- Home
- Entertainment
- TV Talk
- Karna Serial ನಿಧಿ ಸೀರಿಯಲ್ ಬಿಟ್ಟು ಅವರೆ ಮೇಳದಲ್ಲಿ ಇದೇನಿದು ಹೊಸ ಬಿಜಿನೆಸ್? ಗ್ರ್ಯಾಂಡ್ ಓಪನಿಂಗ್!
Karna Serial ನಿಧಿ ಸೀರಿಯಲ್ ಬಿಟ್ಟು ಅವರೆ ಮೇಳದಲ್ಲಿ ಇದೇನಿದು ಹೊಸ ಬಿಜಿನೆಸ್? ಗ್ರ್ಯಾಂಡ್ ಓಪನಿಂಗ್!
ಕರ್ಣ ಸೀರಿಯಲ್ ಖ್ಯಾತಿಯ ನಟಿ ಭವ್ಯ ಗೌಡ ಅವರು ನಟನೆಯ ಜೊತೆಗೆ ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ. ತಮ್ಮ ಸಹೋದರಿಯೊಂದಿಗೆ 'ಹೌస్ ಆಫ್ ಫ್ಲವರ್ಸ್' ಹೆಸರಿನಲ್ಲಿ ಒಣ ಹೂವುಗಳ ಬೊಕ್ಕೆಗಳನ್ನು ಮಾರಾಟ ಮಾಡುತ್ತಿದ್ದು, ಬೆಂಗಳೂರಿನ ಅವರೆ ಮೇಳದಲ್ಲಿ ಸ್ಟಾಲ್ ತೆರೆದಿದ್ದಾರೆ.
ಕರ್ಣ ಸೀರಿಯಲ್ ನಾಯಕಿ
ನಿಧಿ ಎಂದರೆ ಸಾಕು, ಸೀರಿಯಲ್ ಪ್ರೇಮಿಗಳಿಗೆ ಕರ್ಣ ಧಾರಾವಾಹಿಯ (Karna Serial) ಮುದ್ದು ಮೊಗ ಕಾಣಿಸುತ್ತದೆ. ಸೀರಿಯಲ್ನಲ್ಲಿ ಇಷ್ಟು ದಿನ ಬರೀ ಗೋಳೇ ಆಗಿದ್ದ ನಿಧಿಗೆ ಈಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದು, ಕರ್ಣನ ಜೊತೆ ಹೊಸ ಕನಸನ್ನು ಶುರು ಮಾಡುತ್ತಿದ್ದಾಳೆ.
ಅವರೆ ಮೇಳದಲ್ಲಿ ನಿಧಿ
ಆದರೆ ಇದರ ನಡುವೆಯೇ, ನಿಧಿ ಅರ್ಥಾತ್ ಭವ್ಯಾ ಗೌಡ (Bhavya Gowda) ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಅವರೆ ಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಇಲ್ಲೇ ಇರೋದು ವಿಶೇಷ. ಅವರೆ ಮೇಳದಲ್ಲಿ ಅವರ ಅವರೆ ಖಾದ್ಯಗಳನ್ನು ಸೇವಿಸಲು ಬರಲಿಲ್ಲ. ಬದಲಿಗೆ ಹೊಸ ಬಿಜೆನೆಸ್ಗೆ ಅದ್ಧೂರಿ ಚಾಲನೆ ಕೊಟ್ಟಿದ್ದಾರೆ.
ಬಿಜಿನೆಸ್ ಶುರು
ಹೌದು. ಕೆಲ ತಿಂಗಳುಗಳಿಂದ ನಟಿ ಭವ್ಯ ಗೌಡ ಮತ್ತು ಅವರ ಸಹೋದರಿ ದಿವ್ಯಾ ಗೌಡ 'ಹೌಸ್ ಆಫ್ ಫ್ಲವರ್ಸ್' ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಒಣ ಹೂವುಗಳನ್ನು ಬಳಸಿ ಕೈಯಿಂದ ತಯಾರಿಸಿದ ಬೊಕ್ಕೆಗಳನ್ನು (handmade bouquets) ಅವರು ಮಾರಾಟ ಮಾಡುತ್ತಿದ್ದಾರೆ. ಒಣ ಹೂವುಗಳನ್ನು ಬಳಸಿ ವಿಶಿಷ್ಟವಾದ, ಕೈಯಿಂದ ಮಾಡಿದ ಹೂವಿನ ಬೊಕ್ಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಅವರೆ ಮೇಳದಲ್ಲಿ ಸ್ಟಾಲ್
ಅವರೆ ಮೇಳದಲ್ಲಿಯೂ ಒಂದು ಸ್ಟಾಲ್ ಅನ್ನು ಹಾಕಿರುವ ಭವ್ಯ ಅವರು ಅದಕ್ಕೆ ಪೂಜೆ ಮಾಡುವ ಮೂಲಕ ಓಪನಿಂಗ್ ಮಾಡಿದ್ದಾರೆ. ಅಂದಮಾತ್ರಕ್ಕೆ ಅವರೇನು ಕರ್ಣ ಸೀರಿಯಲ್ ಬಿಡುತ್ತಾರೆ ಎಂದು ಅರ್ಥವಲ್ಲ. ನಟನೆಯ ಜೊತೆಜೊತೆಗೆನೇ ಈ ಉದ್ಯಮವನ್ನೂ ಮಾಡುತ್ತಿದ್ದಾರೆ ನಟಿ. ನಮ್ಮ ಹಿರಿಯರೆಲ್ಲರೂ ಹೂವಿನ ಬಿಜಿನೆಸ್ ಮಾಡುತ್ತಿದ್ದರು. ಆದ್ದರಿಂದ ನನಗೂ ಈ ಥಾಟ್ ಬಂದಿತು. ಆದ್ದರಿಂದ ಶುರು ಮಾಡಿದ್ದೇನೆ ಎಂದಿದ್ದಾರೆ ನಟಿ.
ತೆಲಗು ನಟಿ ಕೂಡ
ಇನ್ನು 26 ವರ್ಷದ ಈ ಚೆಲುವೆ ಕುರಿತು ಹೇಳುವುದಾದರೆ, ಇವರು ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಗೀತಾ ಧಾರಾವಾಹಿಯ ಮೂಲಕ ಪ್ರಸಿದ್ಧಿಗೆ ಬಂದವರು ಇವರು. ಕಲಾಸಿ ವುಂಟೆ ಕಲಾದು ಸುಖಂ ತೆಲಗು ಸೀರಿಯಲ್ನಿಂದ ಆಂಧ್ರದ ಮನೆ ಮಾತಾಗಿದ್ದಾರೆ.
ಬಿಗ್ಬಾಸ್ ಸ್ಪರ್ಧಿ
ಇವರು ಇನ್ನಷ್ಟು ಖ್ಯಾತಿ ಗಳಿಸಿದ್ದು ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿ. ಇದೀಗ ಅವರು ಕರ್ಣ ಸೀರಿಯಲ್ನ ನಿಧಿಯಾಗಿ (Karna Serial Nidhi) ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

