- Home
- Entertainment
- TV Talk
- Amruthadhaare Serial Update: ಗೌತಮ್ ಮಗಳ ರಹಸ್ಯ ಜೈದೇವ್ ಕೈವಶ? ಜ್ಯೋತಿಷಿ ಹೇಳಿದ ಕೆಟ್ಟ ಘಳಿಗೆ ಬಂದಾಯ್ತು
Amruthadhaare Serial Update: ಗೌತಮ್ ಮಗಳ ರಹಸ್ಯ ಜೈದೇವ್ ಕೈವಶ? ಜ್ಯೋತಿಷಿ ಹೇಳಿದ ಕೆಟ್ಟ ಘಳಿಗೆ ಬಂದಾಯ್ತು
ಅಮೃತಧಾರೆ ಧಾರಾವಾಹಿಯು ರೋಚಕ ತಿರುವು ಪಡೆದಿದೆ. ಗೌತಮ್ ಮಗಳು ಮಿಂಚು ಎಂಬ ಸತ್ಯವನ್ನು ಜೈದೇವ್ ಶಕುನಿಮಾಮನಿಂದ ತಿಳಿಯುವ ಹಂತದಲ್ಲಿದ್ದು, ಆಕೆಯನ್ನು ಕಿಡ್ನ್ಯಾಪ್ ಮಾಡುವ ಮೂಲಕ ಗೌತಮ್ ಮತ್ತು ಭೂಮಿಕಾಗೆ ಹಿಂಸೆ ನೀಡುವ ಸಾಧ್ಯತೆ ಇದೆ.

ಅಮೃತಧಾರೆ ರೋಚಕ ತಿರುವು
ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ರೋಚಕ ಹಂತ ತಲುಪಿದೆ. ಅತ್ತ ಜ್ಯೋತಿಷಿ ಗೌತಮ್ ಜೀವಕ್ಕೆ ಮಗಳಿಂದ ಅಪಾಯ ಇದೆ ಎಂದು ಹೇಳಿದ್ರೆ, ಇತ್ತ ಜೈದೇವ್ಗೂ ಮಿಂಚುನೇ ಗೌತಮ್ ಮಗಳು ಎನ್ನುವ ವಿಷ್ಯ ಗೊತ್ತಾಗುವ ಟೈಮ್ ಬಂದಾಗಿದೆ.

ಶಕುನಿಮಾಮಾ ಮೊಬೈಲ್ನಲ್ಲಿ ಡಿಟೇಲ್ಸ್
ಇದಾಗಲೇ ಶಕುನಿಮಾಮಾನ ಮೊಬೈಲ್ನಲ್ಲಿ ಎಲ್ಲಾ ಡಿಟೇಲ್ಸ್ ಇದೆ. ಮಿಂಚುನೇ ಗೌತಮ್ ಮತ್ತು ಭೂಮಿಕಾ ಮಗಳು ಎನ್ನುವ ಸತ್ಯ ಅದು. ಅದೇ ರೀತಿ ಈತನ ಬಳಿ ಎಲ್ಲಾ ಡಿಟೇಲ್ಸ್ ಇದೆ ಎನ್ನುವ ಸತ್ಯ ಜೈದೇವ್ಗೆ ತಿಳಿದಿದೆ.
ಮಗಳ ಡಿಟೇಲ್ಸ್
ಶಕುನಿಮಾಮಾನನ್ನು ಬೈಕ್ ಮೇಲೆ ಕುಳ್ಳರಿಸಿಕೊಂಡು ಹೋದ ಜೈದೇವ, ಅವನ ಬಳಿ ಆ ಮಗಳ ಡಿಟೇಲ್ಸ್ ಕೇಳಿದ್ದಾನೆ. ಲಕ್ಷ್ಮೀಕಾಂತ ತಪ್ಪಿಸಿಕೊಂಡು ಹೋಗಲು ನೋಡಿದ್ರೂ ಜೈದೇವ್ ಬಿಟ್ಟಿಲ್ಲ.
ಜೈದೇವ್ನಿಂದ ಕಿಡ್ನ್ಯಾಪ್
ಅಲ್ಲಿಗೆ ಎಲ್ಲಾ ಡಿಟೇಲ್ಸ್ ಕಲೆಕ್ಟ್ ಮಾಡೋದು ಗ್ಯಾರೆಂಟಿ. ಇನ್ನು ಮಿಂಚುನೇ ನಿಜವಾದ ಮಗಳು ಎಂದುತಿಳಿದರೆ ಆಕೆಯ ಕಿಡ್ನ್ಯಾಪ್ ಮಾಡಿಸಿ, ಗೌತಮ್ ಮತ್ತು ಭೂಮಿಕಾರಿಗೆ ಹಿಂಸೆ ಕೊಡುವುದು ತಪ್ಪಲ್ಲ. ಮಗಳಿಂದ ತೊಂದರೆ ಎನ್ನುವ ಮಾತು ಅಲ್ಲಿಗೆ ನಿಜವಾಗಲಿದೆ ಎಂದಾಯ್ತು.
ಜೈಲಿನಿಂದ ಬಿಡುಗಡೆ
ಒಟ್ಟಿನಲ್ಲಿ ಸೀರಿಯಲ್ ಮುಗಿಯತ್ತೆ ಮುಗಿಯತ್ತೆ ಎನ್ನುವಷ್ಟರಲ್ಲಿಯೇ ಇನ್ನಷ್ಟು ತಿರುವು ಕೊಡುತ್ತಿದ್ದಾರೆ. ಜೈದೇವ್ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದ ತಪ್ಪಿಗೆ ಇದೆಲ್ಲಾ ಅನುಭವಿಸಲೇಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

