- Home
- Entertainment
- TV Talk
- ಕೇಕ್ ಕತ್ತರಿಸಿ ಬಿಗ್‌ಬಾಸ್‌ಗೆ ಹೊರಟ ಮಲ್ಲಮ್ಮ; ನನ್ನ ಗಂಡ ಇದ್ದಿದ್ರೆ ಕಪಾಳಕ್ಕೆ ಹೊಡಿತಿದ್ರು!
ಕೇಕ್ ಕತ್ತರಿಸಿ ಬಿಗ್‌ಬಾಸ್‌ಗೆ ಹೊರಟ ಮಲ್ಲಮ್ಮ; ನನ್ನ ಗಂಡ ಇದ್ದಿದ್ರೆ ಕಪಾಳಕ್ಕೆ ಹೊಡಿತಿದ್ರು!
ಉತ್ತರ ಕರ್ನಾಟಕದ ಸಾಮಾನ್ಯ ಮಹಿಳೆ ಮಲ್ಲಮ್ಮ, ತಮ್ಮ ಸಹಜ ಮಾತುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದಾರೆ. ಇದೀಗ 170ಕೆ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳನ್ನು ಹೊಂದಿರುವ ಅವರು, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ಗೆ ಸ್ಪರ್ಧಿಯಾಗಿ ಪ್ರವೇಶಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ಸಾಮಾನ್ಯ ಮಹಿಳೆ ಮಲ್ಲಮ್ಮ
ಉತ್ತರ ಕರ್ನಾಟಕದ ಸಾಮಾನ್ಯ ಮಹಿಳೆ, ತಮ್ಮ ಸಹಜ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿರುವ ಮಲ್ಲಮ್ಮ ಈ ಬಾರಿಯ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕೇಕ್ ಕತ್ತರಿಸಿ ಬಿಗ್‌ಬಾಸ್ ಮನೆಯತ್ತ ಮಲ್ಲಮ್ಮ ಹೆಜ್ಜೆ ಹಾಕುತ್ತಿದ್ದಾರೆ.
ಯಾರು ಈ ಮಲ್ಲಮ್ಮ?
ಪತಿ ನಿಧನದ ತುತ್ತಿನ ಚೀಲ ತುಂಬಿಸಿಕೊಳ್ಳಲು, ಮಕ್ಕಳನ್ನು ಬೆಳೆಸಲು ಬೆಂಗಳೂರಿನತ್ತ ಮುಖ ಮಾಡಿದವರು ಮಲ್ಲಮ್ಮ. ನೀವು ಈಗಾಗಲೇ ಮಲ್ಲಮ್ಮ ಅವರ ಇನ್‌ಸ್ಟಾಗ್ರಾಂ ಪೇಜ್ ಫಾಲೋ ಮಾಡುತ್ತಿದ್ರೆ ಇವರು ಯಾರು ಅಂತ ನಿಮಗೆ ಗೊತ್ತಿರುತ್ತೆ. ಫ್ಯಾಶನ್ ಡಿಸೈನ್ ಶಾಪ್‌ನಲ್ಲಿ ಸಹಾಯಕಿಯಾಗಿ ಮಲ್ಲಮ್ಮ ಕೆಲಸ ಮಾಡುತ್ತಾರೆ.
170ಕೆ ಫಾಲೋವರ್ಸ್
ಮಲ್ಲಮ್ಮ (mallamma_talks) ಅವರ ಮಾತುಗಳನ್ನು ಕೇಳಿ ಅಲ್ಲಿಯ ಮಾಲೀಕರ ಇವರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದರು. ಪ್ರತಿನಿತ್ಯ ಇವರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಮಲ್ಲಮ್ಮ ಅವರು 170ಕೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಮಲ್ಲಮ್ಮ ಅವರು ತಮ್ಮ ವಿಡಿಯೋದಲ್ಲಿ ಉತ್ತರ ಕರ್ನಾಟಕ ಶೈಲಿಯ ಅಡುಗೆ, ತಮ್ಮೂರಿನ ಜಾತ್ರೆ, ಆಚರಣೆ ಸೇರಿದಂತೆ ಹಲವು ವಿಷಯಗಳನ್ನು ನೋಡುಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.
ಸದಾ ಹಸನ್ಮುಖಿಯಾಗಿರುವ ಮಲ್ಲಮ್ಮ
ಮಲ್ಲಮ್ಮ ಅವರಿಗೆ ತಮ್ಮ ವಿಡಿಯೋಗಳು ಇಷ್ಟೊಂದು ವೈರಲ್ ಆಗುತ್ತೆ ಎಂಬ ವಿಷಯವೂ ಗೊತ್ತಿಲ್ಲ. ಶಾಪ್ ಮಾಲೀಕರಿಂದಾಗಿಯೇ ಇಂದು ಮಲ್ಲಮ್ಮ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಸದಾ ಹಸನ್ಮುಖಿಯಾಗಿರುವ ಮಲ್ಲಮ್ಮ ಅವರು ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡುತ್ತಾರೆ. ಈ ಕಾರಣದಿಂದಲೇ ಬಿಗ್‌ಬಾಸ್‌ಗೆ ಆಯ್ಕೆಯಾಗಿದ್ದಾರೆ ಎಂದು ಹೇಳಬಹುದು.
ಇದನ್ನೂ ಓದಿ: ಇನ್‌ಸ್ಟಾಗ್ರಾಂಗೆ ಗುಡ್‌ಬೈ ಹೇಳಿದ ಮಲ್ಲಮ್ಮ; ಕಾರಣ ಕೇಳಿದ್ರೆ ನಿಮಗೂ ಅಯ್ಯೋ ಅನ್ನಿಸುತ್ತೆ!
ಮಲ್ಲಮ್ಮ ಮಾತು
ಇದೀಗ ಕೇಕ್ ಕತ್ತರಿಸಿ, ಹೂ ನೀಡಿ ಮಲ್ಲಮ್ಮ ಅವರನ್ನು ಕಳುಹಿಸಿಕೊಡಲಾಗಿದೆ. ಇವರ ವಿಡಿಯೋ ಮೇಕರ್ಸ್, ಹೂ ನೀಡಿ ಐ ಲವ್ ಯು ಮಲ್ಲಮ್ಮ ಅಂದಾಗ, ಅಯ್ಯೋ, ಅಂತೇಳಿ ಆ ಪದವೇ ನನಗಿಷ್ಟ ಇಲ್ಲ ಎಂದಿದ್ದಾರೆ. ನಿಮ್ಮ ಗಂಡ ಮಾನಪ್ಪವರು ಇದ್ದಿದ್ರೆ ಏನು ಹೇಳುತ್ತಿದ್ದಿರಬಹುದು ಎಂದು ಮಲ್ಲಮ್ಮ ಅವರನ್ನು ಕೇಳಲಾಗುತ್ತದೆ.
ಇದನ್ನೂ ಓದಿ: Bigg Boss ಸುಂದರ ಮನೆಗೆ ತಗಲೋ ಖರ್ಚೆಷ್ಟು? ದೊಡ್ಮನೆ ರೆಡಿ ಮಾಡಿದ್ದು ಹೇಗೆ? ಕಣ್ಮನ ತಣಿಸೋ ವಿಡಿಯೋ ಇಲ್ಲಿದೆ
ತಮಾಷೆ ಮಾತು
ನನ್ನ ಪತಿ ಮಾನಪ್ಪ ಅವರು ಇದ್ದಿದ್ದರೆ ಕಪಾಳಕ್ಕೆ ಹೊಡಿತಿದ್ರು. ಬೆಂಗಳೂರಿಗೂ ಕಳುಹಿಸುತ್ತಿರಲಿಲ್ಲ ಎಂದು ಹೇಳಿ ಮಲ್ಲಮ್ಮ ನಕ್ಕಿದ್ದಾರೆ. ನಾನು ನಿಮ್ಮೆಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮಲ್ಲಮ್ಮ ಬಿಗ್‌ಬಾಸ್ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: 'ಕ್ವಾಟ್ಲೆ ಕಿಚನ್' ಗ್ರ್ಯಾಂಡ್ ಫಿನಾಲೆಯಲ್ಲಿ Bigg Boss Kannada 12 ಶೋ ಸ್ಪರ್ಧಿಗಳ ಹೆಸರು ರಿವೀಲ್; ಯಾರು?