- Home
- Entertainment
- TV Talk
- Photo: ಇದು 'ರಾಧಾ ರಮಣ' ನಟಿ ಕಾವ್ಯಾ ಗೌಡರ 150 ಕೋಟಿ ಮನೆಯೇ? ಎಂಥ ಅದ್ದೂರಿ ಬಂಗಲೆ ಕಣ್ರೀ..!
Photo: ಇದು 'ರಾಧಾ ರಮಣ' ನಟಿ ಕಾವ್ಯಾ ಗೌಡರ 150 ಕೋಟಿ ಮನೆಯೇ? ಎಂಥ ಅದ್ದೂರಿ ಬಂಗಲೆ ಕಣ್ರೀ..!
Actress Kavya Gowda Home: ಹದಿನೈದು ದಿನಗಳ ಹಿಂದೆ ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಅವರ 150 ಕೋಟಿ ರೂಪಾಯಿ ಮನೆ ದೊಡ್ಡ ಚರ್ಚೆಯಾಗಿತ್ತು. ಈಗ ಕಾವ್ಯಾ ಗೌಡ ಅವರು ಪತಿ ಸೋಮಶೇಖರ್ ಜೊತೆ ಫೋಟೋಶೂಟ್ ಮಾಡಿಸಿರೋದು ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸುತ್ತಿದೆ.

ಅದ್ದೂರಿ ಮನೆ
ಕಳೆದ ಮೂರು ವರ್ಷಗಳ ಹಿಂದೆ ಕಾವ್ಯಾ ಗೌಡ ಅವರ ಮನೆಯ ಗೃಹಪ್ರವೇಶ ಆಗಿತ್ತು. ಕಾವ್ಯಾ ಮದುವೆಯಾಗಿ ಐದು ವರ್ಷವಾಗಿವೆ.
ಇಡೀ ಮನೆ ತುಂಬ ಸಿಸಿಟಿವಿ
ಮೂರು ಫ್ಲೋರ್‌ಗಳಿರುವ ಈ ಮನೆ ತುಂಬ ಸಿಸಿಟಿವಿ ಇದೆಯಂತೆ, ಬೆಡ್‌ರೂಮ್‌ಗೆ ಕೂಡ ಸಿಸಿಟಿವಿ ಹಾಕಿಸಲಾಗಿದೆ. ಚೆಕ್ ಮಾಡದೆ ಮನೆಯೊಳಗಡೆ ಬಿಡೋದಿಲ್ವಂತೆ.
ಒಂದೊಂದು ಫ್ಲೋರ್‌ನಲ್ಲಿ ಒಂದು ಜೋಡಿ
ಕೆಳಗಡೆ ಫ್ಲೋರ್‌ನಲ್ಲಿ ಕಾವ್ಯಾ ಗೌಡ ಅವರ ಅತ್ತೆ-ಮಾವ, ಒಂದನೇ ಫ್ಲೋರ್‌ನಲ್ಲಿ ಕಾವ್ಯಾ ಗೌಡ ಅವರ ಪತಿ ಅಣ್ಣನ ಕುಟುಂಬವಿದೆ, ಎರಡನೇ ಫ್ಲೋರ್‌ನಲ್ಲಿ ಕಾವ್ಯಾ ಗೌಡ ಕುಟುಂಬವಿದೆ.
ಮನೆ ಸಲುವಾಗಿ ಜಗಳ
ಈ ಮನೆ ಸಲುವಾಗಿ ಜಗಳ ಆಗಿದೆ ಎಂದು ಕಾವ್ಯಾ ಗೌಡರ ಪತಿಯ ಅಣ್ಣನ ಕುಟುಂಬ ವಾದ ಮಾಡಿತ್ತು. ಆ ಬಳಿಕ ಕಾವ್ಯಾ ಗೌಡ ಅವರು ಒಂದಿಷ್ಟು ಸಿಸಿಟಿವಿ ವಿಡಿಯೋ ಸಾಕ್ಷ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ತಮ್ಮ ವಾದವನ್ನು ಮಂಡಿಸಿದ್ದರು.
ಮನೆಯಲ್ಲೇ ಫೋಟೋಶೂಟ್
ಈ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ, ನನ್ನ ಫ್ಲೋರ್‌ಗೆ ಬಂದು ಕಾವ್ಯಾ ಗೌಡ ಅವರು ಫೋಟೋಶೂಟ್ ಮಾಡಿಸಿದ್ದರು ಎಂದು ಕಾವ್ಯರ ಓರಗಿತ್ತಿ ಮಾಧ್ಯಮದ ಮುಂದೆ ಬಂದು ಹೇಳಿದ್ದರು.
ಇದು ಮನೆಯಾ?
ಇದು ತಮ್ಮ ಮನೆ ಎಂದು ಕಾವ್ಯಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ ಸಿನಿಮಾ ಸೆಟ್? ಮನೆಯಾ ಎಂದು ಅವರೇ ಸ್ಪಷ್ಟನೆ ನೀಡಬೇಕಿದೆ.
ಮರದ ಡಿಸೈನ್ ಮನೆ
ಈ ಮನೆ ತುಂಬ ಮರದ ವರ್ಕ್ ಇದೆ, ನೋಡಲು ಸಖತ್ ಆಗಿ ಕಾಣಿಸ್ತಿದೆ. ಇದನ್ನಂತೂ ಹೇಳಬಹುದು.
ಪ್ರಕರಣ
ಕಾವ್ಯಾ ಗೌಡ ಮನೆಯ ಜಗಳ ಬೀದಿಗೆ ಬಂದಿದ್ದು, ಮುಂದೆ ಈ ಪ್ರಕರಣ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

