MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಡಿವೋರ್ಸ್​ ಕುರಿತು ಮನದ ಮಾತು ತೆರೆದಿಟ್ಟ 'ಕುಲವಧು' ಧನ್ಯಾ ದೀಪಿಕಾ: ಸಂಬಂಧದ ಬಗ್ಗೆ ನಟಿ ಹೇಳಿದ್ದೇನು

ಡಿವೋರ್ಸ್​ ಕುರಿತು ಮನದ ಮಾತು ತೆರೆದಿಟ್ಟ 'ಕುಲವಧು' ಧನ್ಯಾ ದೀಪಿಕಾ: ಸಂಬಂಧದ ಬಗ್ಗೆ ನಟಿ ಹೇಳಿದ್ದೇನು

'ಕುಲವಧು' ಖ್ಯಾತಿಯ ನಟಿ ಧನ್ಯಾ ದೀಪಿಕಾ ಅವರು ದಾಂಪತ್ಯ, ಡಿವೋರ್ಸ್ ಮತ್ತು ಜೀವನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನವು ಕೆಲವೊಮ್ಮೆ ಆಶೀರ್ವಾದವಾಗಬಹುದು ಎಂದಿರುವ ಅವರು, ಸಮಾಜದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ವೈಯಕ್ತಿಕ ಸಂತೋಷಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

2 Min read
Author : Suchethana D
Published : Jul 13 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
17
ಕುಲವಧು ಧನ್ಯಾ
Image Credit : SumanTV Kannada Instagram

ಕುಲವಧು ಧನ್ಯಾ

ಧನ್ಯಾ ದೀಪಿಕಾ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಆದರೆ ಕುಲವಧು ಸೀರಿಯಲ್​ ಧನ್ಯಾ ಎಂದಾಕ್ಷಣ ಸೀರಿಯಲ್​ ಪ್ರಿಯರ ಕಣ್ಣುಗಳು ಅರಳುತ್ತವೆ. ಸುಮಾರು ನಾಲ್ಕು ವರ್ಷ ಪ್ರಸಾರವಾದ ಈ ಸೀರಿಯಲ್​ ನಟಿಗೆ ಎಷ್ಟು ಹೆಸರು ತಂದುಕೊಟ್ಟಿತು ಎಂದರೆ ಬರೀ ದೀಪಿಕಾ ಆಗಿದ್ದ ನಟಿ ಧನ್ಯಾ ಹೆಸರಿನ ಮೂಲಕ ಧನ್ಯಾ ದೀಪಿಕಾ ಆಗಿಬಿಟ್ಟರು. ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್​ನಲ್ಲಿಯೂ ಮಿಂಚುತ್ತಿರುವ ನಟಿ ಆಧ್ಯಾತ್ಮದತ್ತ ಒಲವು ತೋರಿದ್ದು, ಜೀವನದ ಕೆಲವೊಂದು ನಿರ್ಧಾರಗಳ ಬಗ್ಗೆ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸುಖಮಯ ದಾಂಪತ್ಯ
Image Credit : our own

ಸುಖಮಯ ದಾಂಪತ್ಯ

ಏಳು ವರ್ಷಗಳ ಹಿಂದೆ ನಟ ಆಕರ್ಷ್ ಜೊತೆ ಮದುವೆಯಾಗಿ ಸುಖಮಯ ದಾಂಪತ್ಯ ನಡೆಸುತ್ತಿರುವ ಧನ್ಯಾ ದೀಪಿಕಾ (Dhanya Deepika) ಅವರು, ಈಗ ಎಲ್ಲರ ಬದುಕಿನ ಅದರಲ್ಲಿಯೂ ಹೆಣ್ಣಿನ ಜೀವನದ ಕೆಲವೊಂದು ಕಟುಸತ್ಯಗಳ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್​ ಎನ್ನುವುದು ಸರ್ವೇ ಸಾಮಾನ್ಯ ಆಗಿರುವ ಈ ಸಮಯದಲ್ಲಿ, ಡಿವೋರ್ಸ್​ ಪಡೆಯುವ ನಿರ್ಧಾರ ಮಾಡುವುದು ಬದುಕಿನಲ್ಲಿ ಯಾವ ರೀತಿಯ ಮಹತ್ವ ಪಡೆದುಕೊಳ್ಳುತ್ತದೆ ಎನ್ನುವ ಬಗ್ಗೆಯೂ ಮುಕ್ತವಾಗಿ ನಟಿ ಮಾತನಾಡಿದ್ದಾರೆ.

Related Articles

Related image1
ಕುದುರೆ ರೇಸ್​ ಅಂಗಳದಲ್ಲಿ ಕಿರಣ್​ ರಾಜ್​: Jockey 42 ರೊಮಾಂಟಿಕ್​ ಸಾಂಗ್​ ಔಟ್​- ದ್ವಿಪಾತ್ರದಲ್ಲಿ ನಟ
Related image2
Pavitra Bandhana ಆ​ ಸೀನ್ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಮುಜುಗರ ಆಯ್ತು: Bigg Boss ಸೂರಜ್​ ಸಿಂಗ್​ ಬಿಚ್ಚಿಟ್ಟ ರಹಸ್ಯ
37
ಮೊದಲೇ ನಿಶ್ಚಯ
Image Credit : our own

ಮೊದಲೇ ನಿಶ್ಚಯ

SumanTv Kannada Entertainment ಜೊತೆ ಮಾತನಾಡಿರುವ ನಟಿ ದೀಪಿಕಾ ಅವರು, ನಮ್ಮ ಜೀವನದಲ್ಲಿ ಯಾರು ಬರಬೇಕು, ಯಾರು ಇರಬೇಕು, ಯಾರು ಹೋಗಬೇಕು ಎನ್ನುವುದು ಮೊದಲೇ ನಿಶ್ಚಯವಾಗಿರುತ್ತದೆ. ಸರಿಯಾದ ಸಮಯಕ್ಕೆ ತಪ್ಪಾದ ಜಾಗದಿಂದ ಹೊರಗೆ ಬರುವುದು ಕೂಡ ಆಶೀರ್ವಾದ ಆಗಿರುತ್ತೆ. ಡಿವೋರ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಮದುವೆ ಜೀವನ ಅನ್ನುವುದು ಅಲ್ಲಿಗೆ ಕೊನೆ ಅನ್ನಿಸಿಬಿಟ್ಟರೆ, ತಲೆಕೆಡಿಸಿಕೊಳ್ಳಬಾರದು. ನಿಮ್ಮದು ಎನ್ನುವುದು ನಿಮ್ಮ ಬಾಳಿಗೆ ಬಂದೇ ಬರುತ್ತೆ. ಹೋದ್ರೆ ಹೋಗ್ಲಿ ಬಿಡು ಎಂದುಕೊಂಡು ಡಿವೋರ್ಸ್​ ಕೊಡಬೇಕು ಎಂದು ನಟಿ ಹೇಳಿದ್ದಾರೆ.

47
ಆತ್ಮಹತ್ಯೆ ಪರಿಹಾರವಲ್ಲ
Image Credit : our own

ಆತ್ಮಹತ್ಯೆ ಪರಿಹಾರವಲ್ಲ

ಯಾರೂ ಒಬ್ಬಾತ ನಮ್ಮನ್ನು ಬಿಟ್ಟು ಹೋದ ಎಂದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ. ನೀವು ಹುಟ್ಟಿದ್ದೇಕೆ? ಏನು ಸಾಧನೆ ಮಾಡಬೇಕು ಅದು ಮಾಡಿ. ಮದುವೆ, ಸಂಸಾರ ಇಷ್ಟೇ ಜೀವನ ಅಲ್ಲ. ಅವರಿವರು ಏನೆನ್ನುತ್ತಾರೆ ಎನ್ನೋದು ಕೇಳೋದಲ್ಲ. ಜನ ಏನಿದ್ರೂ ಮಾತನಾಡುತ್ತಾರೆ. ನಮ್ಮ ವೈಯಕ್ತಿಯ ಜೀವನಕ್ಕೂ, ಸಮಾಜಕ್ಕೂ ಸಂಬಂಧ ಇಲ್ಲ ಎನ್ನುವುದು ನಟಿ ದೀಪಿಕಾ ಅಭಿಮತ.

57
ಜನ ಜಡ್ಜ್ ಮಾಡೋಕೆ ಮುಂದೆ ಇರ್ತಾರೆ
Image Credit : our own

ಜನ ಜಡ್ಜ್ ಮಾಡೋಕೆ ಮುಂದೆ ಇರ್ತಾರೆ

ಜನ ಜಡ್ಜ್ ಮಾಡೋಕೆ ಮುಂದೆ ಇರ್ತಾರೆ. ಆದ್ರೆ ಕಷ್ಟ ಎಂದಾಗ ಸಹಾಯ ಮಾಡಲ್ಲ. ಅಂತಹವರಿಗೆ ರಿಯಾಕ್ಟ್ ಮಾಡಬೇಕಿಲ್ಲ. ಹಾಳಾದ್ರೆ, ಅಯ್ಯೋ ಎಷ್ಟು ದುಡಿದ್ರು ಅಷ್ಟೆ.. ಇವ್ರು ಹಾಳಾಗ್ತಾರೆ ಅಂತಾರೆ. ಡಿವೋರ್ಸ್ ಆದ್ರು ಹಿಂಗೆ ಹೇಳ್ತಾರೆ. ಒಂದು ವೇಳೆ ಇದ್ದಕ್ಕಿದಂತೆ ಕೋಟ್ಯಾಧಿಪತಿ ಆಗಿಬಿಟ್ರೆ, ಅವತ್ತು ಡಿವೋರ್ಸ್ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಇವತ್ತು ಸಾಧಿಸಿದ್ದಾಳೆ, ಅವಳ ಧೈರ್ಯ ಮೆಚ್ಚಬೇಕು ಅಂತಾರೆ. ಜನ ಹೆಂಗಿದ್ರು ಮಾತಾಡ್ತಾರೆ, ತಲೆ ಯಾಕೆ ಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸುತ್ತಾರೆ.

67
ಸಂಸಾರ ಅಂದ್ರೆ ಹೊಂದಾಣಿಕೆ ಅಷ್ಟೇ
Image Credit : our own

ಸಂಸಾರ ಅಂದ್ರೆ ಹೊಂದಾಣಿಕೆ ಅಷ್ಟೇ

ಸಂಸಾರ ಅಂದ್ರೆ ಹೊಂದಾಣಿಕೆ ಅಷ್ಟೇ. ಮದುವೆ ಅರೇಂಜ್ಡ್​ ಆಗಿದ್ದರೆ, ವ್ಯಕ್ತಿಗಳು ಯಾರು ಎನ್ನವುದು ಗೊತ್ತಿರಲ್ಲ. ಮದುವೆ ಮಾಡ್ಕೊಂಡು ಬಂದು ನಮ್ಮ ಅಪ್ಪ- ಅಮ್ಮನನ್ನು ನೋಡ್ಕೊ ಅನ್ನೋದು ಸರಿಯಲ್ಲ. ಮೊದಲು ಅಪ್ಪ-ಅಮ್ಮನನ್ನು ನೋಡಿಕೊಳ್ಳುವುದು ಆತನ ಜವಾಬ್ದಾರಿ. ಆ ಬಳಿಕ ನಮ್ಮದು. ಇದರಲ್ಲೇ ಜೀವನ ಕಳೆದರೆ ಮುಂದೆ ಹೇಗೆ. ಮದುವೆ ಅಂದ್ರೆ ದಂಪತಿ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ನಟಿಯ ಮನದಾಳದ ಮಾತು.

77
ದಂಪತಿ ಕುಳಿತು ಮಾತಾಡಿಕೊಳ್ಳಿ
Image Credit : our own

ದಂಪತಿ ಕುಳಿತು ಮಾತಾಡಿಕೊಳ್ಳಿ

ಸಮಸ್ಯೆ ಏನೇ ಬಂದರೂ ದಂಪತಿ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. 3ನೇ ವ್ಯಕ್ತಿ ಎಂಟರ್​ ಆಗಬಾರದು. ಇದನ್ನು ಅನುಸರಿಸುವುದು ಕಷ್ಟವೇ ಆಗಿದ್ದರೂ ಹೀಗೆ ಆದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದಿರುವ ನಟಿ, ಧಾನ್ಯದ ಪ್ರಯೋಜನ ತಿಳಿಸಿದ್ದಾರೆ. ಹಳೇ ಕಾಲದಲ್ಲಿ ಮಕ್ಕಳು ಜಾಸ್ತಿ ಇರ್ತಿದ್ರು. ಒಬ್ಬಳು ಡಿವೋರ್ಸ್ ತಗೊಂಡು ಬಂದು ಮನೆಯಲ್ಲಿ ಕೂತ್ರೆ ಉಳಿದವರ ಮದುವೆ ಮಾಡುವುದು ಕಷ್ಟ ಅಂತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಹುಡುಗಿ ಕೂಡ ಹುಡುಗನ ರೀತಿ ದುಡಿಯುತ್ತಾಳೆ. ಇಬ್ಬರು ಮನೆಯ ಕೆಲಸಗಳನ್ನು ಹಂಚಿಕೊಳ್ಳಬೇಕು. ಬಹಳ ಸಣ್ಣ ವಿಷಯಕ್ಕೆ ಡಿವೋರ್ಸ್ ಆಗುತ್ತದೆ ಎಂದು ದೀಪಿಕಾ ವಿವರಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ವಿಚ್ಛೇದನ
ನಟಿ
ಮದುವೆ
ಪ್ರೀತಿ

Latest Videos
Recommended Stories
Recommended image1
S Janaki: ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು
Recommended image2
ಐಸಿಯುನಲ್ಲಿದ್ದ ತಾಯಿಯನ್ನು ನೋಡಲು ಜೊಮ್ಯಾಟೊ ಡೆಲಿವರಿ ಬಾಯ್‌ಗೆ ₹4000 ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ!
Recommended image3
S Janaki - SPB: ಎಸ್‌ಪಿಬಿ ನಿಧನರಾದಾಗ ಎಸ್ ಜಾನಕಿ ಒಂದು ಪತ್ರ ಬರೆದಿದ್ದರು; ಆ ವೈರಲ್ ಲೆಟರ್‌ನಲ್ಲಿ ಏನಿತ್ತು?
Related Stories
Recommended image1
ಕುದುರೆ ರೇಸ್​ ಅಂಗಳದಲ್ಲಿ ಕಿರಣ್​ ರಾಜ್​: Jockey 42 ರೊಮಾಂಟಿಕ್​ ಸಾಂಗ್​ ಔಟ್​- ದ್ವಿಪಾತ್ರದಲ್ಲಿ ನಟ
Recommended image2
Pavitra Bandhana ಆ​ ಸೀನ್ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಮುಜುಗರ ಆಯ್ತು: Bigg Boss ಸೂರಜ್​ ಸಿಂಗ್​ ಬಿಚ್ಚಿಟ್ಟ ರಹಸ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved