- Home
- Entertainment
- TV Talk
- Karna Serial: ಈ ವಾರದ ಕಿಚ್ಚನ ಚಪ್ಪಾಳೆ ವಿಲನ್ ಸಂಜಯ್ಗೆ ಕೊಟ್ಟ ವೀಕ್ಷಕರು! ಯಾಕೆ ಅಂತೀರಾ?
Karna Serial: ಈ ವಾರದ ಕಿಚ್ಚನ ಚಪ್ಪಾಳೆ ವಿಲನ್ ಸಂಜಯ್ಗೆ ಕೊಟ್ಟ ವೀಕ್ಷಕರು! ಯಾಕೆ ಅಂತೀರಾ?
ಕರ್ಣ ಮತ್ತು ನಿಧಿ ತಮ್ಮ ಪ್ರೀತಿಯನ್ನು ನಿತ್ಯಾಳಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದರೆ, ಸಂಜಯ್ ಈ ರಹಸ್ಯವನ್ನು ಬ್ಲ್ಯಾಕ್‌ಮೇಲ್‌ಗೆ ಬಳಸಿಕೊಳ್ಳುತ್ತಿದ್ದಾನೆ. ಇದೀಗ ನಿತ್ಯಾಳ ಮುಂದೆಯೇ, ನಿಧಿ ಪ್ರೀತಿಸುತ್ತಿರುವುದು ಕರ್ಣನನ್ನೇ ಎಂದು ಸಂಜಯ್ ಬಾಯ್ಬಿಟ್ಟಿದ್ದು, ಕಥೆಗೆ ಹೊಸ ತಿರುವು ಸಿಕ್ಕಿದೆ.

ತೇಜಸ್ ವಿರುದ್ಧ ಗೂಬೆ
ಕರ್ಣ ಸೀರಿಯಲ್ (Karna Serial) ನಲ್ಲಿ, ನಿತ್ಯಾ ಮತ್ತು ತೇಜಸ್ ಒಂದಾಗ್ತಾರೆ ಎನ್ನುವ ಹೊತ್ತಿನಲ್ಲಿ ರಮೇಶ್ ಕುತಂತ್ರದಿಂದ ಈ ಕಿಡ್ನ್ಯಾಪ್ ಮಾಡಿಸಿರೋದು ತೇಜಸ್ ಅಪ್ಪ- ಅಮ್ಮ ಎಂದೇ ತಿಳಿದುಕೊಂಡು ಎಲ್ಲರೂ ಶಾಕ್ಗೆ ಒಳಗಾಗಿದ್ದಾರೆ.
ಎಚ್ಚರಿಕೆ
ಎಲ್ಲವೂ ಸರಿಯಾಗುತ್ತದೆ, ತಮ್ಮಿಬ್ಬರ ಹಾದಿ ಸುಗಮ ಆಗ್ತದೆ ಎಂದುಕೊಂಡಿದ್ದ ಕರ್ಣ ಮತ್ತು ನಿಧಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಯಾವುದೇ ಕಾರಣಕ್ಕೂ ಸದ್ಯ ತಮ್ಮಿಬ್ಬರ ವಿಷಯ ನಿತ್ಯಾ ಕಿವಿಗೆ ಬೀಳದಂತೆ ಅವರು ಎಚ್ಚರ ವಹಿಸುತ್ತಿದ್ದಾರೆ.
ಸಂಜಯ್ ಬ್ಲ್ಯಾಕ್ಮೇಲ್
ಆದರೆ, ಇದನ್ನೇ ಇಟ್ಟುಕೊಂಡು ಸಂಜಯ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ. ಇದೀಗ ನಿಧಿ ಮತ್ತು ಕರ್ಣ ಸುತ್ತಾಡಲು ಹೋಗಿದ್ದರ ಬಗ್ಗೆ ನಿತ್ಯಾ ಬಳಿ ಟಾಂಟ್ ಕೊಟ್ಟಿದ್ದಾನೆ ಸಂಜಯ್.
ಸಂಜಯ್ಗೆ ಛೀಮಾರಿ
ಇದನ್ನು ಕೇಳಿಸಿಕೊಂಡ ನಿತ್ಯಾ, ಸಂಜಯ್ಗೆ ಛೀಮಾರಿ ಹಾಕಿದ್ದಾಳೆ. ತನ್ನ ತಂಗಿಯ ಬಗ್ಗೆ ಕೆಟ್ಟದ್ದು ಮಾತನಾಡಬೇಡ ಎಂದಿದ್ದಾಳೆ.
ಸತ್ಯ ನುಡಿದ ಸಂಜಯ್?
ಆದರೆ ಸುಮ್ಮನಾಗದ ಸಂಜಯ್, ಅಸಲಿ ವಿಷಯ ಗೊತ್ತಾ? ನಿಮ್ಮ ತಂಗಿ ಯಾರ ಜೊತೆಗೆ ಸುತ್ತುತ್ತಾ ಇದ್ದಾಳೆ ಎನ್ನೋದು ಗೊತ್ತಾ ಎನ್ನುತ್ತಲೇ ಅವರು ಬೇರೆ ಯಾರೂ ಅಲ್ಲ ಕರ್ಣ ಎಂದಿದ್ದಾನೆ.
ಮುಂದೇನು?
ಹಾಗಿದ್ದರೆ ಸತ್ಯ ಗೊತ್ತಾಗತ್ತಾ, ಅಥವಾ ಸಂಜಯ್ ಅಲ್ಲಿಯೇ ಶಾಕ್ ಕೊಟ್ಟು ತನ್ನಮಾತನ್ನು ಬದಲಿಸಿ, ತಾನು ಹೇಳಿದ್ದು ಸುಳ್ಳು ಎನ್ನುತ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ವೀಕ್ಷಕರು ಮಾತ್ರ ಇದು ನಿಜವಾಗಲಿ, ನಿತ್ಯಾ-ಕರ್ಣನ ವಿಷ್ಯ ನಿಧಿಗೆ ಬೇಗ ತಿಳಿಯಲಿ ಎನ್ನುತ್ತಿದ್ದಾರೆ. ಸಂಜಯ್ ಸತ್ಯ ಹೇಳಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಸಂಜಯ್ಗೆ ಎನ್ನುತ್ತಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

