- Home
- Entertainment
- TV Talk
- Amruthadhaare: ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು: ಸೀರಿಯಲ್ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
Amruthadhaare: ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು: ಸೀರಿಯಲ್ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ
ಐದು ವರ್ಷಗಳ ನಂತರ ಒಂದಾದ ಭೂಮಿಕಾ ಮತ್ತು ಗೌತಮ್ ಕಥೆ ಮುಗಿಯಿತು ಎಂದುಕೊಂಡರೆ, ಈಗ ಜ್ಯೋತಿಷಿಯೊಬ್ಬರ ಎಂಟ್ರಿಯಾಗಿದೆ. ಮಗಳಿಂದಲೇ ಗಂಡನಿಗೆ ಕಂಟಕ, ಮತ್ತೊಂದು ಮಗು ಜನಿಸಲಿದೆ ಎಂಬ ಭವಿಷ್ಯದಿಂದಾಗಿ ಸೀರಿಯಲ್ ಅಂತ್ಯವಿಲ್ಲದೆ ಮುಂದುವರಿಯುತ್ತಿದ್ದು, ಇದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

ಐದು ವರ್ಷ ದೂರ-ದೂರ
ಐದು ವರ್ಷಗಳಿಂದ ದೂರವಾಗಿದ್ದ ಭೂಮಿಕಾ ಮತ್ತು ಗೌತಮ್ ಕೊನೆಗೂ ಒಂದಾದರು. ಅತ್ತ ಜೈದೇವ್ ಬೀದಿಪಾಲಾದ. ವಿಲನ್ ಶಕುಂತಲಾಕ್ಕೆ ಕೊನೆಗೂ ಮಗ ಗೌತಮ್‌ನೇ ಆಸರೆಯಾದ. ಇಷ್ಟು ಆಗುತ್ತಿದ್ದಂತೆಯೇ ಸೀರಿಯಲ್ ಮುಗಿಯಿತು ಎಂದುಕೊಂಡವರೇ ವೀಕ್ಷಕರು. ಅವರ ಬಳಿ ಇರುವ ಮಿಂಚುನೇ ಸ್ವಂತ ಮಗಳು ಎಂದು ತಿಳಿದು ಹ್ಯಾಪ್ಪಿ ಎಂಡಿಂಗ್ ಆಗುತ್ತದೆ ಎಂದು ಖುಷಿಪಟ್ಟವರು ಹಲವರು.
ಟಿಆರ್‌ಪಿಯಲ್ಲಿ ಮುಂದು
ಆದರೆ ಟಿಆರ್‌ಪಿಯಲ್ಲಿ ಮುಂದೆ ಇರುವ ಸೀರಿಯಲ್‌ಗಳನ್ನು ಹೀಗೆ ಮುಗಿಸಲು ಸಾಧ್ಯವಿದೆಯೆ? ಖಂಡಿತಾ ಇಲ್ಲ. ಅದಕ್ಕಾಗಿ ಈಗ ಜ್ಯೋತಿಷಿಯ ಎಂಟ್ರಿ ಕೊಡಲಾಗಿದೆ. ಗೌತಮ್ ಜಾತಕದಲ್ಲಿ ಮಗಳಿಂದಲೇ ಅಪಾಯ ಎಂದು ಜ್ಯೋತಿಷಿ ಹೇಳಿದ್ದಾರೆ.
ಇನ್ನೊಂದು ಮಗು
ಜೊತೆಗೆ ಇಬ್ಬರಿಗೂ ಮತ್ತೊಂದು ಮಗು ಹುಟ್ಟತ್ತೆ ಎಂದಿದ್ದಾರೆ. ಇಬ್ಬರಿಗೂ ಮತ್ತೊಂದು ಮಗು ಹುಟ್ಟುತ್ತೋ ಬಿಡುತ್ತೋ, ಆದರೆ ಹೀಗೆ ವಿನಾ ಕಾರಣ, ಹೀಗೆ ಸೀರಿಯಲ್ ಎಳೆಯುತ್ತಿರುವ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.
ಎಂಡ್ ಆಗತ್ತೆ ಎಂದುಕೊಂಡ್ರೆ!
ಎಲ್ಲವೂ ಚೆನ್ನಾಗಿ ಎಂಡ್ ಆಗಿತ್ತು. ಇಷ್ಟು ವರ್ಷ ಗೋಳಾಡಿದ ಗೌತಮ್ ಮತ್ತು ದಂಪತಿಗೆ ಇನ್ನಾದರೂ ಒಳ್ಳೆಯದಾಗಲಿ ಎನ್ನುತ್ತಿರುವಾಗಿ ಮತ್ತೆ ಸೀರಿಯಲ್ ಎಳೆಯುವದರಲ್ಲಿ ಅರ್‍ಥವೇನಿದೆ, ಇನ್ನಂತೂ ನಾವು ಸೀರಿಯಲ್ ನೋಡಲ್ಲ ಎಂದು ಕೋಪ ವ್ಯಕ್ತಪಡಿಸುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು.
ಹಾಗೆಲ್ಲಾ ಮಾಡಲ್ಲ ಬಿಡಿ
ಅಷ್ಟಕ್ಕೂ ಹೀಗೆ ಧಮ್ಕಿ ಕೊಡುವ ಸೀರಿಯಲ್ ಪ್ರೇಮಿಗಳು ಸೀರಿಯಲ್ ಅಂತೂ ಬಿಡುವುದಿಲ್ಲ ಎನ್ನುವುದು ನಿರ್ದೇಶಕರಿಗೂ ತಿಳಿದಿರುತ್ತದೆ. ಆದರೆ ಮತ್ತೆ ಗೋಳು ಶುರುವಾಯ್ತಲ್ಲ ಎನ್ನುವ ನೋವು ಅವರದ್ದು ಅಷ್ಟೇ.
ಜೈದೇವ್ಗೆ ಸಿಕ್ತಾಳಾ ಮಗಳು?
ಅದೇ ಇನ್ನೊಂದೆಡೆ ಜೈದೇವ ಬೀದಿಪಾಲಾಗಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇವನಿಗೆ ಏನಾದ್ರೂ ಭೂಮಿಕಾ-ಗೌತಮ್ ಮಗಳು ಸಿಕ್ಕು ಆಕೆಯನ್ನು ತನ್ನ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

