- Home
- Entertainment
- TV Talk
- Karna Serial: ಆ ಒಂದು ಸತ್ಯ ತೇಜಸ್ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು
Karna Serial: ಆ ಒಂದು ಸತ್ಯ ತೇಜಸ್ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು
ಕರ್ಣ ಸೀರಿಯಲ್ನಲ್ಲಿ ರಮೇಶ್ ಮಾಡಿದ ಕುತಂತ್ರದಿಂದಾಗಿ, ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ನಿತ್ಯಾ ಮತ್ತು ತೇಜಸ್ ಮದುವೆ ಮುರಿದುಬಿದ್ದಿದೆ. ತಿರುಚಿದ ಆಡಿಯೋ ನಂಬಿದ ತೇಜಸ್, ನಿತ್ಯಾಳ ಶೀಲ ಶಂಕಿಸಿ ಮಂಟಪದಿಂದ ಹೊರನಡೆದಿದ್ದಾನೆ. ಆದರೆ ವೀಕ್ಷಕರು ಕರ್ಣನ ಬಗ್ಗೆ ಗರಂ ಆಗಿದ್ಯಾಕೆ?

ಮುರಿದುಬಿದ್ದ ಮದುವೆ
ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ಎಲ್ಲವೂ ಅಯೋಮಯವಾಗಿದೆ. ರಮೇಶ್ ಹಚ್ಚಿದ ಕಿಚ್ಚಿನಿಂದಾಗಿ ನಿತ್ಯಾ ಮತ್ತು ತೇಜಸ್ ಮದುವೆ ಮುರಿದುಬಿದ್ದಿದೆ. ಕರ್ಣ ಮತ್ತು ನಿಧಿಯ ಕನಸು ಕನಸಾಗಿಯೇ ಉಳಿದುಬಿಟ್ಟಿದೆ.
ಅಂದುಕೊಂಡಂತೆ ಆಗಲಿಲ್ಲ
ಇನ್ನೇನು ನಿತ್ಯಾ ಮತ್ತು ತೇಜಸ್ ಮದುವೆಯಾಗುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಕರ್ಣನ ಧ್ವನಿಯಲ್ಲಿ ತಿರುಚಿದ ಆಡಿಯೋ ಒಂದನ್ನು ರಮೇಶ್ ತೇಜಸ್ ಮೊಬೈಲ್ಗೆ ಕಳುಹಿಸಿದ್ದ. ಅದರಲ್ಲಿ, ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗು ತನ್ನದೇ ಎಂದು ಕರ್ಣ ಹೇಳಿದಂತೆ ಇತ್ತು.
ತೇಜಸ್ ಕೊತಕೊತ
ಇದರಿಂದ ತೇಜಸ್ ಕೊತಕೊತ ಕುದಿಯುತ್ತಿದ್ದ. ನಿತ್ಯಾಳ ಮೇಲೆ ಸೇಡು ತೀರಿಸಿಕೊಳ್ಳಲು ಮದುವೆಯವರೆಗೂ ಬರುವಂತೆ ನಾಟಕ ಮಾಡಿ, ಕೊನೆಯ ಕ್ಷಣದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಮದುವೆ ಬೇಡ, ಈ ಮಗು ನನ್ನದಲ್ಲ ಎಂದು ಕರ್ಣ ಮತ್ತು ನಿತ್ಯಾ ಮೇಲೆ ರೇಗಾಡಿದ.
ತಳ್ಳಿದ ನಿತ್ಯಾ
ತನ್ನ ಶೀಲವನ್ನು ಶಂಕಿಸ್ತಿರೋದಕ್ಕೆ ಕೋಪಗೊಂಡ ನಿತ್ಯಾ ತೇಜಸ್ನನ್ನು ತಳ್ಳಿದಳು. ಮೊದಲೇ ಕುದಿಯುತ್ತಿದ್ದ ಆತ, ಕರ್ಣನನ್ನೇ ದೂಷಿಸಿ, ನಿತ್ಯಾ ಮತ್ತು ಇನ್ನೂ ಹುಟ್ಟದ ಮಗುವಿಗೆ ಶಾಪ ಹಾಕಿ ಹೋದ.
ಕರ್ಣನಿಗೆ ಹಿಡಿಶಾಪ
ಆದರೆ, ಇಲ್ಲಿ ವೀಕ್ಷಕರಿಗೆ ಕಂಡದ್ದು ಕರ್ಣನ ತಪ್ಪು. ತೇಜಸ್ ದುಡುಕಿದ ನಿಜ. ಆದರೆ ಅದೇ ಸಮಯದಲ್ಲಿ ಕರ್ಣ, ತಾನು ನಿಧಿಯನ್ನು ಪ್ರೀತಿಸ್ತಿದ್ದು, ನಿತ್ಯಾಳ ಮೇಲೆ ಕಣ್ಣು ಹಾಕಲು ಸಾಧ್ಯವೇ ಇಲ್ಲ ಎಂದು ಒಂದು ಮಾತು ಹೇಳಿದ್ರೆ ಅಲ್ಲಿಗೆ ತೇಜಸ್ಗೂ ತಾನು ಹೇಳ್ತಿರೋದು ತಪ್ಪು ಎನ್ನಿಸುತ್ತಿತ್ತು. ಆದರೆ ಕರ್ಣ ಆಗಲೀ, ನಿಧಿ ಆಗಲೀ ಈ ವಿಷಯ ಮುಚ್ಚಿಟ್ಟ ಕಾರಣದಿಂದಲೇ ಇಷ್ಟೊಂದು ಸೀನ್ ಕ್ರಿಯೇಟ್ ಆಗಿರೋದು ಎಂದು ಕರ್ಣ ಮತ್ತು ನಿಧಿಯನ್ನೆ ದೂಷಿಸುತ್ತಿದ್ದಾರೆ.
ಮದುವೆಯಾಗಿದ್ದರೆ...
ಇಲ್ಲಿ ನಿತ್ಯಾ ಮತ್ತು ತೇಜಸ್ ಮದುವೆಯಾಗಿದ್ದರೆ ಸೀರಿಯಲ್ ಮುಗಿಯುತ್ತಿತ್ತು. ಇದೊಂದು ಸೀರಿಯಲ್ ಎನ್ನೋದನ್ನೂ ಮರೆತು, ವೀಕ್ಷಕರು ನಿಜ ಜೀವನವೇ ಅಂದುಕೊಂಡು ಪಾತ್ರಧಾರಿಗಳನ್ನು ಬೈಯುವುದು ಹಾಸ್ಯಾಸ್ಪದ ಎನ್ನಿಸಿದರೂ, ಸೀರಿಯಲ್ಗಳು ಇಂದು ಯಾವ ರೀತಿ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿದೆ ಎನ್ನುವುದಕ್ಕೆ ಇಂಥ ಕಮೆಂಟ್ಸ್ ಸಾಕ್ಷಿಯಂತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

