- Home
- Entertainment
- TV Talk
- Karna Serial ವಿಲನ್ ಎಷ್ಟು ಸ್ಮಾರ್ಟ್ ಅಲ್ವಾ ಅಂದ್ಕೊಂಡಿದ್ದೆ, ಕೊನೆಗೆ ಅವ್ರಿಗೇ ಜೋಡಿ ಆಗ್ಬಿಟ್ಟೆ: ರಿಯಾ ಮಾತು
Karna Serial ವಿಲನ್ ಎಷ್ಟು ಸ್ಮಾರ್ಟ್ ಅಲ್ವಾ ಅಂದ್ಕೊಂಡಿದ್ದೆ, ಕೊನೆಗೆ ಅವ್ರಿಗೇ ಜೋಡಿ ಆಗ್ಬಿಟ್ಟೆ: ರಿಯಾ ಮಾತು
'ಕರ್ಣ' ಧಾರಾವಾಹಿಯ ಖಳನಾಯಕ ಸಂಜಯ್ ಪಾತ್ರಧಾರಿ ವಿನಯ್ ಕಶ್ಯಪ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಅವರಿಗೆ ನಾಯಕಿಯಾಗಿರುವ ರಿಯಾ ಪಾತ್ರಧಾರಿ ಅಂಕಿತಾ ಜಯರಾಮ್, ಈ ಹಿಂದೆ ಸಂಜಯ್ ಪಾತ್ರವನ್ನು ಮೆಚ್ಚಿಕೊಂಡಿದ್ದರಂತೆ. ಈ ಲೇಖನವು ಅಂಕಿತಾ ಅವರ ನಟನಾ ಪಯಣ ಮತ್ತು ಶೈಕ್ಷಣಿಕ ಸಾಧನೆ ವಿವರಿಸುತ್ತದೆ.

ಕರ್ಣ ಸೀರಿಯಲ್ ಸ್ಮಾರ್ಟ್ ವಿಲನ್
ಕರ್ಣ ಸೀರಿಯಲ್ನಲ್ಲಿ ವಿಲನ್ ಸಂಜಯ್ ಉರ್ಫ್ ನಟ ವಿನಯ್ ಕಶ್ಯಪ್ ಸಿಂಹ ಅವರು ಹಲವು ಯುವತಿಯರ ಕ್ರಷ್ ಆಗಿದ್ದಾರೆ. ಇವರು ಸೀರಿಯಲ್ನಲ್ಲಿ ವಿಲನ್ ಆದ್ರೂ, ಇವರಿಗೆ ವಿಲನ್ ರೋಲ್ ಸ್ಯೂಟ್ ಆಗಲ್ಲ, ಸೋ ಕ್ಯೂಟ್ ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡುವುದನ್ನು ನೋಡಿದ್ರೆ ಇವರ ಮೇಲೆ ಕ್ರೇಜ್ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಇಂತಿಪ್ಪ ವಿಲನ್ ಸಂಜಯ್ ಇದೀಗ ಸೀರಿಯಲ್ನಲ್ಲಿ ರಿಯಾಳನ್ನು ಮೋಸದಿಂದ ಪ್ರೀತಿಸಿ ಪ್ರೆಗ್ನೆಂಟ್ ಮಾಡಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಆದರೆ ಕರ್ಣ ಅದಕ್ಕೆ ಅವಕಾಶ ಕೊಡದೇ ಸಂಜಯ್ ಜೊತೆ ರಿಯಾಳ ಮದುವೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನ ಪಾಲಿನ ಆಸ್ತಿ ಸಂಜಯ್ಗೆ ಬರಬೇಕು ಎಂದರೆ ರಿಯಾಳನ್ನು ಒಂದು ವರ್ಷ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾನೆ.
ರಿಯಾಳದ್ದು ಕಣ್ಣೀರ ಸ್ಟೋರಿ
ಸದ್ಯ ಸೀರಿಯಲ್ನಲ್ಲಿ ರಿಯಾಳದ್ದು ಕಣ್ಣೀರಿನ ಸ್ಟೋರಿ. ರಿಯಾ ಪಾತ್ರ ಮಾಡುತ್ತಿರುವ ನಟಿಯ ಹೆಸರು ಅಂಕಿತಾ ಜಯರಾಮ್ (Ankita Jayaram) ಈಚೆಗಷ್ಟೇ ದ್ವಿತೀಯ ಪಿಯುಸಿಯನ್ನು ಕರ್ಣ ಸೀರಿಯಲ್ ಮಾಡುತ್ತಲೇ ಅತಿ ಹೆಚ್ಚು ಅಂಕದೊಂದಿಗೆ ಮುಗಿಸಿ ಮನೆಮಾತಾದವರು 18ರ ಹರೆಯದ ಅಂಕಿತಾ. ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಜಯ್ ಪಾತ್ರದ ಬಗ್ಗೆ ಮೆಚ್ಚುಗೆ
ಇದೀಗ ಅವರ ಸಂದರ್ಶನವೊಂದರಲ್ಲಿ ರಿಯಾ ಪಾತ್ರದ ಕುರಿತು ಮಾತನಾಡಿದ್ದಾರೆ. ಕರ್ಣ ಸೀರಿಯಲ್ ಅನ್ನು ಮೊದಲಿನಿಂದಲೂ ನೋಡುತ್ತಿದ್ದೆ. ಸಂಜಯ್ ಪಾತ್ರ ನೋಡಿದಾಗ ಸೋ ಕ್ಯೂಟ್, ಎಷ್ಟೊಂದು ಚೆನ್ನಾಗಿದ್ದಾರಲ್ವಾ ಎನ್ನಿಸಿತು. ಕೊನೆಗೆ ಅಚ್ಚರಿ ಎಂದರೆ,, ಅವರಿಗೇ ನಾಯಕಿಯಾಗಿ ಸೆಲೆಕ್ಟ್ ಆಗಿಬಿಟ್ಟೆ. ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.
ಎರಡು ವಿಭಿನ್ನ ಕ್ಯಾರೆಕ್ಟರ್
ಆರಂಭದಲ್ಲಿ ರಿಯಾ ಪಾತ್ರ, ಸಂಜಯ್ಗೆ ಕಾಟ ಕೊಡುವುದು ಆಗಿತ್ತು. ಸಂಜಯ್ಗೆ ಕಾಟ ಕೊಡುವವರು ಯಾರೂ ಇಲ್ಲ ಎನ್ನುವ ಸಮಯದಲ್ಲಿ ನನ್ನ ಎಂಟ್ರಿ ಆಗಿತ್ತು. ಆದರೆ ಇದೀಗ ಮದುವೆಯಾದ ಮೇಲೆ ಗೋಳಿನ ಸ್ಟೋರಿ. ರಿಯಾಳನ್ನು ಕೇಳುವವರು ಯಾರೂ ಇಲ್ಲ ಎನ್ನುವಂಥ ನೋವು ಎಂದಿರೋ ನಟಿ, ಈ ಎರಡೂ ವಿಭಿನ್ನ ಕ್ಯಾರೆಕ್ಟರ್ ನನಗೆ ತುಂಬಾ ಇಷ್ಟವಾಗ್ತಿದೆ ಎಂದಿದ್ದಾರೆ.
ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಬಾಲನಟಿ
ಇನ್ನು ನಟಿ ಅಂಕಿತಾ ಜಯರಾಮ್ ಅವರ ಕುರಿತು ಹೇಳುವುದಾದರೆ,, ಇದಾಗಲೇ ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ನಟಿಸಿ, ವೀಕ್ಷಕರ ಮನ ಗೆದ್ದವರು. ಇವರು ಈ ಹಿಂದೆ ನವೀನ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳು ಪ್ರಣೀತಾ ಪಾತ್ರದಲ್ಲಿ ನಟಿಸಿದ್ದರು. ಆಗಲೂ ನಾಡಿನ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದ್ದಳು. ಆಗ ತಾನು ಅಭ್ಯಾಸ ಮಾಡುತ್ತಿದ್ದಂತೆ, ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಳು.
ಸ್ಟಾರ್ ನಟರ ಜೊತೆಯೂ ಪಾತ್ರ
ಅಂಕಿತಾ ಅವರು ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮೊದಲಾದ ಸ್ಟಾರ್ ನಟರ ಸಿನಿಮಾಗಳಾದ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ ‘ಹಕೂನ ಮಟಾಟ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇದೀಗ ಕಳೆದ ವರ್ಷ ಬಿಡುಗಡೆಯಾದ ‘ಕಾಗದ’ ಎನ್ನುವ ಸಿನಿಮಾದಲ್ಲಿ ಅಂಕಿತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಟೀನೇಜ್ ಪ್ರೇಮಕತೆಯಾಗಿದ್ದು, ಈ ಸಿನಿಮಾದಲ್ಲಿ ಅಂಕಿತಾ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

