Amruthadhaare ರೋಚಕ ಟ್ವಿಸ್ಟ್: ಕಳೆದು ಹೋದ ಮಗಳೇ ಗೌತಮ್ ಪಾಲಿನ ವಿಲನ್? ಯಾರೀಕೆ
‘ಅಮೃತಧಾರೆ’ ಧಾರಾವಾಹಿಯಲ್ಲಿ ಜ್ಯೋತಿಷಿಯೊಬ್ಬರು ಗೌತಮ್ ಜೀವಕ್ಕೆ ಹೆತ್ತ ಮಗಳಿಂದಲೇ ಅಪಾಯವಿದೆ ಎಂದು ನುಡಿದಿದ್ದಾರೆ. ಇದರಿಂದ ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳಾ ಅಥವಾ ಸದ್ಯ ಇರುವ ಮಗಳಿಂದ ತೊಂದರೆಯೇ ಎಂಬ ಗೊಂದಲ ಮೂಡಿದೆ. ಆದರೆ, ಕಳೆದುಹೋದ ಅವಳಿ ಮಗಳಿಂದಲೇ ಕಂಟಕ ಎನ್ನಲಾಗುತ್ತಿದೆ.

ರೋಚಕ ಹಂತ
ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ರೋಚಕ ಹಂತ ತಲುಪಿದೆ. ಇನ್ನೇನು ಸೀರಿಯಲ್ ಮುಗಿಯತ್ತೆ ಎಂದುಕೊಂಡಾಗಲೇ ಅದು ಮುಗಿಯಲ್ಲ ಎನ್ನುವುದು ತಿಳಿದಿದೆ. ಇದಕ್ಕೆ ಕಾರಣ, ಜ್ಯೋತಿಷಿ ಕೊಟ್ಟ ಹಿಂಟ್.
ವೀಕ್ಷಕರಿಗೆ ಗೊಂದಲ
ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್ ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ.
ಅವಳಿ ಪುತ್ರಿಯಿಂದ ತೊಂದರೆ?
ಇದರ ಅರ್ಥ, ಭೂಮಿಕಾ ಗರ್ಭಿಣಿ ಆಗ್ತಾಳೋ, ಬಿಡ್ತಾಳೋ ಆದರೆ, ನಿಮಗೆ ಹುಟ್ಟಿದ ಮಗಳಿಂದಲೇ ತೊಂದರೆ ಎಂದರೆ, ಅದು ಕಳೆದು ಹೋಗಿರುವ ಅವಳಿ ಮಗಳು ಎನ್ನುವುದು ವೀಕ್ಷಕರ ಅಭಿಪ್ರಾಯ.
ಮುಗಿಯಲ್ಲ ಸೀರಿಯಲ್
ಸದ್ಯ ಭೂಮಿಕಾ ಮತ್ತು ಗೌತಮ್ ಬಳಿ ಇರುವಾಕೆಯೇ ಅವರ ನಿಜವಾದ ಮಗಳು ಇರಬಹುದು. ಸೀರಿಯಲ್ ಎಂಡ್‌ನಲ್ಲಿ ಹೀಗೆ ಮಾಡಿ ಸೀರಿಯಲ್ ಮುಗಿಸ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಅದನ್ನು ಸದ್ಯ ಮುಗಿಸುವ ಹಾಗೆ ಕಾಣಿಸುವುದಿಲ್ಲ.
ಎಲ್ಲಿದ್ದಾಳೆ ಕಳೆದು ಹೋದ ಪುತ್ರಿ?
ಜ್ಯೋತಿಷಿಯ ಈ ಮಾತಿನಿಂದ ಇನ್ನೂ ಕೆಲವು ವರ್ಷ ಅಮೃತಧಾರೆ ಮುಂದುವರೆಯುವಂತೆ ಕಾಣುತ್ತಿದೆ. ಇದರ ಅರ್ಥ, ಮಗಳಿಂದ ತೊಂದರೆ ಎಂದರೆ ಅದು ಕಳೆದು ಹೋಗಿರುವ ಮಗಳಿಂದ ಎನ್ನುವುದು ಈಗ ನಿಶ್ಚಿತವಾಗಿದೆ. ಹಾಗಿದ್ದರೆ ಆ ಮಗಳು ಎಲ್ಲಿದ್ದಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಮತ್ತೆ ಮಗು?
ಜ್ಯೋತಿಷಿಯ ಮಾತು ಕೇಳಿ ಕೆಲವರು ಭೂಮಿಕಾ ಮತ್ತು ಗೌತಮ್ಗೆ ಇನ್ನೊಂದು ಹೆಣ್ಣುಮಗು ಹುಟ್ಟುತ್ತದೆ. ಅದರಿಂದ ಸಮಸ್ಯೆ ಆಗಬಹುದು ಎಂದು ಹೇಳುತ್ತಿದ್ದರಾದರೂ, ಸದ್ಯದ ಮಟ್ಟಿಗೆ ಮಿಸ್ಸಿಂಗ್ ಮಗಳ ಬಗ್ಗೆ ಇನ್ನೂ ತೋರಿಸದ ಕಾರಣದಿಂದ ಆಕೆಯೇ ವಿಲನ್ ಆಗಿ ಬಂದು ತೊಂದರೆ ಕೊಡಬಹುದು ಎನ್ನಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

