- Home
- Entertainment
- TV Talk
- Naa Ninna Bidalaare ಅಪ್ಪ-ಮಗಳ ಕ್ಯೂಟ್ ಡಾನ್ಸ್ ಭಾವುಕರಾಗಿ ಕಣ್ತುಂಬಿಸಿಕೊಂಡ ಅಭಿಮಾನಿಗಳು!
Naa Ninna Bidalaare ಅಪ್ಪ-ಮಗಳ ಕ್ಯೂಟ್ ಡಾನ್ಸ್ ಭಾವುಕರಾಗಿ ಕಣ್ತುಂಬಿಸಿಕೊಂಡ ಅಭಿಮಾನಿಗಳು!
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಅಪ್ಪ ಶರತ್ ಮತ್ತು ಮಗಳು ಹಿತಾ ನಡುವಿನ ಬಾಂಧವ್ಯವು ವೀಕ್ಷಕರ ಮನಗೆದ್ದಿದೆ. ತಾಯಿಯ ಸಾವಿಗೆ ಅಪ್ಪನೇ ಕಾರಣವೆಂದು ಮಗಳು ನಂಬಿದ್ದು, ಇವರಿಬ್ಬರನ್ನು ಒಂದು ಮಾಡಲು ದುರ್ಗಾ ಪ್ರಯತ್ನಿಸುತ್ತಿದ್ದಾಳೆ.

ನಾ ನಿನ್ನ ಬಿಡಲಾರೆ ಸೀರಿಯಲ್
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಅಪ್ಪ ಮತ್ತು ಮಗಳ ಬಾಂಧವ್ಯ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ತನ್ನ ಅಮ್ಮನನ್ನು ಅಪ್ಪನೇ ಕೊಂದಿದ್ದು ಎಂದುಕೊಂಡಿರೋ ಹಿತಾ, ಅಪ್ಪ ಶರತ್ ಬಳಿ ಮಾತು ಬಿಟ್ಟಿದ್ದಾಳೆ. ಅಪ್ಪನನ್ನು ಕಂಡರೆ ಆಕೆಗೆ ಆಗುತ್ತಿಲ್ಲ.
ದುರ್ಗಾಳ ಪ್ರಯತ್ನ
ಆದರೆ, ಅಪ್ಪ ತುಂಬಾ ಒಳ್ಳೆಯವರು ಎಂದು ಆ ಪುಟ್ಟ ಮಗುವಿನ ತಲೆಯಲ್ಲಿ ತುಂಬಿ ಅಪ್ಪ ಮತ್ತು ಮಗಳು ಒಂದಾಗುವ ಹಾಗೆ ಮಾಡುವಲ್ಲಿ ಪ್ರಯತ್ನಿಸುತ್ತಿದ್ದಾಳೆ ದುರ್ಗಾ. ಪುಟಾಣಿ ಹಿತಾ ಪಾತ್ರದಲ್ಲಿ ಬಾಲಕಿ ಮಹಿತಾ ಹಾಗೂ ತಮ್ಮ ನಿಜವಾದ ಹೆಸರು ಶರತ್ ಪಾತ್ರದಲ್ಲಿ ನಟಿಸ್ತಿರೋ ನಟ ಶರತ್ ಪದ್ಮನಾಭ್ ಅವರ ಬಾಂಡಿಂಗ್ ಅನ್ನು ವೀಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ.
ಅಭಿಮಾನಿಗಳು ಭಾವುಕ
ನಿಜವಾಗಿಯೂ ಅಪ್ಪ-ಮಗಳೋ ಎನ್ನುವಂತೆ ಇವರ ನಟನೆ ಮೂಡಿಬರುತ್ತಿದೆ. ಇದೀಗ ಜೀ಼ ಕನ್ನಡ ಹೊಸವರ್ಷದ ಶುಭಾರಂಭದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಶರತ್ ಮತ್ತು ಮಹಿತಾ ಸೂಪರ್ ಪರ್ಫಾಮೆನ್ಸ್ ಕೊಟ್ಟಿದ್ದು ಸೀರಿಯಲ್ ಅಪ್ಪ-ಮಗಳ ಜೋಡಿಗೆ ಅಭಿಮಾನಿಗಳು ಭಾವುಕ ಆಗಿದ್ದಾರೆ.
ಮಹಿತಾ ಕುರಿತು...
ಇನ್ನು ಎಲ್ಲರ ಮನ ಗೆದ್ದಿರೋ ಪುಟಾಣಿ ಹಿತಾ ಅರ್ಥಾತ್ ಬಾಲಕಿ ಮಹಿತಾ ಕುರಿತು ಹೇಳುವುದಾದರೆ, ಈಕೆ ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್ನ ಟೈಟಲ್ ಸಾಂಗ್ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.
ಶರತ್ ಪದ್ಮನಾಭ ಕುರಿತು
ಶರತ್ ಪದ್ಮನಾಭ ಕುರಿತು ಹೇಳುವುದಾದರೆ, ಇವರು ಇಂಜಿನಿಯರಿಂಗ್ ಪದವಿಧರರು. ಗ್ರಾಫಿಕ್ಸ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನೆಯ ನಂಟು ಬೆಳೆಸಿಕೊಂಡ ಶರತ್ ಪದ್ಮನಾಭ ಅವರು ನಟನಾಗಲು ಫೇಸ್ ಬುಕ್ ಕಾರಣ. ಫೇಸ್ ಬುಕ್‌ನಲ್ಲಿ ಶರತ್ ಪದ್ಮನಾಭ ಅವರ ಫೋಟೋ ನೋಡಿದ ದಿಲೀಪ್ ರಾಜ್ ನಟಿಸಲು ಅವಕಾಶ ನೀಡಿದರು. ಶರತ್ ಪದ್ಮನಾಭ ಕಿರುತೆರೆ ಜೊತೆಗೆ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆರು ವರ್ಷಗಳ ಕಾಲ 'ಪಾರು' ಧಾರಾವಾಹಿಯ ಆದಿತ್ಯನಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

