ಆ ಕರ್ಣನಂತೆ ನೀ ತ್ಯಾಗಿಯಾದೆ ಅಂತ ವಿಷ್ಣು ದಾದ ಲೆವೆಲ್‌ಗೆ ಬಿಲ್ಡಪ್‌ ತಗೊಂಡ ನಮ್ಮ ಕರ್ಣ ಸೀರಿಯಲ್‌ ಕರ್ಣ ಇದ್ದಕ್ಕಿದ್ದ ಹಾಗೆ ಗ್ಯಾಂಗ್‌ಸ್ಟರ್‌ ಆಗ್ಬಿಟ್ಟಿದ್ದಾರೆ. ಅಷ್ಟಕ್ಕೂ ಕನ್ನಡತಿ, ಕರ್ಣ ಸೀರಿಯಲ್‌ಗಳ ಸಿಕ್ಕಾಪಟ್ಟೆ ಒಳ್ಳೆ ಹುಡ್ಗ ಕಿರಣ್‌ ರಾಜ್‌ (Kiran raj) ಕಥೆ ಏನು!  

ಕಿರಣ್‌ ರಾಜ್‌ ಸದ್ಯ ಜೀ5 ಗಾಗಿ ʼಕರ್ಣʼ ಅನ್ನೋ ಸೂಪರ್‌ ಡೂಪರ್‌ ಸಿನಿಮಾ ಲೆವೆಲ್‌ ಸೀರಿಯಲ್‌ ಮಾಡ್ತಿದ್ದಾರೆ ಅನ್ನೋದು ಜಗತ್ತಿಗೆ ಗೊತ್ತಿರೋ ವಿಚಾರ. ಹಾಗೆ ನೋಡಿದರೆ ಈ ಸೀರಿಯಲ್‌ನಲ್ಲಿ ಕರ್ಣನ ಪಾತ್ರದಲ್ಲಿ ನಟಿಸುತ್ತಿರುವ ಕಿರಣ್‌ ರಾಜ್‌ ಅವರು ರಿಯಲ್‌ ಲೈಫ್‌ನಲ್ಲೂ ಸಮಾಜಕ್ಕೆ ಬೇಕಾದ ಕೆಲಸ ಮಾಡುತ್ತ ಬಂದವರು. ಕೋವಿಡ್‌ ಸಮಯದಲ್ಲಂತೂ ನಿತ್ಯ ನೂರಾರು ಮಂದಿಗೆ ಊಟ ಹಾಕಿ ಪುಣ್ಯ ಕಟ್ಟಿಕೊಂಡವರು. ಕಿರಣ್‌ ರಾಜ್‌ ಒಂದಿಷ್ಟು ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆಗಿಳಿದ್ರು. ಆದರೂ ಯಾಕೋ ಸೀರಿಯಲ್‌ ನೋಡೋ ಮಂದಿ ಸಿನಿಮಾ ಟಿಕೇಟ್‌ ತಗೊಳ್ಳಲಿಕ್ಕೆ ಮನಸ್ಸು ಮಾಡಲಿಲ್ಲ. ಸದ್ಯಕ್ಕೀಗ ಕಿರಣ್‌ ರಾಜ್‌ ಅವರು ಕುದುರೆ ರೇಸ್‌ ಬಗ್ಗೆ ಒಂದು ಸಿನಿಮಾ ಮಾಡುತ್ತಲೇ ಇನ್ನೊಂದು ಕಡೆ ಕರ್ಣ ಅನ್ನೋ ಸೀರಿಯಲ್‌ನಲ್ಲಿ ನಾಯಕನಾಗಿದ್ದಾರೆ.

ಮಹಾಭಾರತದ ಕರ್ಣ ಯಾರಿಗೆ ಗೊತ್ತಿಲ್ಲ. ಆ ಪಾತ್ರ ಹೇಗೆ ತ್ಯಾಗ ಬಲಿದಾನಕ್ಕೆ ಹೆಸರಾಯ್ತೋ ಆ ಹೆಸರಲ್ಲಿ ಬಂದ ಸಿನಿಮಾಗಳು, ಸಿನಿಮಾಗಳಲ್ಲಿ ಬಂದ ಕರ್ಣ ಎಂಬ ಪಾತ್ರಗಳು ತ್ಯಾಗವನ್ನು ಟ್ಯಾಗ್‌ಲೈನ್‌ ಮಾಡ್ಕೊಂಡೇ ಬಂದವು. ಇದೀಗ ಫೇಮಸ್‌ ಆಗ್ತಿರೋ ಸೀರಿಯಲ್‌ನಲ್ಲಿರೋ ಕರ್ಣ ಪಾತ್ರವೂ ಇದಕ್ಕೆ ಹೊರತಾಗಿಲ್ಲ. ಪುರಾಣದ ಕರ್ಣನ ಹಾಗೆ ಈ ಕರ್ಣನೂ ಅನಾಥ. ಕೆಟ್ಟವರ ನಡುವೆ ಬೆಳೆದರೂ ಕೆಸರಿನಲ್ಲಿರೋ ತಾವರೆ ಥರ ಇದ್ದಾನೆ. ಸದ್ಯಕ್ಕೆ ತನ್ನ ತ್ಯಾಗದ ಸಂಕೇತವಾಗಿ ಲವ್‌ ಮಾಡ್ತಿದ್ದ ಹುಡುಗೀನ ಬಿಟ್ಟು ಇನ್ನೊಬ್ಬನ ಜೊತೆ ಲವ್ವಲ್ಲಿ ಬಿದ್ದು ಪ್ರಗ್ನೆಂಟೂ ಆಗಿರುವ ಹುಡುಗಿಗೆ ತಾಳಿ ಕಟ್ಟಿದ್ದಾನೆ. ಒಂದು ಕಡೆ ಲವ್‌ ಮಾಡಿದ ಹುಡುಗಿನ ಬಿಡಕ್ಕಾಗ್ತಿಲ್ಲ. ಕಟ್ಕೊಂಡ ಹುಡುಗಿನ ಬಿಡೋ ಸ್ಥಿತಿಯಲ್ಲಿಲ್ಲ ಅನ್ನೋ ಸ್ಥಿತಿ ಇದೆ.

ಹೀರೋ ಪಾತ್ರದಿಂದ ಮಾಫಿಯಾ ಪಾತ್ರದತ್ತ?

ಹಾಗೆ ನೋಡಿದ್ರೆ ಕಿರಣ್‌ ರಾಜ್‌ ಒಳ್ಳೆ ಹುಡುಗನ ಪಾತ್ರಕ್ಕೆ ಎತ್ತಿದ ಕೈ. ಈ ಹಿಂದೆ ಮಾಡಿರೋ ʼಕನ್ನಡತಿʼ ಸೀರಿಯಲ್‌ ಸೂಪರ್‌ ಡೂಪರ್‌ ಹಿಟ್‌ ಆಯ್ತು. ಅಲ್ಲಿ ಇವ್ರು ಭುವಿ ಹಿಂದೆ ಬೀಳೋ ಒಳ್ಳೆ ಬಿಸಿನೆಸ್‌ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಂಡರು. ಇದೀಗ ಏಕ್‌ದಂ ಮೈಕ್ರೋ ಸೀರೀಸ್‌ ಮಾಡ್ತಿದ್ದಾರೆ. ಇದರ ಹೆಸರು ʼಊಫ್‌! ಮೈ ಹಸ್ಬೆಂಡ್‌ ಈಸ್‌ ಮಾಫಿಯಾ ಬಾಸ್‌ʼ . ಕುಕ್ಕೂ ಟಿವಿಯಲ್ಲಿ ಬರುತ್ತಿರುವ ಈ ಸೀರೀಸ್‌ನಲ್ಲಿನ ಇವರ ಪಾತ್ರ ಸೀರಿಯಲ್‌ ಪ್ರಿಯರನ್ನೂ ಕುತೂಹಲಕ್ಕೆ ದೂಡಿದೆ. ಇವ್ರು ಮಾಫಿಯಾ ಡಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಗ್ರೇ ಶೇಡ್‌ ಇರುವ ಪಾತ್ರದ ಹಾಗೆ ಕಾಣುತ್ತಿದೆ. ಹೃದಯದಾಳದಲ್ಲಿ ಒಳ್ಳೆತನ ತುಂಬಿಕೊಂಡಿದ್ದರೂ ಹೊರಗಿನಿಂದ ಒರಟನ ಹಾಗೆ ಕಾಣುವ ಪಾತ್ರ. ನಾಯಕಿ ನರ್ಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಅಂದಹಾಗೆ ಈ ಸೀರೀಸ್‌ ನ ಪ್ರೊಮೋ ಬಿಡುಗಡೆ ಆಗಿದೆ.

View post on Instagram

ಇದು ವಿಕ್ರಮ್‌ ಸೋಮಾನಿ ಗ್ಯಾಂಗ್‌ ವಾರ್‌ನಿಂದ ಆಗಿದ್ದಲ್ಲ ಅಲ್ವಾ?ʼ ಅಂತ ನಾಯಕಿ ಕೇಳ್ತಾಳೆ. ಅದಕ್ಕೂ ಮೊದಲು ನಾಯಕ ಹೊಡೆದಾಟದಿಂದ ಗಾಯಗೊಂಡು ರಕ್ತಸಿಕ್ತನಾಗಿ ಆಸ್ಪತ್ರೆಗೆ ಬಂದಿರ್ತಾನೆ. ಆ ನರ್ಸ್‌ ಕೇಳೋ ಪ್ರಶ್ನೆಗೆ ಆ ಗಾಯದಲ್ಲೂ ನಗುವ ನಾಯಕ, ʼ ವಿಕ್ರಮ್‌ ಸೋಮಾನಿ ಗೊತ್ತಾ?ʼ ಅಂತ ಕೇಳ್ತಾನೆ. ತನ್ನ ಪಾತ್ರದ ಬಗ್ಗೆ ಇನ್ನೊಂದು ಪಾತ್ರದ ಮೂಲಕ ಇಂಟ್ರೊಡಕ್ಷನ್‌ ಕೊಡೋ ಈ ಸ್ಟೈಲ್‌ ಎಫೆಕ್ಟಿವ್‌ ಆಗಿದೆ. ಅವನ ಮಾತಿಗೆ ನಾಯಕಿ, ʼಅವನೊಬ್ಬ ದೊಡ್ಡ ಕ್ರಿಮಿನಲ್‌, ಮಾಫಿಯಾ ಡಾನ್‌ ಅಂತ ಗೊತ್ತುʼ ಅಂತಾಳೆ.

ಇದರಲ್ಲಿ ವಿಕ್ರಮ್‌ ಸೋಮಾನಿ ಪಾತ್ರದಲ್ಲಿ ಕಿರಣ್‌ ರಾಜ್‌ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ʼಇನ್ನೋಸೆನ್ಸ್‌ ಅನ್ನೋದು ಮೂರ್ಖತನದ ಇನ್ನೊಂದು ಮುಖʼ ಅನ್ನೋ ಮೂಲಕ ತಾನೊಬ್ಬ ಭಲೇ ಬುದ್ಧಿವಂತ ಅನ್ನೋ ಮೆಸೇಜ್‌ ಅನ್ನೋ ನೀಡಿದ್ದಾರೆ. ಸಖತ್‌ ಕುತೂಹಲ ಮೂಡಿಸುವ ಈ ಆಕ್ಷನ್‌ ಲವ್‌ ಥ್ರಿಲ್ಲರ್‌ಗೆ ರೆಸ್ಪಾನ್ಸ್‌ ಚೆನ್ನಾಗಿದೆ.

View post on Instagram

ʼ