ಸುಣ್ಣಬಣ್ಣ ಕಮ್ಮಿ ಮಾಡಿ ಮೇಡಂ..; 'ಲಕ್ಷಣ' ನಟಿ ಮೇಕಪ್ ಫೋಟೋಗಳು ವೈರಲ್
ನೆಚ್ಚಿನ ನಟಿ ಕಡಿಮೆ ಮೇಕಪ್‌ನಲ್ಲಿ ಧರಿಸಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ 'ಲಕ್ಷಣ' ಧಾರಾವಾಹಿ ವೀಕ್ಷಕರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಗೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದ 'ಲಕ್ಷಣ' ಧಾರಾವಾಹಿ ಮೂಲಕ ಜರ್ನಿ ಆರಂಭಿಸಿದವರು ವಿಜಯಲಕ್ಷ್ಮಿ.
ಕಪ್ಪು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮನಸ್ಸಿಗೆ ಹತ್ತಿರವಾದವರು ಅಂದ್ರೆ ವಿಜಯಲಕ್ಷ್ಮಿ. ಕಡಿಮೆ ಅವಧಿಯಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿಬಿಟ್ಟರು.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಿಯಾಲಿಟಿ ಶೋನಲ್ಲಿ ಲಕ್ಷಣ ಸ್ಪರ್ಧಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಖಾಸಗಿ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡುತ್ತಿದ್ದಾರೆ.
ಹೌದು! ಬಿಡುವಿನ ಸಮಯದಲ್ಲಿ ಮೇಕಪ್ ಆರ್ಟಿಸ್ಟ್‌ಗಳ ಜೊತೆ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಭವ್ಯಾ ಗೌಡ ಎಂಬ ಮೇಕಪ್ ಆರ್ಟಿಸ್ಟ್ ಜೊತೆ ಕೆಲಸ ಮಾಡಿರುವ ಲುಕ್ ಸಖತ್ ವೈರಲ್ ಆಗುತ್ತಿದೆ.
ಗೋಲ್ಡನ್ ಕ್ರೀಮ್ ಬಣ್ಣದ ಸೀರೆಯಲ್ಲಿ ಮಹಾ ರಾಣಿ ರೀತಿ ವಿಜಯಲಕ್ಷ್ಮಿ ಕಾಣಿಸುತ್ತಿದ್ದಾರೆ. ಹೇರ್‌ಸ್ಟೈಲ್ ಕೂಡ ಸಖತ್ ಸಿಂಪಲ್ ಆಗಿದ್ದು ಗುಲಾಬಿ ಹೂಗಳು ಅಟ್ರಾಕ್ಸ್ ಮಾಡುತ್ತಿದೆ ಎನ್ನಬಹುದು.
ಏನ್ ಮೇಡಂ ನೀವು ಇಷ್ಟೋಂದು ಮೇಕಪ್ ಮಾಡಿಕೊಳ್ಳುವುದಾ? ನೀವು ಇದ್ದ ಕಲರ್ಸ್ ನಮಗೆ ಇಷ್ಟ ದಯವಿಟ್ಟು ಈ ಸುಣ್ಣಬಣ್ಣ ಕಡಿಮೆ ಮಾಡಿದರೆ ನಿಮ್ಮ ಅಭಿಮಾನಿಗಳಿಗೆ ಖುಷಿಯಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.