- Home
- Entertainment
- TV Talk
- Bigg Bossನಿಂದ ಇದನ್ನೆಲ್ಲಾ ಕಲಿತೆ ಎಂದ ಕಿಚ್ಚ ಸುದೀಪ್, ಕೆಲ ವೀಕ್ಷಕರ ಬಗ್ಗೆ ಮರುಕ ಪಟ್ಟುಕೊಂಡದ್ದೇಕೆ?
Bigg Bossನಿಂದ ಇದನ್ನೆಲ್ಲಾ ಕಲಿತೆ ಎಂದ ಕಿಚ್ಚ ಸುದೀಪ್, ಕೆಲ ವೀಕ್ಷಕರ ಬಗ್ಗೆ ಮರುಕ ಪಟ್ಟುಕೊಂಡದ್ದೇಕೆ?
ಬಿಗ್‌ಬಾಸ್ ಷೋ ಬಗ್ಗೆ ಹಲವು ಅಭಿಪ್ರಾಯಗಳಿದ್ದರೂ, ನಿರೂಪಕ ಕಿಚ್ಚ ಸುದೀಪ್ ಅವರಿಗಾಗಿ ನೋಡುವವರೇ ಹೆಚ್ಚು. ಈ ಷೋ ತನಗೆ ತಾಳ್ಮೆಯನ್ನು ಕಲಿಸಿದೆ ಎಂದು ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ, ಇದನ್ನು ಟೀಕಿಸುವವರನ್ನು ಪ್ರಶ್ನಿಸಿದ್ದಾರೆ.

ಹಲವು ಅಭಿಪ್ರಾಯ
ಬಿಗ್‌ಬಾಸ್ (Bigg Boss) ಷೋ ಬಗ್ಗೆ ಹಲವರದ್ದು ಹಲವು ರೀತಿಯ ಅಭಿಪ್ರಾಯ. ಇದನ್ನು ನೋಡಿ ಇಲ್ಲಿ ಮಾಡುವ ಗಲಾಟೆ, ಕಾದಾಟ, ಪ್ರೀತಿ, ಪ್ರೇಮ ಎಲ್ಲವನ್ನೂ ನೋಡಿ ಆನಂದಿಸುವ ವರ್ಗ ಇರುವಂತೆಯೇ, ಈ ಷೋ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡುವ, ಇದನ್ನು ಅಸಭ್ಯ, ಅಶ್ಲೀಲ ಎಂದು ಬಣ್ಣಿಸುವ ಮತ್ತೊಂದು ದೊಡ್ಡ ವರ್ಗವೇ ಇದೆ.
ಸುದೀಪ್ ಕಾರಣ
ಅದೇನೇ ಇದ್ದರೂ, ಬಿಗ್‌ಬಾಸ್ ವೀಕ್ಷಕರು ಈ ಷೋ ನೋಡಲು ಬಹುದೊಡ್ಡ ಕಾರಣ, ಅದನ್ನು ನಡೆಸಿಕೊಡುವ ಕಿಚ್ಚ ಸುದೀಪ್ (Bigg Boss Kichcha Sudeep). ಇವರಿಗಾಗಿಯೇ, ಇವರನ್ನು ನೋಡುವುದಕ್ಕಾಗಿಯೇ ಹಲವರು ಈ ಷೋ ನೋಡುವುದು ಇದೆ.
ಏನು ಕಲಿಸಿದೆ?
ಆದರೆ ಬಿಗ್‌ಬಾಸ್ ಸುದೀಪ್ ಅವರಿಗೆ ಏನು ಕಲಿಸಿದೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಬಗ್ಗೆ ಖುದ್ದು ಸುದೀಪ್ ಇದೀಗ ಮಾತನಾಡಿದ್ದಾರೆ. ಬಿಗ್‌ಬಾಸ್ ತಮಗೆ ಏನು ಕಲಿಸಿದೆ, ಬಿಗ್‌ಬಾಸ್ ಎಂದರೆ ಏನು ಎನ್ನುವ ಬಗ್ಗೆ ವಿವರಣೆ ನೀಡಿದ್ದಾರೆ.
ಸುದೀಪ್ ಮಾತು
ತುಂಬಾ ತಾಳ್ಮೆ ಕಲಿಸಿದೆ. ಹಾಗೆಂದು ನಾನೇನು ಪರ್ಫೆಕ್ಟ್ ಎಂದು ಹೇಳಲು ಹೋಗುವುದಿಲ್ಲ ಎಂದಿದ್ದಾರೆ. ಬಿಗ್‌ಬಾಸ್ ಎನ್ನುವುದು ಒಂದು ಷೋ ಮಾತ್ರವಲ್ಲ. ಯಾರೇ ಈ ಷೋ ಬಗ್ಗೆ ಏನೇ ಹೇಳಲಿ, ಏನೇ ಮಾತನಾಡಲಿ. ಇದೊಂದು ಅದ್ಭುತವಾಗಿರುವಂಥ ಷೋ ಎಂದಿದ್ದಾರೆ.
ಸ್ಪೀಚ್ ಕೊಡುವವರ ಬಗ್ಗೆ
ಕೆಲವರು ಇದನ್ನು ನೋಡಿ ಏನ್ ಕಲಿಸತ್ತೆ ಇದು, ಎಂಥ ಷೋ ಇದು ಎಂದು ಸ್ಪೀಚ್ ಕೊಡುತ್ತಾರೆ. ಅದನ್ನು ಕೇಳಿದ್ರೆ ನನಗೆ ನಗು ಬರುತ್ತದೆ. ಬಿಗ್‌ಬಾಸ್ ಇಂಪಾಟೆಂಟ್ ಅಲ್ಲ ಎಂದು ನಿಮಗೆ ಅನ್ನಿಸಿದ್ರೆ, ಅದರ ಬಗ್ಗೆ ಸ್ಪೀಚ್ ಯಾಕೆ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಇಂಥವರ ನೋಡಿದ್ರೆ ಮರುಕ ಹುಟ್ಟತ್ತೆ ಎಂದಿದ್ದಾರೆ.
ಮನಸ್ಸಿನ ಒಳಗೆ
ಹಲವರಿಗೆ ಇದು ಗೊತ್ತೋ, ಗೊತ್ತಿಲ್ಲದೇನೋ ತುಂಬಾ ಮನಸ್ಸಿನ ಒಳಗೆ ಈ ಷೋ ಹೋಗಿದೆ. ಒಳಗೆ ಇರುವವರು ನೂರು ದಿನಗಳಲ್ಲಿ ಇಡೀ ಜೀವನವನ್ನು ನೋಡುತ್ತಾರೆ. ಅಂಥ ಷೋ ಬಿಗ್‌ಬಾಸ್ ಎಂದು ಕಿಚ್ಚ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

