- Home
- Entertainment
- TV Talk
- Karna Serial: ಎಲ್ಲ ಸತ್ಯ ಹೊರಬಂತು, ಸಮಸ್ಯೆ ಪರಿಹಾರವಾಯ್ತು, ಇನ್ನು Nidhi-Karnaನನ್ನು ಯಾರೂ ದೂರ ಮಾಡೋಕಾಗಲ್ಲ
Karna Serial: ಎಲ್ಲ ಸತ್ಯ ಹೊರಬಂತು, ಸಮಸ್ಯೆ ಪರಿಹಾರವಾಯ್ತು, ಇನ್ನು Nidhi-Karnaನನ್ನು ಯಾರೂ ದೂರ ಮಾಡೋಕಾಗಲ್ಲ
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ನಿಧಿ-ಕರ್ಣ ಒಂದಾಗ್ತಾರಾ ಎನ್ನುವ ಪ್ರಶ್ನೆ ಬಂದಿದೆ. ಹೀಗಿರುವಾಗ ವಾಹಿನಿಯು ವೀಕ್ಷಕರಿಗೆ ಇಷ್ಟ ಆಗುವ ಪ್ರೋಮೋವನ್ನು ರಿಲೀಸ್ ಮಾಡಿದೆ. ವಿಶೇಷವಾಗಿ ಪ್ರೋಮೋ ಶೂಟ್ ಮಾಡಲಾಗಿದೆ.

ನಿಮ್ಮ ಮಗುವಿನ ಜವಾಬ್ದಾರಿ ನಮ್ಮದು
ಕರ್ಣ, ನಿತ್ಯಾ ಬಳಿ ಹೋಗಿ, “ನಿತ್ಯಾ, ನಮ್ಮಿಬ್ಬರಿಗೆ ಮದುವೆ ಆಗಿಲ್ಲ. ನಿಮ್ಮ ಜೊತೆ ನನ್ನ ಮದುವೆ ಆಗಿಲ್ಲ ಎಂದು ನಿಧಿಗೆ ಹೇಳ್ತೀನಿ. ನಿಮ್ಮ ಜವಾಬ್ದಾರಿ, ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಜವಾಬ್ದಾರಿ ನನ್ನದು” ಎಂದು ಹೇಳುತ್ತಾನೆ. ಇಷ್ಟುದಿನಗಳವರೆಗೂ ನಿತ್ಯಾಗೆ ನಿಧಿ-ಕರ್ಣ ಲವ್ ಮಾಡುತ್ತಿದ್ದಾರೆ ಎನ್ನುವ ಸತ್ಯ ಗೊತ್ತೇ ಇರಲಿಲ್ಲ.
ನಿಧಿ ಬಳಿ ಕರ್ಣ ಹೇಳಿದ್ದೇನು?
ಆಮೇಲೆ ನಿಧಿ ಬಳಿ ಹೋಗಿ, “ನಾನು ನಿತ್ಯಾಳನ್ನು ಮದುವೆ ಆಗಿಲ್ಲ, ಅವರ ಹೊಟ್ಟೆಯಲ್ಲಿರೋದು ನನ್ನ ಮಗುವಲ್ಲ, ಇಷ್ಟುದಿನ ಸುಳ್ಳು ಮುಚ್ಚಿಟ್ಟಿದ್ದಕ್ಕೆ ಕ್ಷಮಿಸು, ಆ ಮಗುವಿನ ತಂದೆ ತೇಜಸ್” ಎಂದು ಹೇಳಿದ್ದಾರೆ. ನಿಧಿಗೂ ಕೂಡ ಕರ್ಣ-ನಿತ್ಯಾ ಮದುವೆ ಆಗಿ ಮೂರು ತಿಂಗಳಿಗೆ ಹೇಗೆ ಗರ್ಭಿಣಿ ಆಗ್ತಾರೆ ಎಂದು ಡೌಟ್ ಇತ್ತು. ಇಷ್ಟುದಿನ ಅವಳು ಕರ್ಣ-ನಿತ್ಯಾ ಮದುವೆ ಆಯ್ತು ಎಂದು ಒದ್ದಾಡುತ್ತಿದ್ದಳು.
ನಿಧಿ-ಕರ್ಣ ಕಳೆದುಕೊಂಡಿದ್ದು ಸಿಕ್ಕಿತು
ಆಮೇಲೆ ನಿಧಿ, “ಕರ್ಣ ಸರ್, ನಾವು ಕಳೆದುಕೊಂಡಿದ್ದು ನಮಗೆ ಸಿಕ್ಕಿದೆ. ನಮ್ಮಿಬ್ಬರನ್ನು ಯಾರು ದೂರ ಮಾಡೋಕೆ ಸಾಧ್ಯ ಇಲ್ಲ. ನೀವು ನನ್ನ ಮದುವೆ ಆಗ್ತೀರಾ? ಅಕ್ಕನ ಜೀವನ ಸರಿ ಹೋಗ್ತಿದ್ದಂತೆ ನಮ್ಮ ಮದುವೆ” ಎಂದು ಹೇಳುತ್ತಾಳೆ.
ಕರ್ಣ-ನಿತ್ಯಾ ಮದುವೆ ನಾಟಕ
ಹೌದು, ಈ ಧಾರಾವಾಹಿಯಲ್ಲಿ ಕರ್ಣ-ನಿಧಿ ಪ್ರೀತಿ ಮಾಡುತ್ತಿದ್ದರು. ಇನ್ನೊಂದು ಕಡೆ ತೇಜಸ್-ನಿತ್ಯಾ ಲವ್ ಮಾಡುತ್ತಿದ್ದರು. ಇವರಿಬ್ಬರ ಮದುವೆ ದಿನವೇ ತೇಜಸ್ ಕಿಡ್ಮ್ಯಾಪ್ ಆಗುವುದು. ತೇಜಸ್ ಎಲ್ಲಿಗೆ ಹೋದ ಎಂದು ತಿಳಿಯದೆ ನಿತ್ಯಾ ಒದ್ದಾಡುತ್ತಾಳೆ. ಆ ಬಳಿಕ ಮೊಮ್ಮಗಳ ಜೀವನ ಹಾಳಾಯ್ತು ಎಂದು ಅಜ್ಜಿ ಅಳುತ್ತಿದ್ದಾಳೆ ಎಂದು ಕರ್ಣ, ನಿತ್ಯಾಳನ್ನು ಮದುವೆ ಆಗೋದಾಗಿ ಹೇಳುತ್ತಾನೆ.
ಮುಂದಿನ ದಿನಗಳಲ್ಲಿ ಏನಾಗಲಿದೆ?
ಕರ್ಣ ಹಾಗೂ ನಿತ್ಯಾ ಮದುವೆ ಆಗುವ ನಾಟಕ ಮಾಡುತ್ತಾರೆ. ಆದರೆ ಇವರಿಬ್ಬರು ಮದುವೆ ಆಗಿರೋದಿಲ್ಲ. ಅತ್ತ ತೇಜಸ್‌ಗೆ ತನ್ನ ಕಿಡ್ನ್ಯಾಪ್ ಮಾಡಿಸಿರೋದು ಕರ್ಣ ಎಂದು ತಲೆಗೆ ಹೋಗೋ ಥರ ಮಾಡ್ತಾರೆ. ಇನ್ನು ಕರ್ಣ, ನಿಧಿ ಲವ್ ವಿಚಾರ ರಮೇಶ್, ನಯನತಾರಾಗೆ ಮಾತ್ರ ಗೊತ್ತಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ವೀಕ್ಷಕರು ಏನು ಹೇಳಿದರು?
ವಾವ್ ವಾಟ್ ಎ ಪ್ರೊಮೋ. ಕಡೆಗೂ ಈ ದಿನ ಬಂದೆ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ನಿತ್ಯಾ ಪಾತ್ರ ಇಷ್ಟ ಆಗದೆ, ಬರಿ ದ್ವೇಷ ಮಾತುಗಳಿಂದ ಕೇಳಿ ನನಗೂ ಸ್ವಲ್ಪ ನಿತ್ಯಾ ಪಾತ್ರ ಇಷ್ಟ ಆಗದೇ ಇದದ್ದು ಉಂಟು. ಆದರೆ ಈ ಪ್ರೋಮೋ ನೋಡಿದಾಗ ನನಗೆ ಭಾಸವಾಗಿದ್ದು ನಿತ್ಯಾ ಪಾತ್ರ ನಿಧಿಗಿಂತ ತುಂಬಾ ಗಟ್ಟಿಯಾದ ಪಾತ್ರ ಹಾಗೂ ತುಂಬಾ ಕಷ್ಟವಾದ ಪಾತ್ರ ಎಂದು.
ಮದುವೆ Promo ನೋಡಿ ಎಷ್ಟು ದುಃಖ ಆಗಿತ್ತೋ ಅದರ ದುಪ್ಪಟ್ಟು ಖುಷಿ ಈ Promo ನೋಡಿ ಆಗ್ತಾ ಇದೆ..ನಂಗಂತೂ ನಂಬೋಕೆ ಆಗ್ತಿಲ್ಲ, ಇದು ಕನಸೋ ನನಸೋ ಎಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

