- Home
- Entertainment
- TV Talk
- Karna Serial: ಯಾರೂ ಊಹಿಸದ ತೀರ್ಮಾನ ತೆಗೆದುಕೊಂಡುಬಿಟ್ಟಳು ನಿತ್ಯಾ! ಮುಂದಾಗೋದು ಘೋರ ದುರಂತ?
Karna Serial: ಯಾರೂ ಊಹಿಸದ ತೀರ್ಮಾನ ತೆಗೆದುಕೊಂಡುಬಿಟ್ಟಳು ನಿತ್ಯಾ! ಮುಂದಾಗೋದು ಘೋರ ದುರಂತ?
ಕರ್ಣ ಧಾರಾವಾಹಿಯಲ್ಲಿ, ರಮೇಶ್ ಕುತಂತ್ರದಿಂದ ತೇಜಸ್ ಮತ್ತು ನಿತ್ಯಾ ಮದುವೆ ಮುರಿದುಬಿದ್ದಿದೆ. ತನ್ನಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದು ಭಾವಿಸಿದ ನಿಧಿ, ತಾನು ಗರ್ಭಿಣಿ ಎಂಬ ಸತ್ಯವನ್ನು ಎಲ್ಲರ ಮುಂದೆ ಹೇಳಿದ್ದಾಳೆ. ಆದರೆ, ಆಗಿದ್ದೇನು?

ಮುರಿದು ಬಿದ್ದ ಮದುವೆ
ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ತೇಜಸ್ ಮತ್ತು ನಿತ್ಯಾ ಮದುವೆ ಮುರಿದುಬಿದ್ದಿದೆ. ರಮೇಶ್ ಕುತಂತ್ರದಿಂದ ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ಕರ್ಣನದ್ದೇ ಎಂದು ತೇಜಸ್ ತಿಳಿದುಕೊಂಡು ಮದುವೆಯಾಗದೇ ಶಾಪ ಹಾಕಿ ಹೋಗಿದ್ದಾನೆ.
ಭರ್ಜರಿ ಪಾರ್ಟಿ
ಅದೇ ಇನ್ನೊಂದೆಡೆ, ನಿತ್ಯಾ ಮತ್ತು ತೇಜಸ್ ಮದುವೆಯಾಗುತ್ತದೆ ಎಂದು ನಂಬಿದ್ದ ಕರ್ಣ, ತನ್ನ ಮತ್ತು ನಿಧಿಯ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳುವುದಕ್ಕಾಗಿ ಭರ್ಜರಿ ಪಾರ್ಟಿ ಅರೇಂಜ್ ಮಾಡಿದ್ದ. ಎಲ್ಲರೂ ಅದರ ಖುಷಿಯಲ್ಲಿ ಇದ್ದಾರೆ. ಕರ್ಣ ಮತ್ತು ನಿತ್ಯಾ ಬರುತ್ತಿದ್ದಂತೆಯೇ ಎಲ್ಲರೂ ಏನು ಖುಷಿಯ ವಿಷಯ ಎಂದು ಕೇಳಿದ್ದಾರೆ.
ಸತ್ಯ ಹೇಳುವ ನಿರ್ಧಾರ
ತನ್ನಿಂದ ಎಲ್ಲರ ಲೈಫ್ ಹಾಳಾಗುತ್ತಿದೆ ಎಂದುಕೊಂಡ ನಿಧಿ, ತಾನು ಗರ್ಭಿಣಿ ಎನ್ನುವ ಸತ್ಯವನ್ನು ಹೇಳುವ ಮೂಲಕ ಎಲ್ಲ ವಿಷಯಕ್ಕೂ ತೆರೆ ಎಳೆಯುವ ನಿರ್ಧಾರಕ್ಕೆ ಬಂದಿದ್ದಾಳೆ.
ಗರ್ಭಿಣಿಯ ಸತ್ಯ
ಇದೇ ಕಾರಣಕ್ಕೆ ಮೈಕ್ ಹಿಡಿದು ಎಲ್ಲರ ಎದುರೂ ನಾನು ಗರ್ಭಿಣಿ ಎಂದು ತಿಳಿಸಿದ್ದಾಳೆ. ಇದನ್ನು ಕೇಳಿದ ಎಲ್ಲರೂ ಖುಷಿಯಿಂದ ನಲಿದಾಡಿದ್ದಾರೆ. ಕರ್ಣ ಮತ್ತು ನಿತ್ಯಾ ಮಗು ಅದು ಎಂದುಕೊಂಡಿದ್ದಾರೆ. ಆದರೆ ನಿತ್ಯಾ ತನ್ನ ಅಸಲಿಯತ್ತನ್ನು ಹೇಳಲು ಹೋಗಿದ್ದಳು.
ಖುಷಿ ಪಡೋದು ಬೇಡ
ಹಾಗಿದ್ದರೆ ಸತ್ಯ ಎಲ್ಲರಿಗೂ ಗೊತ್ತಾಗತ್ತಾ ಎಂದು ವೀಕ್ಷಕರು ಖುಷಿಪಟ್ಟುಕೊಳ್ಳಬಹುದು, ನಿಧಿ ಮತ್ತು ಕರ್ಣದ ಹಾದಿ ಸುಗಮವಾಯಿತೆಂದು ಅಂದುಕೊಂಡರೆ ಬಹುಶಃ ಅದು ಸಾಧ್ಯವಿಲ್ಲ. ಏಕೆಂದರೆ, ಅಲ್ಲಿಯೇ ಇರುವ ಕರ್ಣ, ನಿತ್ಯಾಳಿಗೆ ಸತ್ಯವನ್ನು ಹೇಳಲು ಬಿಡದೇ ತಾನೇ ಅದರ ಅಪ್ಪ ಎಂದು ಹೇಳಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಆತ ಕರ್ಣ ಅಲ್ವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

