Actor Kiran Raj: ಎಲ್ಲರಿಗೂ ಸಹಾಯ ಮಾಡೋದರಲ್ಲಿ ‘ಕರ್ಣ’ ಧಾರಾವಾಹಿ ಕರ್ಣ ಸದಾ ಮುಂದೆ. ಈಗ ರಿಯಲ್ ಲೈಫ್‌ನಲ್ಲಿಯೂ ಕಿರಣ್ ರಾಜ್ ಮಾನವೀಯತೆ ಮೆರೆದಿದ್ದಾರೆ.
ಉದ್ಯಮಿ, ನಟನಾಗಿ ಗುರುತಿಸಿಕೊಂಡಿರೋ ಕಿರಣ್ ರಾಜ್ ಅವರು ಸದಾ ಸಾಮಾಜಿಕ ಕೆಲಸ ಮಾಡುವಲ್ಲಿ ಮುಂದಿರುತ್ತಾರೆ. ಇತ್ತೀಚೆಗೆ ಅಪಘಾತಗೊಂಡಿದ್ದ ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ಮಾಡಿ, ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ನಿಜಕ್ಕೂ ಏನಾಯ್ತು?
ಕಿರಣ್ ರಾಜ್ ಅವರು ‘ಕರ್ಣ’ ಧಾರಾವಾಹಿ ಸೆಟ್‌ಗೆ ಹೋಗುತ್ತಿದ್ದಾರೆ. ಆ ವೇಳೆ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುವ ಅವಸರದಲ್ಲಿದ್ದನು. ಆತ ಹೋಗುತ್ತಿದ್ದ ಸ್ಕೂಟಿ ಆಯತಪ್ಪಿ ಬಿದ್ದಿದೆ. ಆಗ ಅವನಿಗೆ ಒಂದಿಷ್ಟು ಗಾಯಗಳಾಗಿವೆ. ಅದನ್ನು ನೋಡಿದ ಕಿರಣ್ ರಾಜ್ ಅವರು ಅವನಿಗೆ ಆರೈಕೆ ಮಾಡಿದ್ದಾರೆ. ಆ ನಂತರ ಅವನ ತಂದೆಗೆ ಫೋನ್ ಮಾಡಿ, ಆ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಆ ಹುಡುಗನ ತಂದೆ ಬಂದು, ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ರಿಯಲ್ ಹೀರೋ ಕಿರಣ್ ರಾಜ್!
ಈ ವಿಡಿಯೋಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. “ರಿಯಲ್ ಹೀರೋ ಅಂದ್ರೆ ಇವರೇ. ಇದ್ದರೆ ಈ ರೀತಿ ಇರಬೇಕು. ಹೃದಯವಂತ” ಎಂದೆಲ್ಲ ಅನೇಕರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಸೂರಜ್ ಕೌಟಿ ಎನ್ನುವವರು ಕಳೆದ ಐದು ದಿನಗಳ ಹಿಂದೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಕ್ಯಾಪ್ಶನ್ ಅಗತ್ಯವಿಲ್ಲ” ಎಂದಿದ್ದಾರೆ.
ಭರವಸೆಯ ನಟ!
ಅಂದಹಾಗೆ ‘ರಾನಿ’ ಸಿನಿಮಾ ಮೂಲಕ ಭರವಸೆಯ ಹೀರೋ ಎಂದು ಗುರುತಿಸಿಕೊಂಡಿರೋ ಕಿರಣ್ ರಾಜ್ ಅವರು ಈಗಾಗಲೇ ಸೂಪರ್ ಹಿಟ್ ಧಾರಾವಾಹಿಗಳ ಹೀರೋ ಆಗಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು, ಹಿಂದಿ ಧಾರಾವಾಹಿಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು.
ಸೂಪರ್ ಹಿಟ್ ಆದ ಧಾರಾವಾಹಿ!
ಅಂದಹಾಗೆ ಜೂನ್ 16ರಂದು ‘ಕರ್ಣ’ ಧಾರಾವಾಹಿಯು ಪ್ರಸಾರ ಆಗಬೇಕಿತ್ತು. ಕಾನೂನು ತೊಡಕಿನಿಂದ ಈ ಧಾರಾವಾಹಿ ಪ್ರಸಾರ ಆಗಿರಲಿಲ್ಲ. ಕೆಲವು ದಿನಗಳ ಬಳಿಕ ಈ ಧಾರಾವಾಹಿ ಪ್ರಸಾರ ಆಗಿದೆ. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದ ಈ ಸೀರಿಯಲ್ ತಡವಾಗಿ ಪ್ರಸಾರವಾದರೂ ಕೂಡ, ವೀಕ್ಷಕರ ಮನಸ್ಸು ಗೆದ್ದಿದೆ. ಈ ವಾರದ ಟಿಆರ್‌ಪಿಯಲ್ಲಿ ನಂ 1 ಸ್ಥಾನ ಪಡೆದಿದೆ. ಒಟ್ಟಿನಲ್ಲಿ ಕಿರಣ್ ರಾಜ್ ಅವರು ಸೀರಿಯಲ್‌ಗೆ ಎಂಟ್ರಿ ಕೊಡ್ತಿದ್ದ ಸೂಪರ್ ಹಿಟ್ ಟಿಆರ್‌ಪಿ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ನಮ್ರತಾ ಗೌಡ, ಭವ್ಯಾ ಗೌಡ ಕೂಡ ನಟಿಸುತ್ತಿದ್ದಾರೆ.
ಕಥೆ ಏನು?
ಡಾಕ್ಟರ್ ಕರ್ಣ ಅನಾಥ. ತೊಟ್ಟಿಯಲ್ಲಿ ಬಿದ್ದಿದ್ದ ಹುಡುಗನನ್ನು ರಾಮಕೃಷ್ಣ ಅವರು ಮನೆಗೆ ತಂದು ಸಾಕಿದ್ದರು, ಅಷ್ಟೇ ಅಲ್ಲದೆ ಇಡೀ ಆಸ್ತಿಯನ್ನು ಅವರ ಹೆಸರಿಗೆ ಬರೆದಿದ್ದಾರೆ. ಇನ್ನೊಂದು ಕಡೆ ಇಡೀ ಮನೆಯವರು ಕರ್ಣನನ್ನು ಅನಾಥ ಎಂದು ಟ್ರೀಟ್ ಮಾಡ್ತಾರೆ. ಆದರೆ ಅಜ್ಜಿ ಮಾತ್ರ ಮೊಮ್ಮಗ ಅಂತ ಹೇಳೋದಲ್ಲದೆ, ಅವನಿಗೆ ಆದಷ್ಟು ಬೇಗ ಮದುವೆ ಆಗಲಿ ಅಂತ ಬಯಸುತ್ತಿದ್ದಾಳೆ. ಅತ್ತ ನಿತ್ಯಾ ಕೂಡ ತೇಜಸ್ ಜೊತೆ ಮದುವೆ ಆಗುವ ಕನಸು ಕಾಣುತ್ತಿದ್ದಾಳೆ. ಇನ್ನು ನಿಧಿಗೆ ಕೂಡ ಕರ್ಣನ ಮೇಲೆ ಲವ್ ಇದೆ. ಈ ಮೂವರ ಜೀವನ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಕರ್ಣ ಪಾತ್ರದಲ್ಲಿ ಕಿರಣ್ ರಾಜ್, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ, ನಿಧಿ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಟಿ ಎಸ್ ನಾಗಾಭರಣ, ಆಶಾರಾಣಿ, ಸಿಮ್ರನ್ ಅವರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
