- Home
- Entertainment
- TV Talk
- ಇರಾನ್-ಇಸ್ರೇಲ್ ಯುದ್ಧದ ಭೀತಿ ಮಧ್ಯೆ ದುಬೈನಲ್ಲಿದ್ದೇ ಪರಿಸ್ಥಿತಿ ವಿವರಿಸಿದ ನಟಿ ದೀಪಿಕಾ ದಾಸ್!
ಇರಾನ್-ಇಸ್ರೇಲ್ ಯುದ್ಧದ ಭೀತಿ ಮಧ್ಯೆ ದುಬೈನಲ್ಲಿದ್ದೇ ಪರಿಸ್ಥಿತಿ ವಿವರಿಸಿದ ನಟಿ ದೀಪಿಕಾ ದಾಸ್!
ಇರಾನ್ ಇಸ್ರೇಲ್ ಯುದ್ಧದ ನಡುವೆ ಕೆಲವರು ದುಬೈ, ಕತಾರ್‌ನಲ್ಲಿದ್ದಾರೆ. ಅಲ್ಲಿಂದ ಭಾರತಕ್ಕೆ ಬರಲು ಕೆಲ ಕನ್ನಡಿಗರು ಒದ್ದಾಡುತ್ತಿದ್ದಾರೆ. ಹಾಗೆ ದೀಪಿಕಾ ದಾಸ್ ಕೂಡ ದುಬೈನಲ್ಲಿದ್ದಾರೆ. ಈಗ ಅಲ್ಲಿನ ಪರಿಸ್ಥಿತಿ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಜನ್ಮದಿನ, ವಿವಾಹ ವಾರ್ಷಿಕೋತ್ಸವ
ನಟಿ ದೀಪಿಕಾ ದಾಸ್ ಅವರು ದುಬೈನಲ್ಲಿ ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ದುಬೈ ಪರಿಸ್ಥಿತಿ ಬಗ್ಗೆ ಹಂಚಿಕೊಂಡಿದ್ದಾರೆ.
ಫೋನ್, ಮೆಸೇಜ್
"ನನ್ನ ಮೇಲಿನ ನಿಮ್ಮ ಕಾಳಜಿಗೆ ಧನ್ಯವಾದಗಳು. ಯುದ್ಧದ ಪರಿಸ್ಥಿತಿಯ ಬಗ್ಗೆ ನನ್ನ ಕುಟುಂಬದವರು ಸೇರಿದಂತೆ ಅನೇಕರಿಂದ ನನಗೆ ಸಾಕಷ್ಟು ಫೋನ್ ಕಾಲ್, ಮೆಸೇಜ್ ಬರುತ್ತಿವೆ. ಆದರೆ ನಾವೆಲ್ಲರೂ ಇಲ್ಲಿ ಸುರಕ್ಷಿತವಾಗಿದ್ದೇವೆ, ಆರಾಮವಾಗಿದ್ದೇವೆ ಎಂದು ತಿಳಿಸಲು ಬಯಸುತ್ತೇನೆ ಎಂದು ದೀಪಿಕಾ ದಾಸ್ ಹೇಳಿದ್ದಾರೆ.
ಬುರ್ಜ್ ಖಲೀಫಾದಲ್ಲಿ ಆ ಥರ ಆಗಿಲ್ಲ
ಆದರೆ ದುಬೈನಲ್ಲಿ ನಮ್ಮ ಸುತ್ತಮುತ್ತ ಇಂತಹ ಯಾವುದೇ ಘಟನೆಗಳು ನಡೆದಿಲ್ಲ. ಬುರ್ಜ್ ಖಲೀಫಾ ಬಗ್ಗೆ ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ದೀಪಿಕಾ ದಾಸ್ ಅವರು ಹೇಳಿದ್ದಾರೆ.
ಸುಳ್ಳು ಸುದ್ದಿ ಹರಡಬೇಡಿ
ದಯವಿಟ್ಟು ಸುಳ್ಳು ಸುದ್ದಿಗಳನ್ನು ಮತ್ತು ಹಳೆಯ ವಿಡಿಯೋಗಳನ್ನು ಹಂಚುವುದನ್ನು ನಿಲ್ಲಿಸಿ. ದೇಶಾದ್ಯಂತ ನಡೆಯುತ್ತಿರುವ ಯುದ್ಧದ ಪರಿಸ್ಥಿತಿ ಯುಎಇ (UAE) ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ಗೊತ್ತಿದೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ನಾನು ಹಾರೈಸುತ್ತೇನೆ ಎಂದು ದೀಪಿಕಾ ದಾಸ್ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

