- Home
- Entertainment
- TV Talk
- ಅತ್ತ ದರಿ ಇತ್ತ ಪುಲಿ: ಅಡಕತ್ತರಿಯಲ್ಲಿ ತಗ್ಲಾಕೊಂಡ ಕರ್ಣ, ಏನ್ ಮಾಡ್ತಾನೆ ಕರುನಾಡಿನ ಕಣ್ಮಣಿ?
ಅತ್ತ ದರಿ ಇತ್ತ ಪುಲಿ: ಅಡಕತ್ತರಿಯಲ್ಲಿ ತಗ್ಲಾಕೊಂಡ ಕರ್ಣ, ಏನ್ ಮಾಡ್ತಾನೆ ಕರುನಾಡಿನ ಕಣ್ಮಣಿ?
ಮನೆಯಿಂದ ಹೊರಬಂದ ಕರ್ಣನ ಪರಿಸ್ಥಿತಿ ಅಯೋಮಯ. ತಂದೆಯ ಆಜ್ಞೆ ಮತ್ತು ಅಜ್ಜಿಯ ಪ್ರೀತಿಯ ನಡುವೆ ಸಿಲುಕಿರುವ ಕರ್ಣ ಏನು ಮಾಡ್ತಾನೆ? ನಿತ್ಯಾಳ ಪ್ರವೇಶ ಈ ಸಮಸ್ಯೆಗಳಿಗೆ ಪರಿಹಾರವಾಗುವುದೇ?

ಸದ್ಯ ಕರ್ಣ ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿದೆ. ಅತ್ತೆ ನಯನತಾರಾಳ ಮೋಸದ ಜಾಲದಲ್ಲಿ ಸಿಲುಕಿರುವ ಕರ್ಣ ಮನೆಯಿಂದ ಹೊರಗೆ ಬಂದಿದ್ದಾನೆ. ಜೋರು ಮಳೆಯಲ್ಲಿಯೇ ಕುಟುಂಬಸ್ಥರು ಬಾಗಿಲು ತೆರೆಯುತ್ತಾರೆ ಎಂದು ಕರ್ಣ ಕಾಯುತ್ತಿದ್ದಾನೆ.
ಕಾಲೇಜಿಗೆ ಚಕ್ಕರ್ ಹಾಕುತ್ತಿದ್ದ ಸಂಜಯ್ ಬಂಡವಾಳವನ್ನು ನಿಧಿ ಎಲ್ಲರ ಮುಂದೆ ಬಯಲು ಮಾಡಿದ್ದಳು. ಇದರಿಂದ ಕೋಪಗೊಂಡ ಸಂಜಯ್, ಗರ್ಭಿಣಿಗೆ ನಿಧಿ ನೀಡುತ್ತಿದ್ದ ಇಂಜೆಕ್ಷನ್ ಬದಲಾಯಿಸಿದ್ದನು. ಇದರಿಂದ ನಿಧಿಯನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು.
ನನ್ನ ತಂಗಿ ಗೋಲ್ಡ್ ಮೆಡಲಿಸ್ಟ್, ಆಕೆ ಇಂತಹ ಸಿಲ್ಲಿ ಮಿಸ್‌ಟೇಕ್ ಮಾಡಲ್ಲ ಎಂದು ನಿಧಿ ಆಸ್ಪತ್ರೆಯಲ್ಲಿ ಡಾ.ಕರ್ಣ ಮತ್ತು ಆಡಳಿತ ಮಂಡಳಿ ಸದಸ್ಯರನ್ನು ಕ್ಲಾಸ್ ತೆಗೆದುಕೊಂಡು ಬೆವರಿಳಿಸಿದ್ದಳು. ಸಿಸಿಟಿವಿಯಲ್ಲಿ ಸಂಜಯ್ ಇಂಜೆಕ್ಷನ್ ಬದಲಾಯಿಸಿದ್ದು ರೆಕಾರ್ಡ್ ಆಗಿತ್ತು. ಕೊನೆಗೆ ನಿತ್ಯಾ ಒತ್ತಾಯಕ್ಕೆ ಎಲ್ಲರ ಮುಂದೆ ನಿಧಿಗೆ ಸಂಜಯ್ ಕ್ಷಮೆ ಕೇಳಿದ್ದನು.
ಈ ವಿಷಯ ಕರ್ಣನ ಮನೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಸ್ವಂತ ಮಗನಿಗೆ ಅವಮಾನ ಆಗಿದ್ದಕ್ಕೆ ಕರ್ಣನನ್ನು ತಂದೆ ಮನೆಯಿಂದ ಹೊರಹಾಕಿದ್ದಾರೆ. ಇತ್ತ ಅಜ್ಜಿ, ಮೊಮ್ಮಗ ಕರ್ಣನನ್ನು ಮನೆಯೊಳಗೆ ಕರೆದುಕೊಂಡು ಬಂದಿದ್ದಾಳೆ. ಆದ್ರೆ ಸಂಜಯ್ ಕಾಲ್ಮುಟ್ಟಿ ಕ್ಷಮೆ ಕೇಳುವಂತೆ ತಂದೆ ಆಗ್ರಹಿಸಿದ್ದಾರೆ. ಕ್ಷಮೆ ಕೇಳಿದ್ರೆ ನನ್ನ ಮೇಲೆ ಆಣೆ ಎಂದು ಅಜ್ಜಿ ಹೇಳಿದ್ದಾರೆ.
ಕರ್ಣ ತಂದೆಯನ್ನು ಗೌರವಿಸುವ ವ್ಯಕ್ತಿ. ಇತ್ತ ಅಜ್ಮಿಯ ಪ್ರೀತಿಯ ಮೊಮ್ಮಗ. ಇದೀಗ ಕರ್ಣ ಯಾರ ಮಾತು ಕೇಳುತ್ತಾನೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಕರ್ಣನ ಈ ಎಲ್ಲಾ ಸಮಸ್ಯೆಗಳು ದೂರವಾಗಬೇಕಾದ್ರೆ ನಿತ್ಯಾ ಅವನ ಹೆಂಡ್ತಿಯಾಗಿ ಬರಬೇಕೆಂದು ವೀಕ್ಷಕರು ಆಸೆಪಡುತ್ತಿದ್ದಾರೆ.