- Home
- Entertainment
- TV Talk
- ರೋಚಕ ತಿರುವಿನಲ್ಲಿ Karna Serial: ತಾಳಿ ಕಟ್ಟುವಷ್ಟರಲ್ಲಿಯೇ ಬ್ಲಾಸ್ಟ್- ಯಾರೀ ಲೇಡಿ ವಿಲನ್
ರೋಚಕ ತಿರುವಿನಲ್ಲಿ Karna Serial: ತಾಳಿ ಕಟ್ಟುವಷ್ಟರಲ್ಲಿಯೇ ಬ್ಲಾಸ್ಟ್- ಯಾರೀ ಲೇಡಿ ವಿಲನ್
ಕರ್ಣ ಮತ್ತು ನಿಧಿ ಮದುವೆಯಾಗುತ್ತಿರುವ ಸಂದರ್ಭದಲ್ಲಿಯೇ ಹೊಸ ಲೇಡಿ ವಿಲನ್ ಎಂಟ್ರಿ ಕೊಟ್ಟಿದ್ದಾಳೆ. ಕರ್ಣನಿಗೆ ಮದುವೆ ಗಿಫ್ಟ್ ಎಂದು ಕಾರು ಬ್ಲಾಸ್ಟ್ ಮಾಡಿಸಿ, ಆತನ ಪ್ರಾಣಕ್ಕೆ ಕುತ್ತು ತಂದಿದ್ದಾಳೆ. ಈ ವಿಲನ್ ಯಾರು ಮತ್ತು ಕಾರ್ ಮೇಲಿದ್ದ ಫೋಟೋ ರಹಸ್ಯವೇನು ಎನ್ನುವುದು ಕಥೆಯ ಹೊಸ ತಿರುವು.

ರೋಚಕ ಹಂತ
ಕರ್ಣ ಸೀರಿಯಲ್ (Karna Serial) ಇದೀಗ ರೋಚಕ ಹಂತ ತಲುಪಿದೆ. ಕರ್ಣ ಮತ್ತು ನಿಧಿ ಒಂದಾಗಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರಿದೆ. ಅದರಂತೆಯೇ ನಿತ್ಯಾ ತ್ಯಾಗ ಮಾಡಿ ನಿಧಿ ಮತ್ತು ಕರ್ಣನನ್ನು ಒಂದು ಮಾಡಿಸಿದ್ದಾಳೆ.

ತಾಳಿ ಕಟ್ಟುವಾಗ ಟ್ವಿಸ್ಟ್
ಇನ್ನೇನು ತಾಳಿ ಕಟ್ಟುವಷ್ಟರಲ್ಲಿಯೇ ಸೀರಿಯಲ್ ಟ್ವಿಸ್ಟ್ ಪಡೆದುಕೊಂಡಿದೆ. ಲೇಡಿ ವಿಲನ್ ಎಂಟ್ರಿಯಾಗಿದೆ. ಕರ್ಣನ ಮದುವೆ ಆಯ್ತು ಎಂದು ಪುರುಷನೊಬ್ಬ ಆ ವಿಲನ್ಗೆ ಹೇಳ್ತಾನೆ. ಅವನು ರಮೇಶ್ ಎನ್ನುವುದರಲ್ಲಿ ಡೌಟೇ ಇಲ್ಲ.
ಯಾರೀ ಲೇಡಿ ವಿಲನ್
ಆದರೆ, ಆ ಲೇಡಿ ವಿಲನ್, ಹಾಗಿದ್ರೆ ಈಗ ಶುರುವಾಯ್ತು ಅಸಲಿ ಆಟ. ಕರ್ಣನಿಗೆ ಮದ್ವೆ ಗಿಫ್ಟ್ ಕೊಡೋಣ ಎಂದು ಹೇಳಿ ಕಾರನ್ನು ಬ್ಲಾಸ್ಟ್ ಮಾಡಿಸುತ್ತಾಳೆ.
ಕರ್ಣನ ಫೋನ್ಗೆ ಮೆಸೇಜ್
ಅದಕ್ಕೂ ಮುನ್ನ ಕರ್ಣನ ಫೋನ್ಗೆ ಅದರ ಮೆಸೇಜ್ ಬರುತ್ತದೆ. ಅವನು ಅಲ್ಲಿಗೆ ಹೋಗುವಷ್ಟರಲ್ಲಿಯೇ ಆ ಬ್ಲಾಸ್ಟ್ ನಡೆದಿರುತ್ತದೆ. ಹಾಗಿದ್ರೆ ಆ ಲೇಡಿ ವಿಲನ್ ಯಾರು ಎನ್ನುವುದು ಈಗಿರುವ ಪ್ರಶ್ನೆ.
ಫೋಟೋಗಾಗಿ ಪ್ರಾಣ
ಕಾರಿನ ಮೇಲೆ ಫೋಟೋ ಇಟ್ಟಿರುತ್ತಾರೆ. ಈ ಫೋಟೋ ತೆಗೆಯಲು ಹೋಗಿ ಕರ್ಣ ಪ್ರಾಣವನ್ನೇ ಪಣಕ್ಕೆ ಇಡ್ತಾನೆ. ಹಾಗಿದ್ರೆ ಆ ಫೋಟೋದಲ್ಲಿ ಇರುವವರು ಯಾರು? ಅದು ಸುಟ್ಟುಹೋಗಬಾರದು ಎಂದು ಕರ್ಣ ಏಕೆ ಹಾಗೆ ಮಾಡಿದ ಎನ್ನುವ ಇಂಟರೆಸ್ಟಿಂಗ್ ಸ್ಟೋರಿ ಈಗ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

