- Home
- Entertainment
- TV Talk
- Lakshmi Nivasa Serial ಟೀಂನಿಂದ ಹೊರಬಿದ್ದ ನಟಿ! ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ರಿಯಲ್ ತಂಗಿ ಎಂಟ್ರಿ!
Lakshmi Nivasa Serial ಟೀಂನಿಂದ ಹೊರಬಿದ್ದ ನಟಿ! ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ರಿಯಲ್ ತಂಗಿ ಎಂಟ್ರಿ!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ.

ಹೌದು, ಯುಕ್ತಾ ಅವರು ಯಾವ ಕಾರಣಕ್ಕೆ ಈ ಧಾರಾವಾಹಿ ಬಿಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಯುಕ್ತಾ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ. ಅವರು ಯಾರು ಎಂಬುದೇ ಇಲ್ಲಿರುವ ಕುತೂಹಲ ಆಗಿದೆ.
ಇಷ್ಟುದಿನಗಳಿಂದ ವಿಶ್ವ-ತನು ಪಾತ್ರ ವೀಕ್ಷಕರಿಗೆ ತುಂಬ ಇಷ್ಟ ಆಗಿತ್ತು. ಈಗ ಪಾತ್ರ ಬದಲಾವಣೆ ಆಗಿದೆ.
ಅಂದಹಾಗೆ ಮಹಾಲಕ್ಷ್ಮೀ ಎನ್ನುವವರು ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಕುಬುಸ, ಥಗ್ಸ್ ಆಫ್ ರಾಮಘಡ, ಸ್ವಪ್ನ ಮಂಟಪ ಮುಂತಾದ ಸಿನಿಮಾಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದರು.
ಅಂದಹಾಗೆ ಧನಂಜಯ ಅವರ ರಿಯಲ್ ತಾಯಿ ಈ ಧಾರಾವಾಹಿಯಲ್ಲಿ ಚೆಲುವು ತಾಯಿಯಾಗಿ ನಟಿಸುತ್ತಿದ್ದಾರೆ. ಈಗ ತನು ಜಾಗಕ್ಕೆ ಅವರ ರಿಯಲ್ ತಾಯಿ ಎಂಟ್ರಿ ಕೊಟ್ಟಿದ್ದಾರೆ.
ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ-ಮಗಳು ನಟಿಸುತ್ತಿರೋದು ಮಾತ್ರ ಖುಷಿಯ ವಿಚಾರ. ಅಷ್ಟೇ ಅಲ್ಲದೆ ಬಹಳ ಅಪರೂಪ ಎನ್ನಬಹುದು.
ಈ ಬಗ್ಗೆ ಸಿದ್ದೇಗೌಡ್ರು ಪಾತ್ರಧಾರಿ ನಟ ಧನಂಜಯ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, “ನನ್ನ ತಂಗಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ನಿಮ್ಮ ಆಶೀರ್ವಾದ ಇರಲಿ” ಎಂದು ಹೇಳಿದ್ದಾರೆ.