- Home
- News
- Politics
- ನಾನು ಸಿಎಂ ಆದ್ರೆ LED ಸ್ಕ್ರೀನ್ನಲ್ಲಿ ಕರ್ನಾಟಕ; ರೆಡಿಯಾಯ್ತು ಉಪೇಂದ್ರ ನೀಲಿ ನಕ್ಷೆ- ಅದ್ರಲ್ಲಿ ಏನೇನಿದೆ ನೋಡಿ
ನಾನು ಸಿಎಂ ಆದ್ರೆ LED ಸ್ಕ್ರೀನ್ನಲ್ಲಿ ಕರ್ನಾಟಕ; ರೆಡಿಯಾಯ್ತು ಉಪೇಂದ್ರ ನೀಲಿ ನಕ್ಷೆ- ಅದ್ರಲ್ಲಿ ಏನೇನಿದೆ ನೋಡಿ
ನಟನಾಗಿ ಯಶಸ್ವಿಯಾದರೂ ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಕಾಣದ ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ಛಲವನ್ನು ಬಿಟ್ಟಿಲ್ಲ. ಇತ್ತೀಚೆಗೆ ತಾವು ಮುಖ್ಯಮಂತ್ರಿಯಾದರೆ ತಂತ್ರಜ್ಞಾನ ಬಳಸಿ ಪಾರದರ್ಶಕ ಆಡಳಿತ ನೀಡುವುದಾಗಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಶೈಲಿಯನ್ನೇ ಬದಲಾಯಿಸುವುದಾಗಿ ಹಂಚಿಕೊಂಡಿದ್ದಾರೆ.

ನಟನಾಗಿ ಓಕೆ... ಆದ್ರೆ
ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಟನಾಗಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಅವರು ರಾಜಕೀಯದಲ್ಲಿಯೂ ಮಿಂಚಬೇಕು ಎಂದು ಬಯಸಿದರೂ, ಅಭಿಮಾನಿಗಳು ಅವರನ್ನು ರಾಜಕೀಯ ವ್ಯಕ್ತಿಯಾಗಿ ನೋಡಲು ಇಷ್ಟಪಡಲಿಲ್ಲ. ಅಷ್ಟಕ್ಕೂ ನಟರು, ರಾಜಕೀಯದಲ್ಲಿಯೂ ಮುಂದೆ ಬರುವುದು ತಮಿಳುನಾಡಿನಲ್ಲಿ ಮಾತ್ರ ಸಾಧ್ಯ. ಬೇರೆ ಕಡೆ ಅದರಲ್ಲಿಯೂ ಕರ್ನಾಟಕದಲ್ಲಿ ಮಾತೇ ಬೇರೆ.

ಕೈಹಿಡಿಯಲಿಲ್ಲ ಫ್ಯಾನ್ಸ್
ಆದರೂ ಪ್ರಜಾಕೀಯ ಪಕ್ಷದಿಂದ ಏನೆಲ್ಲಾ ಮಾಡಬಹುದು ಎಂದು ಭರವಸೆಗಳ ಮಾತುಗಳನ್ನು ಆಡಿದ್ದ ಉಪೇಂದ್ರ ಅವರಿಗೆ ಜನರು ಸದ್ಯ ಅಂತೂ ಕೈಹಿಡಿಯಲಿಲ್ಲ. ಅವರನ್ನು ನಟನಾಗಿ ನೋಡಲು ಇಷ್ಟಪಡುತ್ತಿದ್ದಾರೆ ಅಷ್ಟೇ. ಆದರೂ ಉಪೇಂದ್ರ ಅವರು ಛಲ ಬಿಡಲಿಲ್ಲ.
ವಿಜಯ್ ಮಾದರಿ
ಅಷ್ಟಕ್ಕೂ ಅಧಿಕಾರ ಅಂದರೆ ಹಾಗೇ ಅಲ್ವಾ? ಒಮ್ಮೆ ಮನಸ್ಸಿನಲ್ಲಿ ಹೊಕ್ಕಿಬಿಟ್ಟರೆ, ಅದು ಹೊರಕ್ಕೆ ಬರುವುದು ಕಷ್ಟ. ಅದರಲ್ಲಿಯೂ ತಮಿಳುನಾಡಿನಲ್ಲಿ ನಟ ದಳಪತಿ ಜೋಸೆಫ್ ವಿಜಯ್ ಅವರು ಸಿಎಂ ಆದ್ಮೇಲೆ ಹಲವು ನಟರಲ್ಲಿ ಆಸೆ ಮೊಳಗಿದೆ.
ಸಿಎಂ ಆದ್ರೆ...
ಇದೀಗ ನಟ ಉಪೇಂದ್ರ ಅವರು ರ್ಯಾಪಿಡ್ ರಶ್ಮಿ ಷೋನಲ್ಲಿ, ತಾವು ಸಿಎಂ ಆದ್ಮೇಲೆ ಏನೇನು ಮಾಡ್ತೇವೆ ಎಂದು ಹೇಳಿದ್ದಾರೆ. ಹೆಚ್ಚಿನ ಟೆಕ್ನಾಲಾಜಿ ಉಪಯೋಗಿಸ್ತೀನಿ. ರಾಜಕೀಯದ ಟೋಟಲ್ ಸ್ಟ್ರಕ್ಚರ್ ಬೇರೆ ಮಾಡ್ತೇನೆ, ಅದ್ಭುತ ಸೃಷ್ಟಿ ಮಾಡುತ್ತೇನೆ. ನನ್ನ ಆಸೆಗಳೇ ಡಿಫರೆಂಟ್ ಎಂದಿದ್ದಾರೆ ಉಪೇಂದ್ರ.
ಎಲ್ಇಡಿ ಸ್ಕ್ರೀನ್ನಲ್ಲಿ ಮೀಡಿಯಾ
ಎಲ್ಇಡಿ ಸ್ಕ್ರೀನ್ನಲ್ಲಿ ಮೀಡಿಯಾ ರೀತಿ ಸರ್ಕಾರ ಇರಬೇಕು. ಎಲ್ಲೆಲ್ಲಿ ಏನೇನು ನಡೀತಾ ಇದೆ, ಎಲ್ಲವೂ ಅಲ್ಲಿಯೇ ಪಾರದರ್ಶಕವಾಗಿ ಕಾಣಿಸಬೇಕು. ಆ ಮೀಡಿಯಾಕ್ಕೆ ಎಲ್ಲಾ ಇಲಾಖೆಗಳೂ ಕನೆಕ್ಟ್ ಆಗಿರಬೇಕು. ಎಲ್ಲೆಲ್ಲಿ ಏನೇನು ಕೆಲ್ಸ ಆಗ್ತಿದ್ಯೋ ಅವೆಲ್ಲಾ ಡೈರೆಕ್ಟ್ ಆಗಿ ಕಾಣುವಂತೆ ಇರಬೇಕು ಎಂದಿದ್ದಾರೆ.
ಸಿಎಂ ಉದ್ಘಾಟನೆ ಅಲ್ಲ
ರಸ್ತೆ ಕಾಮಗಾರಿ ಮಾಡಿದಾಗ ಸಿಎಂ ಆಗಿ ನಾನು ಉದ್ಘಾಟನೆ ಮಾಡುವುದಲ್ಲ, ಬದಲಿಗೆ ಕಾಂಟ್ರ್ಯಾಕ್ಟರ್ ಅನ್ನು ಕರೆಸಿ ಉದ್ಘಾಟನೆ ಮಾಡಿಸಬೇಕು. ಇದರಿಂದ ಅವರಿಗೂ ಹುಮ್ಮಸ್ಸು ಬರುತ್ತದೆ, ಸ್ಫೂರ್ತಿ ಬರುತ್ತದೆ ಎಂದಿದ್ದಾರೆ ಉಪೇಂದ್ರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

