- Home
- Entertainment
- TV Talk
- Bigg Boss ಅಭಿಷೇಕ್ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್ ನಿರೀಕ್ಷೆ ಸುಳ್ಳಾಗೋಯ್ತು!
Bigg Boss ಅಭಿಷೇಕ್ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್ ನಿರೀಕ್ಷೆ ಸುಳ್ಳಾಗೋಯ್ತು!
ಕಲರ್ಸ್ ಕನ್ನಡದ ಬಿಗ್ ಬಾಸ್ 12 ರಿಂದ ಹೊರಬಂದಿರುವ ನಟ ಅಭಿಷೇಕ್ ಶ್ರೀಕಾಂತ್, ತಮಗೆ ಸಿಕ್ಕ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ. ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಗಿದ್ದು, ಅದರ ಬಗ್ಗೆ ನಟ ಹೇಳಿದ್ದೇನು? ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದ್ದೇಕೆ?

ಹಲವು ಸೀರಿಯಲ್‌ಗಳಲ್ಲಿ ನಟನೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಲಕ್ಷಣ ಧಾರಾವಾಹಿಯಲ್ಲಿ ಮೌರ್ಯ ಪಾತ್ರದ ಮೂಲಕ ಮನೆಮಾತಾಗಿರೋ ನಟ ಅಭಿಷೇಕ್ ಶ್ರೀಕಾಂತ್ ಕ್ಯಾಪ್ಟನ್ ಆಗಿರುವಾಗಲೇ ಬಿಗ್ಬಾಸ್ (Bigg Boss 12) ಮನೆಯಿಂದ ಹೊರಕ್ಕೆ ಬಂದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.
ಸಿನಿಮಾದಲ್ಲಿಯೂ ಪಾತ್ರ
ವಧು , ಶಾಂತಂ ಪಾಪಂ , ಯಜಮಾನಿ , ಲಕ್ಷಣ , ನನ್ನ ದೇವರು , ವಧು ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾದವರು ಅಭಿಷೇಕ್ ಶ್ರೀಕಾಂತ್. ಮಾತ್ರವಲ್ಲದೇ ಪರಮೇಶ್ವರ್ ಗುಂಡ್ಕಲ್ ಅವರ ಕೋಟಿ ಸಿನಿಮಾದಲ್ಲೂ ಅಭಿಷೇಕ್ ಶ್ರೀಕಾಂತ್ ನಟಿಸಿದ್ದಾರೆ.
ಸಹಜವಾದ ಸೆಲೆಬ್ರಿಟಿಗಳು
ಇದೀಗ ಅವರು ಬಿಗ್ಬಾಸ್ 12 ಮನೆಯಿಂದ ಎರಡೂವರೆ ತಿಂಗಳ ಬಳಿಕ ಹೊರಕ್ಕೆ ಬಂದಿದ್ದಾರೆ. ಸಹಜವಾಗಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಮುಂದಿನ ಸೀಸನ್ ಬರುವವರೆಗೂ ಸೆಲೆಬ್ರಿಟಿಗಳಾಗಿಯೇ ಇರುತ್ತಾರೆ. ಅವರಿಗೆ ಎಲ್ಲಾ ಕಡೆಗಳಲ್ಲಿಯೂ ಡಿಮಾಂಡ್ ಹೆಚ್ಚಿರುತ್ತದೆ.
ಕೇಳುವ ಪ್ರಶ್ನೆ ಒಂದೇ
ಅದೇ ರೀತಿ ಸದ್ಯ ಅಭಿಷೇಕ್ ಶ್ರೀಕಾಂತ್ (Bigg Boss Abhishek Shrikanth) ಹಲವು ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಸಾಧಾರಣವಾಗಿ ಎಲ್ಲಿಯೇ ಹೋದರೂ ಮೊದಲು ಕೇಳುವ ಪ್ರಶ್ನೆ ಸಂಭಾವನೆ ಕುರಿತಾಗಿ. ಅದೇ ರೀತಿ ಅಭಿಷೇಕ್ ಅವರಿಗೂ ಕೇಳಲಾಗಿದೆ.
ಒಂದೇ ರೀತಿ ಸಿಗಲ್ಲ
ಅಷ್ಟಕ್ಕೂ ಬಿಗ್ಬಾಸ್ ಮನೆಯೊಳಕ್ಕೆ ಹೋಗುವಾಗ ಎಲ್ಲಾ ಸ್ಪರ್ಧಿಗಳಿಗೂ ಒಂದೇ ರೀತಿಯ ಸಂಭಾವನೆ ನೀಡುವುದಿಲ್ಲ. ಅವರ ದುಡಿಮೆ, ದಿನದ ಸಂಬಳ, ಬಿಗ್ಬಾಸ್ ಮನೆಗೆ ಹೋದರೆ ಅವರಿಗೆ ಆಗಬಹುದಾದ ಹಣದ ನಷ್ಟ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕಿ ದಿನವೊಂದಕ್ಕೆ ಒಂದಿಷ್ಟು ಸಾವಿರದಿಂದ ಲಕ್ಷದ ಹತ್ತಿರ ಹತ್ತಿರ ನೀಡುವುದು ಇದೆ. ಇದು ಬೇರೆ ಬೇರೆ ಭಾಷೆಗಳ ಬಿಗ್ಬಾಸ್ನಲ್ಲಿ ಬೇರೆ ಬೇರೆ ಸಂಭಾವನೆಗಳೂ ಇರುತ್ತವೆ.
ಸಿಕ್ಕಿರೋ ಹಣ ಎಷ್ಟು?
ಅಂದಹಾಗೆ ಅಭಿಷೇಕ್ ಶ್ರೀಕಾಂತ್ ಅವರಿಗೆ ಈ ಎರಡೂವರೆ ತಿಂಗಳಿನಲ್ಲಿ ಸಿಕ್ಕಿರುವ ಸಂಭಾವನೆ ಎಷ್ಟಿರಬಹುದು ಎಂದು ತಿಳಿಯುವ ಆಸೆ ಹಲವರದ್ದು. ಆದರೆ ಬಿಗ್ಬಾಸ್ ಸ್ಪರ್ಧಿಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿರಲಾಗುತ್ತದೆ. ಅವರು ಕೆಲವೊಂದು ಸೀಕ್ರೇಟ್ಗಳನ್ನು ಹೇಳುವಂತಿಲ್ಲ. ಅದರಲ್ಲಿ ಒಂದು ಸಂಭಾವನೆ ವಿಷ್ಯ.
ತೃಪ್ತಿಯಾಗುವ ಸಂಭಾವನೆ
ಅದೇ ರೀತಿ ಅಭಿಷೇಕ್ ಅವರೂ, ನಾನು ನನಗೆ ಸಾಕಾಗುವಷ್ಟು ಸಂಭಾವನೆ ಪಡೆದಿದ್ದೇನೆ. ಕೈತುಂಬ ಹಣ ಸಿಕ್ಕಿದೆ. ನಾನು ಕೇಳಿದ್ದಷ್ಟು ಸಿಕ್ಕಿದೆ ಎನ್ನುವ ಮೂಲಕ ಸಂಭಾವನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ರಿವೀಲ್ ಮಾಡಲಿಲ್ಲ.ಆದ್ದರಿಂದ ಇವರಿಗೆ ಎಷ್ಟು ಸಂಭಾವನೆ ಸಿಗಬಹುದು ಎನ್ನುವ ಲೆಕ್ಕಾಚಾರ ಹಾಕಿದ್ದ ವೀಕ್ಷಕರ ಲೆಕ್ಕಾಚಾರ ಸುಳ್ಳಾಗೋಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

