ಸಿಸಿಎಲ್‌ನಲ್ಲಿ ಚಂದನ್‌ ಕುಮಾರ್‌ ಬ್ಯುಸಿ; ಮನೆಯಲ್ಲಿರೋ ಹುಡುಗನ ಜೊತೆ ʼವ್ಯಾಲಂಟೈನ್ಸ್‌ ಡೇʼ ಆಚರಿಸಿದ Kavitha Gowda!

ʼಲಕ್ಷ್ಮೀ ಬಾರಮ್ಮʼ, ʼವಿದ್ಯಾ ವಿನಾಯಕʼ ಧಾರಾವಾಹಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ಕವಿತಾ ಗೌಡ ಅವರು ʼಪ್ರೇಮಿಗಳ ದಿನʼದಂದು ಹೊಸ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಸಿಸಿಎಲ್‌ನಲ್ಲಿ ಪತಿ ಬ್ಯುಸಿ ಇದ್ರೆ, ಮನೆಯಲ್ಲಿರುವ ಮಗನ ಜೊತೆ ಈ ವ್ಯಾಲಂಟೈನ್‌ ಡೇ ಆಚರಿಸಿದ್ದಾರೆ. 

lakshmi baramma kannada serial kavitha gowda celebrate valentine s day with her son

ಇಂದು ʼಪ್ರೇಮಿಗಳ ದಿನʼ. ಪ್ರೀತಿಸೋರು ನಮ್ಮ ಜೊತೆಗಿದ್ರೆ ನಮಗೆ ಎಲ್ಲ ದಿನವೂ ʼಪ್ರೇಮಿಗಳ ದಿನʼ ಎನ್ನೋದು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಈ ದಿನ ವಿರೋಧಿಸುವವರೂ ಇದ್ದಾರೆ ಎನ್ನೋದನ್ನು ಮರೆಯಬಾರದು. ಇವೆಲ್ಲ ಚರ್ಚೆಗಳ ಮಧ್ಯೆ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ನಟಿ ಕವಿತಾ ಗೌಡ ಅವರು ʼಪ್ರೇಮಿಗಳ ದಿನʼದ ಶುಭಾಶಯ ತಿಳಿಸಿದ್ದಾರೆ. 

ಕವಿತಾ ಗೌಡ ಪೋಸ್ಟ್‌ ಏನು? 
ಕವಿತಾ ಗೌಡ ಅವರು “ನಾನು ತಾಯ್ತನವನ್ನು ಇಷ್ಟೊಂದು ಎಂಜಾಯ್‌ ಮಾಡ್ತೀನಿ ಅಂತ ಗೊತ್ತಿರಲಿಲ್ಲ. ಇವನ ಮುಖವನ್ನು ನೋಡುತ್ತ ಐದು ತಿಂಗಳು ಕಳೆಯಿತು. ನಮಗೆ ಸಿಕ್ಕಿರುವ ಕ್ಯೂಟ್‌ ಆಶೀರ್ವಾದ ಇದು. ಈಗ ನಾನು ಮಗುವಿನ ತಾಯಿಯಾಗಿ ಪ್ರೇಮಿಗಳ ದಿನ ದಿನವನ್ನು ಆಚರಿಸುವೆ. ಹ್ಯಾಪಿ ವ್ಯಾಲಂಟೈನ್‌ ಡೇ ಮುದ್ದು ಬಂಗಾರ. ನನ್ನ ಪತಿಗೂ ಪ್ರೇಮಿಗಳ ದಿನದ ಶುಭಾಶಯಗಳು. ಚಂದನ್‌ ಕುಮಾರ್‌ ಸಿಸಿಎಲ್‌ ಪ್ರಯುಕ್ತ ದೂರದಲ್ಲಿದ್ದಾರೆ. ನಿಮ್ಮನ್ನು ಮಿಸ್‌ ಮಾಡಿಕೊಳ್ತಿದ್ದೀವಿ” ಎಂದು ಹೇಳಿದ್ದಾರೆ.

 

ಉದ್ಯಮಿಯೂ ಹೌದು! 
ಸದ್ಯ ಚಂದನ್‌ ಕುಮಾರ್‌ ಅವರು ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ತಂಡದಲ್ಲಿ ಆಟ ಆಡುತ್ತಿದ್ದಾರೆ. ಹೀಗಾಗಿ ಅವರು ಕ್ರಿಕೆಟ್‌ ತಯಾರಿ, ಪಂದ್ಯ ಆಡೋದರಲ್ಲಿಯೇ ಬ್ಯುಸಿ ಇದ್ದಾರೆ. ಇನ್ನೊಂದು ಕಡೆ  ಕವಿತಾ ಗೌಡ ಅವರು ತಾಯ್ತನವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಚಂದನ್‌ ಹಾಗೂ ಕವಿತಾ ಗೌಡ ಅವರು ಉದ್ಯಮಿಗಳೂ ಹೌದು. ಇವರ ಒಡೆತನದಲ್ಲಿ ಪ್ರೋಟೀನ್‌ ಬಾರ್‌, ಹೋಟೆಲ್‌ಗಳು ಇವೆ. 

ಕಿಚ್ಚ ಸುದೀಪ್‌ ಬದಲು ಹುಚ್ಚ ಸುದೀಪ್ ಎಂದುಬಿಟ್ಟ ಕೆ.ಮಂಜು; ಪ್ಯಾಚಪ್ ಮಾಡಿದ್ದು ಹೇಗೆ ನೋಡಿ....

ಲವ್‌ಸ್ಟೋರಿ! 
ಆರಂಭದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಚಂದನ್‌ ಅವರು ಹೀರೋ ಆಗಿದ್ದರು. ಆ ನಂತರ ಈ ಸೀರಿಯಲ್‌ಗೆ ಕವಿತಾ ಗೌಡ ಅವರು ಚಿನ್ನು ಪಾತ್ರದಲ್ಲಿ ನಟಿಸಲು ಆರಂಭಿಸಿದರು. ಆಗ ಇವರ ಮಧ್ಯೆ ಸ್ನೇಹ ಶುರು ಆಗಿತ್ತು. ಚಂದನ್‌ ಗೌಡ ಅವರು ಧಾರಾವಾಹಿಯಿಂದ ಹೊರನಡೆದರು. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಕವಿತಾ ಗೌಡ ಅವರು ಅರ್ಧಕ್ಕೆ ಧಾರಾವಾಹಿ ಬಿಟ್ಟರು. ಇವರಿಬ್ಬರು ಪರಸ್ಪರ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾದರು. ಆದರೂ ಇವರ ಮಧ್ಯದ ಸ್ನೇಹ ಹಾಗೆಯೇ ಇತ್ತು. ಕೊರೊನಾ ಸಮಯದಲ್ಲಿ ಈ ಜೋಡಿ ಇನ್ನೂ ಹೆಚ್ಚಿನ ಸಮಯ ಕಳೆದಿದೆ, ಆಗ ಇವರ ಮಧ್ಯೆ ಪ್ರೀತಿ ಹುಟ್ಟಿದೆ. ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಸರಳವಾಗಿ ಮದುವೆಯಾಗಿದೆ. 

ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!

2021 ಮೇ 14ರಂದು ಈ ಜೋಡಿ ಮದುವೆಯಾಗಿತ್ತು. ಕೊರೊನಾ ಕಾರಣಕ್ಕೆ ಚಿತ್ರರಂಗದಿಂದ ಕೆಲವೇ ಕೆಲವರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ವಿಶೇಷ ಫೋಟೋಶೂಟ್‌ ಮೂಲಕ ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ ಹೇಳಿಕೊಂಡಿತ್ತು. ಅದಾದ ನಂತರ ಚಂದನ್‌ ಅವರು ಗ್ರ್ಯಾಂಡ್‌ ಆಗಿ ಪತ್ನಿಯ ಸೀಮಂತ ಆಚರಿಸಿದ್ದರು. ಇನ್ನು ಕಳೆದ ಅಕ್ಟೋಬರ್‌ನಲ್ಲಿ ಕವಿತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಕವಿತಾ ಗೌಡ, ಚಂದನ್‌ ಕುಮಾರ್‌ ಅವರು ಈಗಾಗಲೇ ಮಗನ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಮಗನ ಜೊತೆಗೆ ಅವರ ಫೋಟೋಶೂಟ್‌ ಕೂಡ ಆಗಿದೆ. ಇನ್ನು ಚಂದನ್‌ ಅವರು ಮಗನಿಗೆ ಐ ಲವ್‌ ಯು ಎಂದು ಹೇಳಿಕೊಟ್ಟಿದ್ದು, ಮಗ ಕೂಡ ಮುದ್ದಾಗಿ ಐ ಲವ್‌ ಯು ಎಂದು ಹೇಳಿರುವ ವಿಡಿಯೋವಂತೂ ತುಂಬ ವೈರಲ್‌ ಆಗಿದೆ. ಮಗನ ಆರೈಕೆಯಲ್ಲಿ ಬ್ಯುಸಿ ಇರುವ ಕವಿತಾ ಮತ್ತೆ ಯಾವಾಗ ತೆರೆ ಮೇಲೆ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ. 
 

Latest Videos
Follow Us:
Download App:
  • android
  • ios