- Home
- Entertainment
- TV Talk
- ಸುಷ್ಮಾ ರಾವ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್, ಮುಕ್ತಾಯದ ಹಂತದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ?
ಸುಷ್ಮಾ ರಾವ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್, ಮುಕ್ತಾಯದ ಹಂತದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ?
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಪ್ರಸಿದ್ಧ ಸೀರಿಯಲ್ ಭಾಗ್ಯಲಕ್ಷ್ಮಿ ಮುಕ್ತಾಯ ಹಂತಕ್ಕೆ ಬಂದಿದ್ಯಾ? ಸೀರಿಯಲ್ ಮುಕ್ತಾಐ ಆಗೋದು ಯಾವಾಗ? ಈ ಟೈಂನಲ್ಲಿ ಇನ್ಮುಂದೆ ಯಾವ ಸೀರಿಯಲ್ ಪ್ರಸಾರ ಆಗುತ್ತೆ? ಗೊಒ

ಭಾಗ್ಯಲಕ್ಷ್ಮೀ ಸೀರಿಯಲ್
ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ 7 ಗಂಟೆಗೆ ಪ್ರಸಾರ ಆಗ್ತಿರುವ ಸೀರಿಯಲ್ ಭಾಗ್ಯಲಕ್ಷ್ಮೀ ಅಭಿಮಾನಿಗಳಿಗೆ ಬೇಸರದ ಸುದ್ದಿ ಒಂದಿದೆ. ಸೀರಿಯಲ್ ಶೀಘ್ರವೇ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಇದೆ. ಜೈ ಮಾತಾ ಕಂಬೈನ್ಸ್ ನಲ್ಲಿ ಈ ಧಾರಾವಾಹಿ ಮೂಡಿ ಬರ್ತಿದೆ. ಅಕ್ಟೋಬರ್ 10, 2022 ರಂದು ಶುರುವಾದ ಈ ಸೀರಿಯಲ್ ಸತತ ಮೂರುವರೆ ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದೆ. ಕೆಲ ದಿನಗಳ ಹಿಂದೆ ಸೀರಿಯಲ್ ಮುಕ್ತಾಯವಾಗುತ್ತೆ ಎನ್ನುವ ಸುದ್ದಿ ಇತ್ತು. ಆದ್ರೆ ನಿರ್ದೇಶಕರು ಆದಿ ಎಂಟ್ರಿಕೊಟ್ಟು, ಕಥೆಗೆ ಹೊಸ ಟ್ವಿಸ್ಟ್ ನೀಡಿದ್ದರು.

ಭಾಗ್ಯಲಕ್ಷ್ಮೀ ಕಥೆ ಏನು?
ಭಾಗ್ಯ ಸೀರಿಯಲ್ ನಲ್ಲಿ ಮಹಿಳೆಯೊಬ್ಬಳ ಹೋರಾಟವನ್ನು ಕಥೆಯಾಗಿ ತೋರಿಸಲಾಗಿದೆ. ಸಂಸಾರದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಎದೆಗುಂದದೆ ಎದುರಿಸುವ ಭಾಗ್ಯಾಗೆ ಆಕೆ ಅತ್ತೆಯೇ ಬೆಂಬಲವಾಗಿ ನಿಂತಿದ್ದಾಳೆ. ಮಗ ತಾಂಡವ್ ಇನ್ನೊಂದು ಮದುವೆಯಾಗಿ, ಸೊಸೆಗೆ ಮೋಸ ಮಾಡ್ತಿದ್ದಾನೆ ಎಂಬುದು ಗೊತ್ತಾಗ್ತಿದ್ದಂತೆ ಸೊಸೆ ಪರ ನಿಂತ ಅತ್ತೆ ಕುಸುಮಾ, ಸೊಸೆಗೆ ಇನ್ನೊಂದು ಮದುವೆ ಮಾಡಿಸಿದ್ದಾಳೆ. ಗಂಡನ ಪ್ರೀತಿ ಇಲ್ಲದೆ ಎರಡು ಮಕ್ಕಳ ಜೊತೆ ಹೋರಾಟದ ಜೀವನ ನಡೆಸಿದ ಭಾಗ್ಯಾ ಎಲ್ಲ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾಳೆ.
ಭಾಗ್ಯಾ ಸೀರಿಯಲ್ ನಲ್ಲಿ ಈಗೇನಾಗ್ತಿದೆ?
ತಾಂಡವ್ ಮೊಸ ಬಯಲಾಗಿ, ಆತ ಜೈಲು ಸೇರಿದ ಮೇಲೆ ಆದಿ ಹಾಗೂ ಭಾಗ್ಯಾ ಮದುವೆ ನಡೆದಿದೆ. ಭಾಗ್ಯಾ, ಆದಿ ಸಂಸಾರದಲ್ಲಿ ಹೊಂದಿಕೊಳ್ಳುವ ಎಲ್ಲ ಪ್ರಯತ್ನ ನಡೆಸಿದ್ದಾಳೆ. ಆದ್ರೆ ಮೀನಾಕ್ಷಿ ಹಾಗೂ ಕನ್ನಿಕಾ, ಭಾಗ್ಯಾ ಜೀವನದಲ್ಲಿ ವಿಲನ್ ಆಗಿ ಹೊಸ ಆಟ ಶುರುಮಾಡಿದ್ದಾರೆ. ಆದಿ ಹಾಗೂ ಭಾಗ್ಯಾ ಹನಿಮೂನ್ ಗೆ ಹೊರಟಿದ್ದು, ಮೀನಾಕ್ಷಿ ಇದನ್ನು ತಪ್ಪಿಸುವ ಪ್ರಯತ್ನ ನಡೆಸಿ ವಿಫಲವಾಗಿದ್ದಾಳೆ. ಆದಿ ಮೇಲೆ ಭಾಗ್ಯಾಗೆ ಪ್ರೀತಿ ಚಿಗುರುತ್ತಿದ್ದು, ಆದಿಯ ಶುದ್ಧ ಪ್ರೀತಿಗೆ ಭಾಗ್ಯಾ ಶರಣಾಗ್ತಿದ್ದಾಳೆ.
ಏನಾಗ್ಬಹುದು?
ಮೀನಾಕ್ಷಿ ಜೀವನದಲ್ಲಿ ದೊಡ್ಡ ಘಟನೆಯೊಂದು ನಡೆದಿದೆ. ಆದಿ ಅಮ್ಮನ ಸಾವಿಗೆ ಮೀನಾಕ್ಷಿ ಕಾರಣವಾ ಎನ್ನುವ ಅನುಮಾನ ವೀಕ್ಷಕರಲ್ಲಿದೆ. ನಿರ್ದೇಶಕರು ಮೀನಾಕ್ಷಿ ಜೀವನದ ಸತ್ಯವನ್ನು ವೀಕ್ಷಕರಿಗೆ ತಿಳಿಸಬೇಕಿದೆ. ಜೊತೆಗೆ ಭಾಗ್ಯಾಳನ್ನು ಕನ್ನಿಕಾ ಒಪ್ಪಿಕೊಳ್ತಾಳಾ? ಭಾಗ್ಯಾ, ಆದಿ ಮನೆಯಲ್ಲಿ ಸುಖ ಸಂಸಾರ ನಡೆಸ್ತಾಳಾ? ಈ ಎಲ್ಲ ಪ್ರಶ್ನೆಗೆ ನಿರ್ದೇಶಕರು ಉತ್ತರ ನೀಡಿ ಸೀರಿಯಲ್ ಗೆ ಸುಖಾಂತ್ಯ ಹೇಳುವ ಸಾಧ್ಯತೆ ಇದೆ. ಏನಿಲ್ಲ ಅಂದ್ರೂ ಇನ್ನೊಂದು ತಿಂಗಳು ಸೀರಿಯಲ್ ಓಡೋದು ಗ್ಯಾರಂಟಿ.
ಅಗ್ನಿಸಾಕ್ಷ್ಮಿ ಸೀರಿಯಲ್
ಭಾಗ್ಯಲಕ್ಷ್ಮೀ ಸೀರಿಯಲ್ ಮುಗಿದ್ರೆ ಆ ಸಮಯದಲ್ಲಿ ಅಗ್ನಿಸಾಕ್ಷಿ ಸೀರಿಯಲ್ ಪ್ರಸಾರ ಆಗುವ ಸಾಧ್ಯತೆ ಇದೆ. ಈಗಾಗಲೇ ಅಗ್ನಿಸಾಕ್ಷಿ ಸೀರಿಯಲ್ ಪ್ರೋಮೋ ಪ್ರಸಾರವಾಗಿದೆ. ಆದ್ರೆ ಇನ್ನೂ ಟೈಂ ರಿವೀಲ್ ಆಗಿಲ್ಲ. ಹಾಗಾಗಿ ಭಾಗ್ಯಲಕ್ಷ್ಮೀ ಮುಗಿತಿದ್ದಂತೆ ಅಗ್ನಿಸಾಕ್ಷಿ ಬರುತ್ತೆ ಅಂತ ವೀಕ್ಷಕರು ಗೆಸ್ ಮಾಡ್ತಿದ್ದಾರೆ.
ವೀಕ್ಷಕರು ಹೇಳೋದೇನು?
ಭಾಗ್ಯಲಕ್ಷ್ಮೀ ಸೀರಿಯಲ್ ಮುಗಿತಿದೆ ಎನ್ನುವ ಸುದ್ದಿ ಕೆಲ ವೀಕ್ಷಕರಿಗೆ ಖುಷಿ ನೀಡಿದೆ. ಭಾಗ್ಯ, ಆದಿ ಮದುವೆ ಆಗ್ದೆ ಜೀವನ ನಡೆಸ್ತಾಳೆ ಅಂದ್ಕೊಂಡ ಕೆಲ ವೀಕ್ಷಕರು ಭಾಗ್ಯ – ಆದಿ ಜೋಡಿ ಒಪ್ಪಿಕೊಳ್ತಿಲ್ಲ. ಹಾಗಾಗಿ ಸೀರಿಯಲ್ ಮುಗಿದ್ರೆ ಖುಷಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಭಾಗ್ಯ ಆಕ್ಟಿಂಗ್ ಮಿಸ್ ಮಾಡಿಕೊಳ್ಳೋದಾಗಿ ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

