ಬಿಗ್​ಬಾಸ್​ ಕನ್ನಡ ಸೀಸನ್​ 12 ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿಯ ಮನೆಯನ್ನು ನವರಾತ್ರಿ ವಿಶೇಷವಾಗಿ ಮೈಸೂರು ಅರಮನೆಯ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಈ ಮನೆಯ ನಿರ್ಮಾಣ ಹೇಗೆ ಸಾಗಿದೆ ನೋಡಿ…

ಬಿಗ್​ಬಾಸ್​ ಸೀಸನ್​ 12 (Bigg Boss Kannada Season 12) ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ನಾಳೆನೇ ಮುಹೂರ್ತ ಫಿಕ್ಸ್​ ಆಗಿದೆ. ಇದನ್ನು ನೋಡುವುದಕ್ಕಾಗಿ ಹಲವಾರು ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿ ವಿಶೇಷವಾಗಿ ಮನೆಯನ್ನು ರೆಡಿ ಮಾಡಲಾಗಿದ್ದು, ಅದನ್ನು ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟಕ್ಕೂ ಬಿಗ್​ಬಾಸ್​​ ಮನೆ ನಿರ್ಮಾಣ ಸುಲಭದ ವಿಷಯವೇನಲ್ಲ. ಅದಕ್ಕೆ ಹಲವಾರು ರೀತಿಯಲ್ಲಿ ರೆಡಿ ಮಾಡಿಕೊಳ್ಳಬೇಕಿದೆ. ಅಂದಹಾಗೆ ಈ ಬಾರಿಯ ಮನೆಯಲ್ಲಿ ಹಲವಾರು ವಿಶೇಷಗಳಿದ್ದು, ಅದರ ವಿಡಿಯೋ ಇದಾಗಲೇ ರಿವೀಲ್​ ಆಗಿದೆ. ನವರಾತ್ರಿಯ ಸಂದರ್ಭದಲ್ಲಿಯೇ ಬಿಗ್​ಬಾಸ್​ ಕೂಡ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯ ರೂಪದಲ್ಲಿಯೇ ಈ ಬಾರಿಯ ಬಿಗ್​ಬಾಸ್​ ಮನೆಯನ್ನು ರೂಪಿಸಲಾಗುತ್ತಿದೆ.

ಮನೆಯ ಝಲಕ್​ ರಿವೀಲ್​

ಇದಾಗಲೇ ರಿಲೀಸ್​ ಆಗಿರುವ ವಿಡಿಯೋದಲ್ಲಿ ಮನೆಯ ಝಲಕ್‌ ಕೂಡ ತೋರಿಸಲಾಗಿದೆ. ಕರ್ನಾಟಕದ ಶ್ರೀಮಂತ ಇತಿಹಾಸವನ್ನ ಪ್ರತಿಬಿಂಬಿಸುವಂತೆ ಮನೆಯ ವಿನ್ಯಾಸವನ್ನ ತೋರಿಸಲಾಗಿದೆ. ಮೈಸೂರು ದಸರಾದ ಸಂಕೇತವಾದ ಆನೆಯ ಚಿತ್ರಣಗಳು ಮನೆಯ ಬಾಗಿಲಿನಲ್ಲಿ ಕಂಡುಬರುತ್ತವೆ. ಗಾರ್ಡನ್‌ ಏರಿಯಾ, ರಾಜರ ಯುದ್ಧಗಳನ್ನ ವಾಲ್‌ ಆರ್ಟ್‌ಗಳಲ್ಲಿ ಚಿತ್ರಿಸಿ, ಮನೆಯನ್ನ ಐತಿಹಾಸಿಕ ಯುದ್ಧಭೂಮಿಯಂತೆ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ಇತರ ಸಾಂಸ್ಕೃತಿಕ ಅಂಶಗಳಾದ ಯಕ್ಷಗಾನದ ಮುಖಗಳು ಇಲ್ಲಿ ಕಾಣಬಹುದಾಗಿದೆ.

ಮನೆ ರೆಡಿ ಮಾಡ್ತಿರೋ ವಿಡಿಯೋ ವೈರಲ್​

ಹಾಗಿದ್ದರೆ ಈ ಮನೆಯನ್ನು ರೆಡಿ ಮಾಡಿದ್ದು ಹೇಗೆ, ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ (Colors Kannada) ಇನ್ನೊಂದು ವಿಡಿಯೋ ರಿಲೀಸ್​ ಮಾಡಿದೆ. ಇದರಲ್ಲಿ ಕಾರ್ಮಿಕರು ಈ ಮನೆ ನಿರ್ಮಾಣಕ್ಕೆ ಹೇಗೆಲ್ಲಾ ಕಷ್ಟಪಡುತ್ತಿದ್ದಾರೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರೋ ಸುದ್ದಿಯ ಪ್ರಕಾರ, ಬಿಗ್ ಬಾಸ್ ಮನೆಯನ್ನು ಕೆಡವಿ ಪುನರ್ನಿರ್ಮಿಸಬೇಕಾಗುತ್ತದೆ. ಪ್ರತಿ ಸೀಸನ್‌ಗೂ ಥೀಮ್ ಬದಲಾಗುವುದರಿಂದ ಮನೆಯ ವಿನ್ಯಾಸ ಮತ್ತು ವೆಚ್ಚವೂ ಬದಲಾಗುತ್ತದೆ. ಮನೆಯ ನಿರ್ಮಾಣ, ಒಳಾಂಗಣ ಅಲಂಕಾರ, ತಂತ್ರಜ್ಞಾನ, ಭದ್ರತೆ, ಮತ್ತು ಸಿಬ್ಬಂದಿ ವೆಚ್ಚಗಳನ್ನು ಒಳಗೊಂಡು ಸಾಕಷ್ಟು ಹಣ ಖರ್ಚಾಗುತ್ತದೆ.

ಎಷ್ಟು ಖರ್ಚಾಗತ್ತೆ?

ಆದ್ದರಿಂದ ಪ್ರತಿಸಲ ನಿರ್ಮಾಣಕ್ಕೆ ಸುಮಾರು 3 ಕೋಟಿಯಿಂದ 3.5 ಕೋಟಿ ರೂ. ವೆಚ್ಚ ಆಗುತ್ತದೆ. ಇದರಲ್ಲಿ ಮನೆಯ ವಿನ್ಯಾಸ, ಸೆಟ್‌ನಲ್ಲಿನ ಬದಲಾವಣೆಗಳು, ಭದ್ರತೆ ಮತ್ತು ಕಾರ್ಯಕ್ರಮಕ್ಕೆ ಅಗತ್ಯವಿರುವ ಸಹಾಯಕ ಸಿಬ್ಬಂದಿ ವೆಚ್ಚ ಎಲ್ಲವೂ ಸೇರಿರುತ್ತದೆ. ಮಾತ್ರವಲ್ಲದೇ, ಸೆಟ್‌ಗಳ ನಿರ್ವಹಣೆ ಮತ್ತು ಸ್ಪರ್ಧಿಗಳ ನಿರ್ವಹಣೆಯೂ ಸೇರಿದೆ. ವರದಿಯ ಪ್ರಕಾರ, ಬಿಗ್ ಬಾಸ್ ಮನೆಯಲ್ಲಿ ಅಳವಡಿಸಲಾದ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಬಿಗ್ ಬಾಸ್ ಸೀಸನ್ ಮುಗಿದ ನಂತರ, ಈ ಕ್ಯಾಮೆರಾಗಳನ್ನು ಮರಳಿಸಲಾಗುತ್ತದೆ.

ವಿಶೇಷ ಥೀಮ್​

ಸ್ಪರ್ಧಿಗಳಿಗೆ ಹಾಸಿಗೆಗಳನ್ನು ಕೂಡ ಪ್ರತಿ ಸೀಸನ್‌ಗೂ ಬದಲಾಯಿಸುತ್ತದೆ. ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮನೆಯ ಒಳಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸುವುದರಿಂದ ಇದಕ್ಕೂ ಭಾರೀ ಖರ್ಚು ಬೀಳುತ್ತದೆ. ಮನೆಯ ಒಳಾಂಗಣದ ವಿನ್ಯಾಸಕ್ಕೆ ಕಲಾ ನಿರ್ದೇಶಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿ ಸೀಸನ್‌ಗೂ ವಿಶೇಷವಾದ ಥೀಮ್‌ನಲ್ಲಿ ಮನೆ ನಿರ್ಮಾಣ ಮಾಡುತ್ತಾರೆ.

View post on Instagram