MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು

Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು

ಕರ್ಣ ಧಾರಾವಾಹಿಯಲ್ಲಿ, ನಿಧಿ ಮತ್ತು ಅರ್ಜುನ್ ನಿಶ್ಚಿತಾರ್ಥವನ್ನು ವಿಲನ್ ರಮೇಶ್ ಏರ್ಪಡಿಸುತ್ತಾನೆ. ಆದರೆ, ಕರ್ಣನು ಒಂದು ವಿಶಿಷ್ಟ ಯೋಜನೆಯ ಮೂಲಕ, ಕತ್ತಲೆಯಲ್ಲಿ ತಾನೇ ನಿಧಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥವನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ವಿಚಿತ್ರ ಐಡಿಯಾ ನೋಡಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.

2 Min read
Author : Suchethana D
Published : May 06 2026, 05:23 PM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ ಸೀರಿಯಲ್​​ ಟ್ವಿಸ್ಟ್​
Image Credit : Instagram

ಕರ್ಣ ಸೀರಿಯಲ್​​ ಟ್ವಿಸ್ಟ್​

ಸದ್ಯ ಕರ್ಣ ಸೀರಿಯಲ್​ (Karna Serial)ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದೆ. ಹೇಗಾದ್ರೂ ಮಾಡಿ ನಿಧಿ ಮತ್ತು ಅರ್ಜುನ್​ ಮದುವೆಯನ್ನು ಮಾಡಿಯೇ ತೀರಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾನೆ ವಿಲನ್​ ರಮೇಶ್​. ಅದೇ ಇನ್ನೊಂದೆಡೆ, ತನ್ನ ಅಕ್ಕ ನಿತ್ಯಾ ಕರ್ಣನನ್ನು ಲವ್​ ಮಾಡ್ತಿರೋ ವಿಷಯ ತಿಳಿದಿರುವ ನಿಧಿ, ಅಕ್ಕ ಮತ್ತು ಕರ್ಣ ಒಂದಾಗಿ ಇರಬೇಕು ಎಂದು ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದಾಳೆ.

26
ನಿಧಿ ಮತ್ತು ಅರ್ಜುನ್​ ಎಂಗೇಜ್​ಮೆಂಟ್​
Image Credit : Zee Kannada Instagram

ನಿಧಿ ಮತ್ತು ಅರ್ಜುನ್​ ಎಂಗೇಜ್​ಮೆಂಟ್​

ಇದರ ನಡುವೆಯೇ, ನಿಧಿ ಮತ್ತು ಅರ್ಜುನ್​ ಎಂಗೇಜ್​ಮೆಂಟ್​ ಆಗುವ ಕಾಲ ಬಂದಿದೆ. ಮೊದಲಿಗೆ ನಿಧಿ ಏಕೆ ಹೀಗೆ ತನ್ನನ್ನು ಅವಾಯ್ಡ್​ ಮಾಡುತ್ತಿದ್ದಾಳೆ ಎಂದು ಕರ್ಣನಿಗೆ ತಿಳಿದಿರಲಿಲ್ಲ. ಆದರೆ ಕೊನೆಗೆ ವಿಷಯ ತಿಳಿದಿದೆ. ಆದ್ದರಿಂದ ರಮೇಶ್​ಗೆ ಅವನದ್ದೇ ಭಾಷೆಯಲ್ಲಿ ತಿರುಗೇಟು ಕೊಡಲು ಮುಂದಾಗಿದ್ದಾನೆ.

Related Articles

Related image1
Amruthadhaare: ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು: ಸೀರಿಯಲ್​ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
Related image2
Amruthadhaare ರೋಚಕ ಟ್ವಿಸ್ಟ್‌: ಕಳೆದು ಹೋದ ಮಗಳೇ ಗೌತಮ್‌ ಪಾಲಿನ ವಿಲನ್‌? ಯಾರೀಕೆ
36
ರಮೇಶ್​ಗೆ ತಲೆ ತಿರುಗಿದೆ
Image Credit : Zee Kannada Instagram

ರಮೇಶ್​ಗೆ ತಲೆ ತಿರುಗಿದೆ

ಎಂಗೇಜ್​ಮೆಂಟ್​ಗೆ ತಾನೇ ಖುದ್ದು ನಿಂತು ಎಲ್ಲಾ ಕಾರ್ಯ ಮಾಡುತ್ತಿರುವುದನ್ನು ನೋಡಿ ರಮೇಶ್​ಗೆ ತಲೆ ತಿರುಗಿದೆ. ಏನೋ ಎಡವಟ್ಟು ಆಗ್ತಿದೆ ಎಂದು ಎನ್ನಿಸಿದೆ. ಆದರೂ ಕರ್ಣ ಯಾಕೆ ನಿಧಿ ಮತ್ತು ಅರ್ಜುನನ ಎಂಗೇಜ್​ಮೆಂಟ್​ಗೆ ಇಷ್ಟು ಉತ್ಸುಕನಾಗಿದ್ದಾನೆ ಎನ್ನೋದು ಅವನಿಗೆ ಗೊತ್ತಾಗ್ತಿಲ್ಲ.

46
ಹೀಗಿದೆ ಲಾಜಿಕ್​
Image Credit : Zee Kannada Instagram

ಹೀಗಿದೆ ಲಾಜಿಕ್​

ಇದೀಗ ಎಂಗೇಜ್​ಮೆಂಟ್​ ನಡೆಯುತ್ತಿದೆ. ಇಲ್ಲೇ ಇರೋದು ವಿಶೇಷ. ಅರ್ಜುನ್​ನನ್ನು ಮಹಡಿ ಮೇಲೆ ಕಳಿಸಿರುವ ಕರ್ಣ, ಅಲ್ಲಿಂದ ಒಂದು ದಾರ ಬಿಟ್ಟಿದ್ದಾನೆ. ಆ ದಾರವನ್ನು ನಿಧಿಯ ಬೆರಳಿಗೆ ಸುತ್ತಿದ್ದಾನೆ. ಅರ್ಜುನ್​ ಅಲ್ಲಿಂದ ಉಂಗುರ ಹಾಕಿದರೆ ಅದು ನಿಧಿಯ ಬೆರಳಿಗೆ ಬರುತ್ತದೆ ಎನ್ನುವುದು ಲಾಜಿಕ್​!

56
ನಿಧಿ-ಕರ್ಣನ ಎಂಗೇಜ್​ಮೆಂಟ್​
Image Credit : Instagram

ನಿಧಿ-ಕರ್ಣನ ಎಂಗೇಜ್​ಮೆಂಟ್​

ಕೊನೆಗೆ ದಾರ ಕೆಳಗೆ ಬರುವ ಸಮಯದಲ್ಲಿಯೇ ಲೈಟ್​ ಆಫ್ ಮಾಡಲಾಗಿದೆ. ಬೆರಳಿನ ಹತ್ತಿರ ಉಂಗುರ ಬಂದಾಗ ಕರ್ಣ ಆ ಉಂಗುರವನ್ನು ತಾನೇ ನಿಧಿಗೆ ತೊಡಿಸಿದ್ದಾನೆ. ಅಲ್ಲಿಗೆ ಕರ್ಣ ಮತ್ತು ನಿಧಿ ಎಂಗೇಜ್​ಮೆಂಟ್​ ಮುಗಿದಿದೆ.

66
ತಲೆಯ ಹುಡುಕಾಟದಲ್ಲಿ ವೀಕ್ಷಕರು
Image Credit : Instagram

ತಲೆಯ ಹುಡುಕಾಟದಲ್ಲಿ ವೀಕ್ಷಕರು

ಇದನ್ನು ನೋಡಿದ ವೀಕ್ಷಕರಿಗೆ ಖುಷಿಯಾದರೂ, ಇಂಥ ಐಡಿಯಾ ಕೊಟ್ಟಿರೋ ತಲೆ ಯಾರದ್ದು ಎಂದು ಪ್ರಶ್ನಿಸುತ್ತಿದ್ದಾರೆ. ದಾರದಿಂದ ಉಂಗುರ ಬಂದರೆ, ಅದು ನೇರವಾಗಿ ಬೆರಳಿಗೆ ಹೋಗಿ ಕುಳಿತುಕೊಳ್ಳಲು ಸಾಧ್ಯನಾ ಎನ್ನುವುದು ಅವರ ಪ್ರಶ್ನೆ. ಇಂಥ ಹುಚ್ಚು ಲಾಜಿಕ್​ ಎಲ್ಲಿಯೂ ನೋಡಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರೆ, ಇಂಥದ್ದೊಂದು ವಿಭಿನ್ನ ಐಡಿಯಾ ಬಂದವರಿಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಒಟ್ಟಿನಲ್ಲಿ ಈ ಪ್ಲ್ಯಾನ್​ ಮಾಡಿರೋ ಹಿಂದಿನ ತಲೆ ಎಲ್ಲಿದೆ ಎಂದು ಹುಡುಕಾಟ ನಡೆಸುತ್ತಿದ್ದಾರೆ ವೀಕ್ಷಕರು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
ಸಂಬಂಧಗಳು

Latest Videos
Recommended Stories
Recommended image1
Amruthadhaare Serial: ಜಯದೇವ್‌ನನ್ನು ಬೀದಿಗೆ ತಂದ ದಿಯಾ ಬೇಬಿ; ಅಂಥ ದ್ವೇಷ ಏನಿತ್ತು?
Recommended image2
ಅಯ್ಯೋ ಇದೆಂಥಾ ಶ್ರೀ ಗಂಧದಗುಡಿ ಸಂಬಂಧ? ಸ್ವಂತ ತಮ್ಮ ಹರಿಯನ್ನ ಭಾಮೈದನನ್ನಾಗಿ ಮಾಡಿಕೊಂಡ ಮುತ್ತು!
Recommended image3
Bigg Boss ರಕ್ಷಿತಾ ಶೆಟ್ಟಿ ಮಾತಿಗೆ ವರ್ತೂರು ಸಂತೋಷ್​ ಸಿಕ್ಕಾಪಟ್ಟೆ ಅಸಮಾಧಾನ: 2 ಲಕ್ಷದ ಕಥೆ ಏನಾಯ್ತು
Related Stories
Recommended image1
Amruthadhaare: ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು: ಸೀರಿಯಲ್​ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
Recommended image2
Amruthadhaare ರೋಚಕ ಟ್ವಿಸ್ಟ್‌: ಕಳೆದು ಹೋದ ಮಗಳೇ ಗೌತಮ್‌ ಪಾಲಿನ ವಿಲನ್‌? ಯಾರೀಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved