ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಮುಂದಾದ ಜಯಂತ್: ಶಾಂತಮ್ಮ ಕೊಟ್ಟ ಐಡಿಯಾ ಸೂಪರ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡರ ಬಂಧನದಿಂದ ಹಲವು ತಿರುವುಗಳು ಸಂಭವಿಸುತ್ತಿವೆ. ಭಾವನಾ ಗೊಂದಲದಲ್ಲಿ ಸಿಲುಕಿದ್ದರೆ, ಸೈಕೋ ಜಯಂತ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿಯ ಪಾತ್ರಗಳ ಜೀವನದಲ್ಲಿ ರೋಚಕ ತಿರುವುಗಳು ಸಂಭವಿಸುತ್ತಿವೆ. ಅರ್ಧ ಸತ್ಯ ತಿಳಿದ ಸಿದ್ದೇಗೌಡರು ಜೈಲುಪಾಲಾಗಿದ್ದಾರೆ. ತನ್ನ ಮದುವೆಯನ್ನು ನಿಲ್ಲಿಸಲು ಸಿದ್ದೇಗೌಡರು ಕಾರ್ ಆಕ್ಸಿಡೆಂಟ್ ಮಾಡಿದ್ರಾ ಅನ್ನೋ ಗೊಂದಲಲ್ಲಿ ಭಾವನಾ ಸಿಲುಕಿದ್ದಾಳೆ.
ಭಾವನಾಳಿಂದಲೇ ಮಗ ಜೈಲು ಸೇರಿದ್ದಾನೆ ಎಂದು ಆತನ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಇತ್ತ ಸಿದ್ದೇಗೌಡರ ತಂದೆ ಜವರೇಗೌಡರು ಸಹ ಅವಮಾನದಿಂದ ಅಜ್ಞಾತಸ್ಥಳಕ್ಕೆ ಸೇರಿಕೊಂಡಿದ್ದಾರೆ. ಇದೀಗ ಭಾವನಾ ಸಹಾಯಕ್ಕೆ ಸೈಕೋ ಜಯಂತ್ ಎಂಟ್ರಿ ಕೊಡುತ್ತಿದ್ದಾನೆ. ಇದಕ್ಕೆಲ್ಲಾ ಕಾರಣ ಜಯಂತ್ ಮನೆಯಲ್ಲಿರುವ ಶಾಂತಮ್ಮ.
ಮೊಬೈಲ್‌ನಲ್ಲಿ ಸಿದ್ದೇಗೌಡರು ಜೈಲು ಸೇರಿರುವ ನ್ಯೂಸ್ ಜಯಂತ್ ನೋಡುತ್ತಿರುತ್ತಾನೆ. ಆಗ ಅಲ್ಲಿಗೆ ಬಂದ ಶಾಂತಮ್ಮನ ಮುಂದೆ, ಜೈಲು ಸೇರಿರುವ ಸಿದ್ದೇಗೌಡರು, ಜಾಹ್ನವಿಯ ಅಕ್ಕನ ಗಂಡ. ಜಾನು ಮತ್ತು ಭಾವನಾ ತುಂಬಾ ಅನ್ಯೋನ್ಯವಾಗಿದ್ದರು. ಇಲ್ಲಿಗೆ ಬಂದಾಗಲೂ ಜಾಹ್ನವಿಯನ್ನು ಭಾವನಾ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದರು. ಭಾವನಾ ಮಿತಭಾಷಿ, ಅವರಿಗೆ ಇಂತಹ ಕಷ್ಟ ಬಂದಿದೆ ಎಂದು ಜಯಂತ್ ಮರುಕಪಟ್ಟಿದ್ದಾನೆ.
ಜಯಂತ್ ಮಾತುಗಳನ್ನು ಕೇಳಿದ ಶಾಂತಮ್ಮ, ನೀನು ಈ ಕೇಸ್ ಬಗ್ಗೆ ಸ್ವಲ್ಪ ಗಮನ ಕೊಡಬೇಕಪ್ಪ. ಭಾವನಾಗೆ ಸಹಾಯ ಮಾಡಿದ್ರೆ ನಿನ್ನ ಹೆಂಡ್ತಿ ಜಾಹ್ನವಿ ಆತ್ಮಕ್ಕೂ ಶಾಂತಿ ಸಿಗುತ್ತದೆ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾಳೆ. ಶಾಂತಮ್ಮಳ ಮಾತಿನಲ್ಲಿ ಅರ್ಥವಿದೆ ಎಂದು ಜಯಂತ್‌ಗೆ ಅನ್ನಿಸುತ್ತದೆ.
ಸಿದ್ದೇಗೌಡರನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಂದ್ರೆ ಭಾವನಾ ಅವರಿಗೆ ಸಹಾಯ ಮಾಡಿದಂತಾಗುತ್ತದೆ. ಭಾವನಾ ಅವರು ಖುಷಿಯಾದ್ರೆ, ಜಾಹ್ನವಿಯನ್ನು ಹುಡುಕಲು ಸಹಾಯ ಮಾಡುತ್ತಾರೆ. ಇದರಿಂದ ತನ್ನ ಕೆಲಸಗ ಸಹಾಯವಾಗುತ್ತದೆ ಎಂದು ಸೈಕೋ ಜಯಂತ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾನೆ. ಇತ್ತ ಜಾನು ಸಹ ಮನೆಯ ವಿಷಯವನ್ನು ಟಿವಿಯಲ್ಲಿ ನೋಡಿ ಕಣ್ಣೀರು ಹಾಕುತ್ತಿದ್ದಾಳೆ. ಜಯಂತ್‌ನಿಂದಲೇ ಈ ಅಪಘಾತದ ಕೇಸ್ ಸತ್ಯ ಹೊರಬೀಳೋದು ಖಚಿತವಾಗಿದೆ.
ಇತ್ತ ವೆಂಕಿ ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ್ದಾನೆ. ಬಿಡುಗಡೆ ಆದೇಶ ಸಿಗುತ್ತಿದ್ದಂತೆ ಜಾಹ್ನವಿ ಬಗ್ಗೆ ವೆಂಕಿ ವಿಚಾರಿಸಿದ್ದಾನೆ. ಜಾನು ಮನೆಯಲ್ಲಿ ಚೆನ್ನಾಗಿದ್ದಾಳೆಂದು ಭಾವನಾ ಸುಳ್ಳು ಹೇಳಿದ್ದಾಳೆ. ಜಾನು ಸಾವಿನ ವಿಷಯ ತಿಳಿದ್ರೆ ವೆಂಕಿಗೆ ಹೇಗೆ ಸ್ಪಂದಿಸುತ್ತಾನೆ ಅನ್ನೋ ಆತಂಕ ಶ್ರೀನಿವಾಸ್‌ಗೆ ಎದುರಾಗಿದೆ.