MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಗೌತಮ್​ಗೆ ಗೊತ್ತಾಯ್ತು ಮಹಾಸತ್ಯ- ವೈದ್ಯರ ಮಾತು ನಂಬಿ ವೀಕ್ಷಕರಿಂದ ಗೂಗಲ್​ ಹುಡುಕಾಟ

Amruthadhaare: ಗೌತಮ್​ಗೆ ಗೊತ್ತಾಯ್ತು ಮಹಾಸತ್ಯ- ವೈದ್ಯರ ಮಾತು ನಂಬಿ ವೀಕ್ಷಕರಿಂದ ಗೂಗಲ್​ ಹುಡುಕಾಟ

ಅಮೃತಧಾರೆ ಸೀರಿಯಲ್‌ನಲ್ಲಿ ನಾಯಕಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಮತ್ತು ಆಕೆ ಕೆಲವೇ ತಿಂಗಳು ಬದುಕುತ್ತಾಳೆ ಎಂದು ತೋರಿಸಲಾಗುತ್ತಿದೆ. ಈ ಕಥಾಹಂದರವು ನಿಜ ಜೀವನದ ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬದವರ ಮನಸ್ಸಿಗೆ ನೋವುಂಟು ಮಾಡುತ್ತಿದೆ.

2 Min read
Author : Suchethana D
Published : Jul 13 2026, 12:47 PM IST
Share this Photo Gallery
  • FB
  • TW
  • Linkdin
  • Whatsapp
16
ಒಂದೊಳ್ಳೆ ಸೀರಿಯಲ್​ನಲ್ಲಿ ಇದೇನಿದು?
Image Credit : Zee Kannada Instagram

ಒಂದೊಳ್ಳೆ ಸೀರಿಯಲ್​ನಲ್ಲಿ ಇದೇನಿದು?

ಅಮೃತಧಾರೆ ಸೀರಿಯಲ್​ (Amruthadhaare Serial) ನಲ್ಲಿ ಸದ್ಯ ಭೂಮಿಕಾಗೆ ಬ್ರೆಸ್ಟ್​ ಕ್ಯಾನ್ಸರ್​. ಆಕೆಗೆ ಇರುವುದು ಕೆಲವೇ ತಿಂಗಳುಗಳು ಎಂದು ವೈದ್ಯರು ಹೇಳಿಯಾಗಿದೆ. ಆದರೆ ಭೂಮಿಕಾ ಈ ವಿಷಯವನ್ನು ಗೌತಮ್​ ಸೇರಿ ಯಾರಿಗೂ ತಿಳಿಸಿರಲಿಲ್ಲ. ತನ್ನೊಳಗೇ ಎಲ್ಲ ನೋವನ್ನು ಮುಚ್ಚಿಟ್ಟುಕೊಂಡಿದ್ದಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಗೌತಮ್​ಗೆ ಗೊತ್ತಾಯ್ತು ಸತ್ಯ
Image Credit : Zee Kannada Instagram

ಗೌತಮ್​ಗೆ ಗೊತ್ತಾಯ್ತು ಸತ್ಯ

ಆದರೆ, ಪತ್ನಿಯಲ್ಲಿ ಆಗುತ್ತಿರುವ ಬದಲಾವಣೆ ನೋಡಿದ ಗೌತಮ್​ ರಿಪೋರ್ಟ್​ ಹುಡುಕಿದ್ದಾನೆ. ವೈದ್ಯರ ಬಳಿ ಓಡಿ ಬಂದಿದ್ದಾನೆ. ವೈದ್ಯರು ಇರುವ ಸತ್ಯವನ್ನು ಹೇಳಿದ್ದಾರೆ. ಭೂಮಿಕಾಗೆ ಬ್ರೆಸ್ಟ್​ ಕ್ಯಾನ್ಸರ್​ ಇದೆ. ಅವರು ಬದುಕೋದು ಕೆಲವೇ ತಿಂಗಳು ಎಂದಿದ್ದಾರೆ.

Related Articles

Related image1
ಬೆಚ್ಚಿಬೀಳಿಸಿತು 6 ಕೊಲೆ: ಕೋರ್ಟ್​ ಜಾಮೀನು ಕೊಟ್ಟ ಖುಷಿಯಲ್ಲಿ ಸಂತ್ರಸ್ತೆಯ ಕುಟುಂಬ ನಾಶ ಮಾಡಿದ ಪಾಪಿ
Related image2
ಹೊಸ ಹೆಂಡ್ತಿ ಜೊತೆ ಹಳೆ ಹೆಂಡ್ತಿನೂ ಕರ್ಕೊಂಡು 100 ಕೋಟಿ ಬಂಗ್ಲೆಗೆ 'ಬೆಂಗಳೂರು ಅಳಿಯ' ಆಮೀರ್​ ಶಿಫ್ಟ್​
36
ರೋಚಕತೆ ಹೆಸರಿನಲ್ಲಿ ಇದೇನಿದು?
Image Credit : Zee Kannada Instagram

ರೋಚಕತೆ ಹೆಸರಿನಲ್ಲಿ ಇದೇನಿದು?

ಸೀರಿಯಲ್​ ಪ್ರೇಮಿಗಳು ಗೌತಮ್​ ಮತ್ತು ಭೂಮಿಕಾನ್ನ ದೂರ ಮಾಡಬೇಡಿ ಎನ್ನುತ್ತಿದ್ದರೆ, ಅದೇ ಇನ್ನೊಂದೆಡೆ, ಸೀರಿಯಲ್​ನಲ್ಲಿ ನಡೆಯುವುದೆಲ್ಲಾ ಸತ್ಯ ಎಂದುಕೊಂಡಿರುವ ಕ್ಯಾನ್ಸರ್​ ಪೇಷಂಟ್​ಗಳು ಹಾಗೂ ಅವರನ್ನು ನಂಬಿಕೊಂಡವರಿಗೆ, ಅವರ ಕುಟುಂಬಸ್ಥರಿಗೆ ಮಾತ್ರ ಆಘಾತವಾಗಿದೆ. ಇದಕ್ಕೆ ಕಾರಣ, ಬ್ರೆಸ್ಟ್​ ಕ್ಯಾನ್ಸರ್​ಗೆ ಸಾವೇ ಪರಿಹಾರ ಎಂದು ಪದೇ ಪದೇ ವೈದ್ಯರು ಹೇಳುತ್ತಿರುವ ಮಾತು.

46
ವೀಕ್ಷಕರ ಭಾವನೆಗೆ ಬೆಲೆ ಇಲ್ವಾ?
Image Credit : Zee Kannada Instagram

ವೀಕ್ಷಕರ ಭಾವನೆಗೆ ಬೆಲೆ ಇಲ್ವಾ?

ಸೀರಿಯಲ್​ಗಳು ಅದರಲ್ಲಿಯೂ ಒಂದೊಳ್ಳೆ ಟ್ರ್ಯಾಕ್​ನಲ್ಲಿ ಜನರನ್ನು ಹಿಡಿದಿಟ್ಟುಕೊಂಡಿದ್ದ ಅಮೃತಧಾರೆಯಂಥ ಸೀರಿಯಲ್, ವೀಕ್ಷಕರ ಮನಸ್ಸಿನ ಮೇಲೆ ಅದರಲ್ಲಿಯೂ ಕ್ಯಾನ್ಸರ್​ ಪೇಷಂಟ್​​ಗಳು ಹಾಗೂ ಅವರ ಕುಟುಂಬಸ್ಥರ ಮೇಲೆ ಇನ್ನಿಲ್ಲದ ಆಘಾತ ಬೀರುತ್ತಿರುವುದಂತೂ ಸತ್ಯ. ಎಷ್ಟೋ ಸಂದರ್ಭಗಳಲ್ಲಿ ವೈದ್ಯರು ರೋಗಿಗಳಿಗೆ ಅವರ ಕುಟುಂಬಸ್ಥರಿಗೆ ನೀಡಿರುವ ಭರವಸೆಯ ಮಾತುಗಳು ಈ ಸೀರಿಯಲ್​ ನೋಡಿದವರ ಮನಸ್ಸನ್ನು ಛಿದ್ರಗೊಳಿಸುತ್ತಿವೆ.

56
ಏಕೆ ಮನಸ್ಸು ನೋಯಿಸುವಿರಿ?
Image Credit : Zee Kannada

ಏಕೆ ಮನಸ್ಸು ನೋಯಿಸುವಿರಿ?

ಬ್ರೆಸ್ಟ್​ ಕ್ಯಾನ್ಸರ್​ ಗೆದ್ದವರು ಹಲವರಿದ್ದಾರೆ. ಕೆಲವು ಹೋಮಿಯೋಪಥಿ ವೈದ್ಯರ ಕೈಗುಣದಿಂದ ಬ್ರೆಸ್ಟ್​ ಕ್ಯಾನ್ಸರ್​ ಮಾತ್ರವಲ್ಲದೇ ಎಲ್ಲಾ ರೀತಿಯ ಕ್ಯಾನ್ಸರ್​, ಅದರಲ್ಲಿಯೂ ಕೊನೆಯ ಹಂತದಲ್ಲಿ ಇದ್ದವರೂ ಗುಣಮುಖರಾದ ಉದಾಹರಣೆಗಳಿವೆ. ಸೀರಿಯಲ್​ನಲ್ಲಿ ಪದೇಪದೇ ಭೂಮಿಕಾಗೆ ಕೆಲವೇ ತಿಂಗಳು ಟೈಮ್​ ಇರೋದು ಎಂದು ತೋರಿಸಿ ಸದ್ಯದ ಮಟ್ಟಿಗೆ ಇಂಥವರ ಬದುಕನ್ನೇ ಕಸಿಯುವಂತೆ ಸೀರಿಯಲ್ ಮಾಡ್ತಿದೆಯಾ ಎನ್ನುವ ಪ್ರಶ್ನೆಯನ್ನು ಕಮೆಂಟ್ಸ್​ಗಳಲ್ಲಿ ಕೆಲವರು ಹಾಕುತ್ತಿದ್ದಾರೆ.

66
ಗೂಗಲ್​ನಲ್ಲಿ ಹುಡುಕಾಟ
Image Credit : zee kannada

ಗೂಗಲ್​ನಲ್ಲಿ ಹುಡುಕಾಟ

ಮುಂದೆ ಭೂಮಿಕಾಗೆ ಟ್ರೀಟ್​ಮೆಂಟ್ ಸಿಕ್ಕು ಆಕೆ ಗುಣವಾಗಬಹುದೇನೋ ಗೊತ್ತಿಲ್ಲ, ಅಥವಾ ಆಕೆಯನ್ನು ಸಾಯಿಸಿಯೇ ಬಿಡ್ತಾರೋ ಎನ್ನುವುದೂ ತಿಳಿದಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಂತೂ ಈ ಸೀರಿಯಲ್​ನಿಂದ ಇಂಥದ್ದನ್ನು ಊಹಿಸಿ ಇರಲಿಲ್ಲ. ವೀಕ್ಷಕರ ಭಾವನೆಗೆ, ಅವರ ಬದುಕಿನ ಮೇಲೆ ಇಷ್ಟು ಕೆಟ್ಟ ಪರಿಣಾಮ ಬೀರುವಂಥದ್ದನ್ನು ತೋರಿಸುತ್ತಿರುವಿರಿ ಎಂದು ಕೆಲವು ವೀಕ್ಷಕರು ನೋವಿನಿಂದ ನುಡಿಯುತ್ತಿದ್ದಾರೆ. ಬ್ರೆಸ್ಟ್​ ಕ್ಯಾನ್ಸರ್​ ಗುಣವಾಗುತ್ತದೆಯೋ ಇಲ್ಲವೇಎನ್ನುವ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಮಾಡಿದಾಗ ಅದು ಸಾಧ್ಯ ಎಂದೇ ಇದೆ. ಆದರೆ ಸೀರಿಯಲ್​​ನಲ್ಲಿ ಹೀಗೇಕೆ ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
ಆರೋಗ್ಯ ಸಮಸ್ಯೆಗಳು
ಕ್ಯಾನ್ಸರ್

Latest Videos
Recommended Stories
Recommended image1
'ಇವನು ನನ್ನವನು' ಎಂದು ಬಾಯ್‌ಫ್ರೆಂಡ್‌ ಮೇಲೆ ಜಿಗಿದ Dhurandhar Movie ಗಾಯಕಿ; ನಾಚಿ ನೀರಾದ ಪ್ರಿಯತಮ!
Recommended image2
ಇಟಲಿಯಲ್ಲಿ ಕನ್ನಡತಿ… ಫೋಟೊ ತೆಗೆದಿದ್ದು ಯಾರು ಎಂದವರಿಗೆ ಕ್ಲೂ ಕೊಟ್ಟ ರಂಜನಿ ರಾಘವನ್
Recommended image3
JDS ಸೇರಿದ ಬೆನ್ನಲ್ಲೇ ಮಾನವೀಯತೆ ಮೆರೆದ 'ಬಿಗ್‌ ಬಾಸ್‌' ಜಾನ್ವಿ: ಕಷ್ಟದಲ್ಲಿದ್ದ ಅತ್ತೆ-ಮಾವನಿಗೆ ನೆರವಾದ ನಟಿ
Related Stories
Recommended image1
ಬೆಚ್ಚಿಬೀಳಿಸಿತು 6 ಕೊಲೆ: ಕೋರ್ಟ್​ ಜಾಮೀನು ಕೊಟ್ಟ ಖುಷಿಯಲ್ಲಿ ಸಂತ್ರಸ್ತೆಯ ಕುಟುಂಬ ನಾಶ ಮಾಡಿದ ಪಾಪಿ
Recommended image2
ಹೊಸ ಹೆಂಡ್ತಿ ಜೊತೆ ಹಳೆ ಹೆಂಡ್ತಿನೂ ಕರ್ಕೊಂಡು 100 ಕೋಟಿ ಬಂಗ್ಲೆಗೆ 'ಬೆಂಗಳೂರು ಅಳಿಯ' ಆಮೀರ್​ ಶಿಫ್ಟ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved