- Home
- Entertainment
- TV Talk
- Karna Serial: ರಮೇಶ್ ಮುಖವಾಡ ಕಳಚಿಬಿತ್ತು; ದಂಡಂ ದಶಗುಣಂ ಎಂದು ಶಪಥ ಮಾಡಿದ ಕರ್ಣ! ಇದು ಬೇಕಿತ್ತು...!
Karna Serial: ರಮೇಶ್ ಮುಖವಾಡ ಕಳಚಿಬಿತ್ತು; ದಂಡಂ ದಶಗುಣಂ ಎಂದು ಶಪಥ ಮಾಡಿದ ಕರ್ಣ! ಇದು ಬೇಕಿತ್ತು...!
Karna Serial Episode: ಕರ್ಣ ಧಾರಾವಾಹಿಯಲ್ಲಿ ನಿಧಿ, ಕರ್ಣ ಲವ್ ಮಾಡುತ್ತಿರುವುದು, ತೇಜಸ್ ಹಾಗೂ ನಿತ್ಯಾ ಲವ್ ಮಾಡಿದ್ದು, ನಿತ್ಯಾ ಹೊಟ್ಟೆಯಲ್ಲಿ ತೇಜಸ್ ಮಗು ಇರುವ ಎಲ್ಲ ವಿಷಯವೂ ರಮೇಶ್‌ಗೆ ಗೊತ್ತಿತ್ತು. ಈ ನಾಲ್ವರ ಜೀವನ ಹಾಳಾಗಲು ರಮೇಶ್ ಕಾರಣ ಆಗಿದ್ದನು. ಈಗ ಇವನ ಮುಖವಾಡ ಕಳಚಿ ಬಿದ್ದಿದೆ.

ಕರ್ಣನನ್ನು ಕಂಡರೆ ಆಗೋದಿಲ್ಲ
ನಿಧಿ ಹಾಗೂ ಕರ್ಣ ಲವ್ ಮಾಡುತ್ತಿದ್ದರು. ತೇಜಸ್ ಹಾಗೂ ನಿತ್ಯಾ ಪ್ರೀತಿಸಿದ್ದು, ಮದುವೆಗೆ ಎಲ್ಲ ತಯಾರಿಯೂ ಆಗಿತ್ತು. ಬೀದಿಯಲ್ಲಿ ಬಿದ್ದಿದ್ದ ಕರ್ಣನನ್ನು ರಮೇಶ್ ಮನೆಗೆ ಕರೆತರಲಾಗಿತ್ತು. ರಮೇಶ್ ತಂದೆ ಈ ಮಗುವನ್ನು ಮೊಮ್ಮಗ ಎನ್ನುವಂತೆ ಸಾಕಿದ್ದರು. ಹೀಗಾಗಿ ರಮೇಶ್ ಅವನಿಗೆ ಅಪ್ಪ ಆಗಿದ್ದರು. ಆದರೆ ಕರ್ಣನನ್ನು ಕಂಡರೆ ರಮೇಶ್‌ಗೆ ಆಗೋದಿಲ್ಲ.
ರಮೇಶ್ ಉದ್ದೇಶ ಏನು?
ಕರ್ಣನನ್ನು ಅಳಿಸೋದು ರಮೇಶ್ ಉದ್ದೇಶ. ಹೀಗಾಗಿ ಅವನು ನಿತ್ಯಾ ಹಾಗೂ ತೇಜಸ್ ಮದುವೆ ದಿನ ತೇಜಸ್ ಕಿಡ್ನ್ಯಾಪ್ ಮಾಡಿಸಿದ್ದಾನೆ. ಕರ್ಣನೇ ಈ ಕಿಡ್ನ್ಯಾಪ್ ಮಾಡಿಸಿದ ಎಂದು ತೇಜಸ್‌ನನ್ನು ನಂಬಿಸುವಂತೆ ಮಾಡಿದ್ದಾನೆ. ಅದಾದ ಬಳಿಕ ನಿತ್ಯಾ-ಕರ್ಣ ಮದುವೆ ಆಗುವ ಹಾಗೆ ಮಾಡಿದ್ದಾನೆ. ನಿತ್ಯಾ ಹಾಗೂ ಕರ್ಣ ಮದುವೆಯ ನಾಟಕ ಮಾಡಿದ್ದರೆ ವಿನಃ ಮದುವೆ ಆಗಿರಲಿಲ್ಲ.
ರಮೇಶ್ ಮಾಡಿದ ಕುತಂತ್ರ ಏನು?
ತೇಜಸ್ ತಪ್ಪಿಸಿಕೊಂಡು ಹೊರಗಡೆ ಬಂದಿದ್ದಾನೆ. ಮತ್ತೆ ತೇಜಸ್, ನಿತ್ಯಾ ಮುಖಾಮುಖಿ ಆಗಿದೆ. ಆ ಬಳಿಕ ಇವರಿಬ್ಬರ ಮದುವೆ ಮಾಡಿಸಲು ಕರ್ಣ ಯೋಚಿಸಿದ್ದನು. ಇದು ರಮೇಶ್‌ಗೆ ಗೊತ್ತಾಗಿದೆ. ರಮೇಶ್ ಆಮೇಲೆ ನಿತ್ಯಾ ಹೊಟ್ಟೆಯಲ್ಲಿರೋದು ತೇಜಸ್ ಮಗು ಎಂದು ನಂಬುವಂತೆ ಮಾಡಿದ್ದಾನೆ. ನಿತ್ಯಾ ಮೇಲೆ ಅನುಮಾನ ಪಟ್ಟ ತೇಜಸ್ ಈ ಮದುವೆಯನ್ನು ಮುರಿದಿದ್ದಾನೆ.
ರಮೇಶ್ ಮನಸ್ಸಿನಲ್ಲಿರೋದು ಕರ್ಣನಿಗೆ ಗೊತ್ತಾಯ್ತು
ಈಗ ಕರ್ಣನಿಗೆ ಸತ್ಯ ಗೊತ್ತಾಗಿದೆ. ಹೊಸ ಪ್ರೋಮೋ ರಿಲೀಸ್ ಆಗಿದ್ದು ಅದರಲ್ಲಿ ರಮೇಶ್ ರೂಮ್‌ವೊಂದರಲ್ಲಿ ಕೂತುಕೊಂಡು, ಅವನಿಗೆ ಅವನೇ “ದಾನಶೂರ ಕರ್ಣ, ಕರ್ಮ ಅಂಟಿಕೊಂಡಮೇಲೆ ತೊಳದುಕೊಳ್ಳದೆ ಇದ್ದರೆ ಆಗುತ್ತಾ? ತೇಜಸ್ ಮಗು ಕೈಯಲ್ಲಿ ನೀನು ಅಪ್ಪ. ನೀನು ನಿಧಿಯನ್ನು ಪ್ರೀತಿಸುತ್ತಿರೋದು ಗೊತ್ತಿತ್ತು. ಈಗ ಹೇಗೆ ಅನಿಸ್ತಿದೆ” ಎಂದು ಹೇಳಿದ್ದಾನೆ. ಇದು ಮರೆಯಲ್ಲಿ ನಿಂತಿದ್ದ ಕರ್ಣನಿಗೆ ಗೊತ್ತಾಗಿದೆ.
ಮುಂದೆ ಏನಾಗುವುದು?
“ಏನಿದೆಲ್ಲ, ಇಷ್ಟು ವರ್ಷ ಕರ್ಣ ತೊಟ್ಟಿದ್ದ ತಾಳ್ಮೆ ಎನ್ನುವ ಕವಚವನ್ನು ಕಳಚೋ ಸಮಯ ಬಂತು. ದಂಡ ದಶಗುಣಂ” ಎಂದು ಕರ್ಣ ಹೇಳಿದ್ದಾನೆ. ಅಲ್ಲಿಗೆ ಅವನು ಶಪಥ ಮಾಡಿದ್ದಾನೆ. ಮುಂದೆ ರಮೇಶ್‌ಗೆ ಹೇಗೆ ಬುದ್ಧಿ ಕಲಿಸ್ತಾನೆ? ಕೊನೆಗೂ ತೇಜಸ್‌ಗೆ ಬುದ್ಧಿ ಬರತ್ತಾ? ನಿತ್ಯಾ, ತೇಜಸ್ ಮದುವೆ ಆಗ್ತಾರಾ? ನಿಧಿ-ಕರ್ಣ ಒಂದಾಗ್ತಾರಾ ಎಂಬ ಪ್ರಶ್ನೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

