಗಳಲ್ಲಿ ನಾಯಕಿಯೇ ಪ್ರಧಾನ. ವಿಲನ್ ಕೂಡ ಮಹಿಳೆಯೇ ಆಗಿರೋದು ವಿಶೇಷ. ಸಾಮಾನ್ಯವಾಗಿ ಎಲ್ಲಾ ಸೀರಿಯಲ್​ಗಳ ಸ್ಟೋರಿಯಲ್ಲಿಯೂ ಅಷ್ಟೇ ಪಾತ್ರ ಇದ್ದು, ಅದೇ ಪಾತ್ರಗಳೇ ವಿಲನ್​ ಆಗಿದ್ದರೂ ಕಥೆಗಳು ಒಂಚೂರು ಆಚೀಚೆ ಆಗಿರುತ್ತದೆ. ಆದರೂ ಎಲ್ಲಾ ಸೀರಿಯಲ್​​ಗಳೂ ಹಲವರಿಗೆ ಇಷ್ಟವಾಗಿ ಬಿಡುತ್ತವೆ!

ಸೀರಿಯಲ್​ ಮಹಿಮೆ ಅಂದ್ರೆ ಸುಮ್ನೇನಾ?

ಸೀರಿಯಲ್​ಗಳನ್ನು ಬೈದುಕೊಳ್ಳುತ್ತಲೇ, ಚ್ಯೂಯಿಂಗ್​ ಗಮ್​ನಂತೆ ಐದಾರು ವರ್ಷ ಎಳೆಯುತ್ತಾರೆ ಎಂದು ಶಪಿಸುತ್ತಲೇ ಒಂದೂ ದಿನ ಮಿಸ್​ ಮಾಡದೇ ನೋಡುವವರು ಎಷ್ಟು ಮಂದಿ ಇಲ್ಲಾ ಹೇಳಿ? ಅಲ್ಲಿ ಬರುವ ಪಾತ್ರಗಳನ್ನು ತಮ್ಮ ಮೈಮೇಲೆ ಆಹ್ವಾನಿಸಿಕೊಂಡು, ಆ ಪಾತ್ರದ ಒಳಗೆ ಹೊಕ್ಕು, ಅದೇ ಪಾತ್ರವೇ ತಾವು ಎಂದುಕೊಂಡು... ಅಬ್ಬಬ್ಬಾ ಸೀರಿಯಲ್​ ನೋಡುವವರ ಮೇಲೆ ಮಹಾ ಪ್ರಬಂಧವೇ ಬರೆಯಬಹುದು. ಅಷ್ಟು ದೊಡ್ಡ ವಿಷಯವದು. ವಯಸ್ಸಾದಂತೆ ಮರೆವು ಎನ್ನುತ್ತಾರೆ ಹಲವರು. ಆದರೆ ಸೀರಿಯಲ್​ಗಳ ಸ್ಟೋರಿ ಒಂದೇ ರೀತಿ ಇದ್ದರೂ ಅದು ಮಾತ್ರ ಮರೆಯೋದೇ ಇಲ್ಲ ನೋಡಿ, ಯಾವಾಗ ಏನಾಗಿತ್ತು ಎಂದು ಕರಾರುವಕ್ಕಾಗಿ ಹೇಳುವಷ್ಟು ಮೆಮೊರಿ ಪವರ್​ ಬಂದು ಬಿಡುತ್ತದೆ, ಅದು ಸೀರಿಯಲ್​ ಮಹಿಮೆ.

ನಿಮ್ಮ ನೆಚ್ಚಿನ ನಟರು ಯಾರು?

ಇರಲಿ ಬಿಡಿ. ಇಂಥ ಸೀರಿಯಲ್​ಗಳಲ್ಲಿ ನಿಮ್ಮ ನೆಚ್ಚಿನ ನಾಯಕ, ನಾಯಕಿ, ವಿಲನ್​, ಸಹೋದರ, ಸಹೋದರಿ, ಅಪ್ಪ, ಅಮ್ಮ, ಬಾಲಕ, ಬಾಲಕಿ.... ಹೀಗೆ ಎಲ್ಲವನ್ನೂ ಆಯ್ಕೆ ಮಾಡುವ ಅವಕಾಶವನ್ನು ಜೀ ಕನ್ನಡ ವಾಹಿನಿ ನಿಮಗೆ ನೀಡಿದೆ. ಪ್ರತಿವರ್ಷ ಜೀ ಕುಟುಂಬ ಅವಾರ್ಡ್​ (Zee Kutumba Award) ಕೊಡಲಾಗುತ್ತದೆ. ಅದರಲ್ಲಿ ಯಾರು ನಿಮಗೆ ಇಷ್ಟ ಎನ್ನುವುದನ್ನು ನೀವು ನಾಮಿನೇಟ್​ ಮಾಡಬೇಕು. ತೀರ್ಪುಗಾರರ ಆಯ್ಕೆ ಕೂಡ ಇಲ್ಲಿ ಮುಖ್ಯವಾಗಿರುತ್ತದೆ. ಅದೇ ರೀತಿ ಜನರ ಇಷ್ಟದ ಮೇಲೂ ಮೇಲೆಯೂ ನೆಚ್ಚಿನ ತಾರೆಯರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಜೀ ವ್ಯಾನ್​ 31 ಜಿಲ್ಲೆಗಳಿಗೂ ಬರಲಿದೆ. ಅಲ್ಲಿ ನಿಮಗೆ ವೋಟ್​ ಮಾಡುವ ಅವಕಾಶ ಇದೆ. ಅಲ್ಲಿಯೇ ಇರುವ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುವ ಮೂಲಕವೂ ನೀವು ವೋಟ್​ ಮಾಡಬಹುದು. ಕರ್ಣ, ಪುಟ್ಟಕ್ಕನ ಮಕ್ಕಳು, ಲಕ್ಷ್ಮೀ ನಿವಾಸ, ಅಮೃತಧಾರೆ, ನಾ ನಿನ್ನ ಬಿಡಲಾರೆ, ಬ್ರಹ್ಮಗಂಟು ಸೇರಿದಂತೆ ಇನ್ನೂ ಕೆಲವು ಸೀರಿಯಲ್​​ಗಳಿದ್ದು, ಅವುಗಳಲ್ಲಿ ನಿಮ್ಮ ನೆಚ್ಚಿನವರನ್ನು ಆಯ್ಕೆ ಮಾಡಬಹುದು.

ನೀವು ಮಾಡಬೇಕಿರೋದು ಏನು?

ಅವೆಲ್ಲಾ ಕಷ್ಟನಪ್ಪ, ನಮ್ಮೂರಿಗೆ ಬರದಿದ್ರೆ ಏನ್​ ಮಾಡೋದು? ಅವರು ಬಂದಾಗ ನಾವು ಇರಬೇಕಲ್ಲ, ಅವರು ನಮಗೆ ಸಿಗಬೇಕಲ್ಲಾ ಎಂದೆಲ್ಲಾ ಅಂದುಕೊಂಡು ನೊಂದುಕೊಳ್ಳುವ ಅವಶ್ಯಕತೆಯೇ ಇಲ್ಲ. ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025ರ ರಥ ನಿಮ್ಮೂರಿಗೆ ಬಂದಾಗ ವೋಟ್​ ಮಾಡಬಹುದು. ಇಲ್ಲವೇ ನಿಮ್ಮ ನೆಚ್ಚಿನ ಆಯ್ಕೆಗಳಿಗೆ ವೋಟ್ ಮಾಡಲು zkka25.zee5.com ಲಿಂಕ್‌ಗೆ ಭೇಟಿ‌ ಕೊಡಿ or QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಇನ್ನೂ ಸಿಂಪಲ್​ ಆಗಿ ZKA25 ಎಂದು ಟೈಪ್ ಮಾಡಿ 9513133724 ನಂಬರ್‌ಗೆ ವಾಟ್ಸ್​ಆ್ಯಪ್​ ಮಾಡ್ಬೋದು.