- Home
- Entertainment
- TV Talk
- 33 ದಿನಗಳ ನಂತರ ಕಲಾವಿದನನ್ನು ಕಂಡು ಸಮಾಧಾನ ಆದ್ರು ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು! ಎಲ್ಲೋಗಿದ್ದೆ ನನ್ ಕಂದ ಎಂದ್ರು!
33 ದಿನಗಳ ನಂತರ ಕಲಾವಿದನನ್ನು ಕಂಡು ಸಮಾಧಾನ ಆದ್ರು ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರು! ಎಲ್ಲೋಗಿದ್ದೆ ನನ್ ಕಂದ ಎಂದ್ರು!
Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ 33 ದಿನಗಳ ನಂತರ ಪಾತ್ರ ಮತ್ತೆ ಕಾಣಿಸಿಕೊಂಡಿದೆ. ಜಾನು ನರಸಿಂಹನ ಮನೆಯಲ್ಲಿರುವುದು ಜಯಂತ್‌ಗೆ ತಿಳಿಯದೆ, ಫೋನ್ ಕರೆಯೊಂದು ಹೊಸ ತಿರುವು ನೀಡಿದೆ.

ಜೀ ಕನ್ನಡ ಸೀರಿಯಲ್ ಅಂದ್ರೆ ವೀಕ್ಷಕರಿಗೆ ಬಲು ಅಚ್ಚುಮೆಚ್ಚು. ಸೀರಿಯಲ್ ಪಾತ್ರಧಾರಿಗಳು ಕಾಣಿಸಿಲ್ಲ ಅಂದ್ರೆ ಅದನ್ನೂ ಸಹ ಲೆಕ್ಕ ಹಾಕುತ್ತಾರೆ. ಇದೀಗ 33 ದಿನಗಳ ಬಳಿಕ ಸೀರಿಯಲ್ ನಲ್ಲಿ ತಮ್ಮ ನೆಚ್ಚಿನ ಕಲಾವಿದನನ್ನು ಕಂಡು ವೀಕ್ಷಕರು ಸಮಾಧಾನಗೊಂಡಿದ್ದಾರೆ. ನಟನ ಪ್ರೋಮೋಗೆ ಈ ರೀತಿಯಾಗಿ ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್‌ನ ಜಾನು ಮತ್ತು ಜಯಂತ್ ಜೋಡಿಯನ್ನು ನೋಡಲು ವೀಕ್ಷಕರು ಕಾಯುತ್ತಿರುತ್ತಾರೆ. ನನ್ನ ವ್ಯವಹಾರ ಪಾಲುದಾರ ನರಸಿಂಹನ ಮನೆಯಲ್ಲಿಯೇ ಜಾನು ಇದ್ರೂ ಜಯಂತ್‌ಗೆ ಗೊತ್ತಾಗಿಲ್ಲ. ಆದರೆ ತಾನಿರುವ ಸ್ಥಳಕ್ಕೆ ಜಯಂತ್ ಬರೋ ವಿಷಯ ಜಾನುಗೆ ಗೊತ್ತಾಗಿದೆ.
ಕಳೆದ ಕೆಲವು ವಾರಗಳಿಂದ ಭಾವನಾ, ಸಿದ್ದೇಗೌಡ, ವೆಂಕಿ, ಸಿಂಚನ, ಹರೀಶ್ ಪಾತ್ರಗಳ ಸೀನ್‌ಗಳೇ ಅಧಿಕವಾಗಿ ಪ್ರಸಾರವಾಗಿದ್ದವು. ಇತ್ತ ವಿಶ್ವನನ್ನು ನೋಡಿದರೂ ಜಾನು ಆತನಿಂದಲೂ ಅಂತರ ಕಾಯ್ದುಕೊಂಡಿದ್ದಳು. ಸುಮಾರು ಒಂದು ತಿಂಗಳಿನಿಂದ ಜಯಂತ್ ಕಾಣಿಸದಿರೋದು ಪ್ರೇಕ್ಷಕರಲ್ಲಿ ಬೇಸರ ಮೂಡಿಸಿತ್ತು. ಇದೀಗ ಜಯಂತ್ ಹಿಂದಿರುಗಿರೋದನ್ನು ಕಂಡು ಪ್ರೇಕ್ಷಕರು ಖುಷಿಯಾಗಿದ್ದಾರೆ.
ಅಂತೂ ಇಂತೂ 33 ದಿನಗಳ ಬಳಿಕ ಜಯಂತನ ಅಭಿನಯ ನೋಡುವ ಅವಕಾಶ ಸಿಕ್ತು. ಜಯಂತ ಪಾತ್ರದಾರಿ ಬದಲಾಗಲಿಲ್ಲ ಅಂತ ಸಮಾಧಾನ ಎಂದು ಲಲಿತಾ ಎಂಬವರು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಧಾರಾವಾಹಿ ವೀಕ್ಷಕರು ಹೌದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸೀರಿಯಲ್ ಕಥೆ!
ನರಸಿಂಹನ ಮನೆಗೆ ಕರೆ ಮಾಡಿದಾಗ ಜಾನು ಕಾಲ್ ರಿಸೀವ್ ಮಾಡಿದ್ದಾಳೆ. ಜಾನು ಹಲೋ ಎಂದು ಹೇಳುತ್ತಲ ಜಯಂತ್, ಆ ಕಡೆಯಿಂದ ಚಿನ್ನುಮರಿ ಎಂದು ಕರೆದಿದ್ದಾನೆ. ಕೂಡಲೇ ಕಾಲ್ ಕಟ್ ಮಾಡಿದ ಜಾನು ಹೋಗಿದ್ದಾಳೆ. ಜಯಂತ್ ಮತ್ತೆ ಕಾಲ್ ಮಾಡಿದಾಗ, ಲಲಿತಾ ರಿಸೀವ್ ಮಾಡಿ, ಗಂಡನಿಗೆ ನೀಡುತ್ತಾಳೆ. ಇದಕ್ಕೂ ಮೊದಲು ಕಾಲ್ ರಿಸೀವ್ ಮಾಡಿದವರ ಧ್ವನಿ, ನನ್ನ ಪತ್ನಿಗೆ ಹಾಗಿತ್ತು ಎಂದು ಹೇಳಿದ್ದಾನೆ.
ಜಯಂತ್ ಪ್ರಶ್ನೆಗೆ ಉತ್ತರಿಸಿದ ನರಸಿಂಹ, ಇದರಿಂದಲೇ ನೀವು ನಿಮ್ಮ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂದು ಗೊತ್ತಾಗುತ್ತದೆ. ನಮ್ಮ ಮನೆಯ ಕೆಲಸದವರು ಫೋನ್ ರಿಸೀವ್ ಮಾಡಿದ್ದರು. ನಿಮ್ಮ ಹೆಂಡತಿಯನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಹಾಗೆ ನಿಮಗೆ ಅನ್ನಿಸಿರುತ್ತೆ ಎಂದು ಸಮಾಧಾನ ಮಾಡಿದ್ದಾರೆ.
ಎಲ್ಲೋಗಿದ್ದೆ ನನ್ನ ಕಂದ!
ಪ್ರೋಮೋ ನೋಡಿದ ಧಾರಾವಾಹಿ ವೀಕ್ಷಕರು, ಜಯಂತ್ ಬಂಡವಾಳ ಎಲ್ಲರಿಗೂ ಗೊತ್ತಾಗಬೇಕು ಆಮೇಲೆ ಜಾನವಿ ಸಿಗಬೇಕು ಎಲ್ಲರೆದುರು. ಇಷ್ಟ್ ದಿನ ಎಲ್ಲೋಗಿದ್ದೆ ನನ್ ಕಂದ. ಚಿನ್ನುಮರಿ ಸಿಕ್ಕಾಕೊಂಡಳು... ಜಯಂತ್ ಗೆ ಸ್ವಲ್ಪ ಅನುಮಾನ ಬಂದರೂ ಹುಡುಕಾಡದೇ ಬಿಡಲ್ಲ. ಅಬ್ಬಾ ಅಂತೂ ಜಯಂತ್ ಬಂದ ಈಗ ಒಂದು ಖುಷಿ ಆಯ್ತು. ತುಂಬಾ ಮಿಸ್ ಮಾಡ್ಕೋತಾ ಇದ್ವಿ ನಿಮ್ಮನ್ನ ಎಂದು ಕಮೆಂಟ್ ಮಾಡಿದ್ದಾರೆ.
ಕಾಣೆಯಾದ ಲಕ್ಷ್ಮೀ
ಇತ್ತ ಸೀರಿಯಲ್ ಕಥಾ ನಾಯಕಿ ಲಕ್ಷ್ಮೀ ಪಾತ್ರಧಾರಿ ಸಹ ಕಾಣೆಯಾಗಿದ್ದಾರೆ. ಮಕ್ಕಳಿಬ್ಬರು ಬೇರೆಯಾದ ಬಳಿಕ ಹರೀಶ್ ಮನೆಗೆ ಲಕ್ಷ್ಮೀ ಹೋಗಿದ್ದರು. ಅಲ್ಲಿಂದ ಅಜ್ಜಿಯ ಚಿಕಿತ್ಸೆಗಾಗಿ ಬೇರೆ ಕಡೆ ಲಕ್ಷ್ಮೀ ಹೋಗಿದ್ದಾಳೆ ಎಂದು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಮತ್ತೊಂದೆಡೆ ಲಕ್ಷ್ಮೀ-ಶ್ರೀನಿವಾಸ ದಂಪತಿ ಪುತ್ರಿ ಮಂಗಳಾ ಮತ್ತು ಆಕೆಯ ಗಂಡ ಸಹ ಕಾಣಿಸುತ್ತಿಲ್ಲ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.