- Home
- Entertainment
- TV Talk
- ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್ ವಿಡಿಯೋ ವೈರಲ್
ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್ ವಿಡಿಯೋ ವೈರಲ್
'ನಾನಿನ್ನ ಬಿಡಲಾರೆ' ಧಾರಾವಾಹಿಯ ಅಮ್ಮ-ಮಗಳಾದ ನೀತಾ ಅಶೋಕ್ ಮತ್ತು ಬಾಲನಟಿ ಮಹಿತಾ ತಮ್ಮ ಅದ್ಭುತ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾರೆ. ಮಹಿತಾಳ ಭಾವುಕ ನಟನೆ ಪ್ರೇಕ್ಷಕರನ್ನು ಕಣ್ಣೀರಲ್ಲಿ ತೇಲಿಸಿದರೆ, ನೀತಾ ಅಶೋಕ್ 'ವಿಕ್ರಾಂತ್ ರೋಣ' ಚಿತ್ರದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಇವರ ರೀಲ್ಸ್ ನೋಡಿ…

ನಾನಿನ್ನ ಬಿಡಲಾರೆ ಸೀರಿಯಲ್ ಕ್ಯೂಟ್ ಅಮ್ಮ-ಮಗಳು
ನಾನಿನ್ನ ಬಿಡಲಾರೆ ಸೀರಿಯಲ್ (Naa Ninna Bidalaare Serial) ಹಿತಾಳ ಆ್ಯಕ್ಟಿಂಗ್ಗೆ ಮನ ಸೋಲದವರೇ ಇಲ್ಲ. ಈಕೆಯ ನಿಜವಾದ ಹೆಸರು ಮಹಿತಾ. ಈ ಸೀರಿಯಲ್ನಲ್ಲಿ ಈಕೆಯ ಒಂದೊಂದು ಅಭಿನಯಕ್ಕೂ ವೀಕ್ಷಕರು ಮನಸೋತಿದ್ದಾರೆ. ನಗು, ಅಳು, ತಮಾಷೆ ಏನೇ ಇರಲಿ. ಯಾವುದೇ ಭಾವ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಾಳೆ. ಅದರಂತೆಯೇ ಆತ್ಮ ಆಗಿರೋ ಅಮ್ಮ ಅಂಬಿಕಾ ಪಾತ್ರದಲ್ಲಿ ನಟಿಸ್ತಿರೋ ನಟಿ ನೀತಾ ಅಶೋಕ್ (Neeta Ashok)
ಅಮ್ಮ-ಮಗಳ ಕೆಮೆಸ್ಟ್ರಿಗೆ ಫಿದಾ
ಈ ಅಮ್ಮ-ಮಗಳ ಕೆಮೆಸ್ಟ್ರಿಯನ್ನು ನಾ ನಿನ್ನ ಬಿಡಲಾರೆ ಸೀರಿಯಲ್ ಪ್ರೇಮಿಗಳ ಸಕತ್ ಮೆಚ್ಚಿಕೊಂಡಿದ್ದಾರೆ. ಇದೀಗ ಈ ಇಬ್ಬರೂ ಕೂಡಿ ತರ್ಲೆ ರೀಲ್ಸ್ ಮಾಡಿದ್ದು, ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಪುಟಾಣಿ ಮಹಿತಾ ಕುರಿತು ಹೇಳುವುದಾದರೆ, ದುಃಖದ ಸನ್ನಿವೇಶದಲ್ಲಿ ವೀಕ್ಷಕರನ್ನು ಅಳಿಸುತ್ತಾಳೆ. ಇದರಲ್ಲಿ ಆಕೆ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿ ಮಗು. ತಾಯಿಯ ಪ್ರೀತಿಗಾಗಿ ಹಂಬಲಿಸುವ, ತನ್ನ ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ತಪ್ಪು ತಿಳಿದು ಆತನನ್ನು ದ್ವೇಷಿಸುವ ಕ್ಯಾರೆಕ್ಟರ್ ಈಕೆಯದ್ದು.
ಅಬ್ಬಬ್ಬಾ ಎನ್ನುವ ನಟನೆ...
ನಟನೆಯಲ್ಲಿ ಮಾತ್ರ ಮಹಿತಾ ಒಂದು ಹೆಜ್ಜೆ ಮುಂದು. ಅಬ್ಬಾ ಎನ್ನುವಂಥ ನಟನೆ ಈಕೆಯದ್ದು. ಇದೀಗ ಅಮ್ಮನ ನೆನಪಿನಲ್ಲಿ, ಅಮ್ಮನಿಗಾಗಿ ಹಂಬಲಿಸುತ್ತಾ, ಒಮ್ಮೆ ಬಂದು ನನ್ನನ್ನು ಹಗ್ ಮಾಡು, ಪ್ಲೀಸ್ ಬಾ ಅಮ್ಮಾ... ನನ್ನನ್ನು ಯಾಕೆ ಬಿಟ್ಟುಹೋದೆ... ಎಂದು ಕೇಳುವ ಪರಿ ಮಾತ್ರ ಬಹುತೇಕ ವೀಕ್ಷಕರು , ನೆಟ್ಟಿಗರ ಕಣ್ಣಲ್ಲಿ ನೀರನ್ನು ತರಿಸಿರುವುದು ಕಮೆಂಟ್ನಲ್ಲಿ ಹಾಕಿರುವ ಸಂದೇಶಗಳಿಂದಲೇ ನೋಡಬಹುದು. ತಾವು ನೋಡ್ತಿರೋದು ಕೇವಲ ಸೀರಿಯಲ್, ಇದರಲ್ಲಿ ಇವರದ್ದು ಕೇವಲ ನಟನೆ ಎಂದು ತಿಳಿದಿದ್ದರೂ ಇಂಥ ನಟನೆ ಬಂದಾಗ ಸೂಕ್ಷ್ಮ ಮನಸ್ಸಿನವರು ಭಾವುಕರಾಗುವುದು ಸಹಜ. ಆದರೆ, ಆ ವೀಕ್ಷಕರ ಮೇಲೆ ಅಂಥ ಪರಿಣಾಮ ಬೀರುವುದು ಕೂಡ ಸುಲಭದ ಮಾತಲ್ಲ. ಅದನ್ನು ಮಾಡುತ್ತಿದ್ದಾಳೆ ಪುಟಾಣಿ ಮಹಿತಾ.
ರಿಯಾಲಿಟಿ ಷೋಗಳಲ್ಲಿ ಮಹಿತಾ
ಮಹಿತಾ, ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್ನ ಟೈಟಲ್ ಸಾಂಗ್ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.
ನೀತಾ ಅಶೋಕ್ ಕುರಿತು
ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್ ಭಂಡಾರಿ (Anoop Bandhari) ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.
ತುಳು ಚಿತ್ರದಲ್ಲಿಯೂ ನಟನೆ
ವಿಕ್ರಾಂತ್ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.
ಅಮ್ಮ-ಮಗಳ ಸಕತ್ ಜೋಡಿ
2023ರಲ್ಲಿ ಇವರ ವಿವಾಹ ಸತೀಶ್ ಮೆಸ್ತಾ ಜೊತೆ ನಡೆದಿದೆ. ಅವರ ಪತಿ ಸತೀಶ್ ಮೇಸ್ತಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರಾಗಿದ್ದಾರೆ. ಈಗ ಸೀರಿಯಲ್ ಅಮ್ಮ-ಮಗಳ ಜೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸ್ಕೂಲ್-ಸೀರಿಯಲ್ ಮ್ಯಾನೇಜ್ ಮಾಡುವ ಬಾಲಕಿ
ಮಹಿತಾ, ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ. ಈ ಕುರಿತು ಹಿಂದೊಮ್ಮೆ ಈಕೆಯ ಅಮ್ಮ ತನುಜಾ ಮಾಧ್ಯಮದ ಜೊತೆ ಮಾತನಾಡಿದ್ದರು. 'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಕೋವಿಡ್ ಸಮಯದಲ್ಲಿ ನಾನು ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡುತ್ತಿದ್ದ ವೇಳೆ ಅವಳಲ್ಲಿ ಇದ್ದ ನಟನೆಯ ಕಲೆಯನ್ನು ಗುರುತಿಸಿದೆ.