- Home
- Entertainment
- TV Talk
- Lakshmi Nivasa: ಕೊನೆಗೂ ಪ್ರೇಕ್ಷಕರು ಕಾಯ್ತಿದ್ದ ಘಳಿಗೆ ಬಂದೇ ಬಿಡ್ತು! ಖುಷಿ ವಿಷಯ ಗೊತ್ತಾದ್ರೂ ಕಣ್ಣೀರಿಟ್ಟ ವಿಶ್ವ
Lakshmi Nivasa: ಕೊನೆಗೂ ಪ್ರೇಕ್ಷಕರು ಕಾಯ್ತಿದ್ದ ಘಳಿಗೆ ಬಂದೇ ಬಿಡ್ತು! ಖುಷಿ ವಿಷಯ ಗೊತ್ತಾದ್ರೂ ಕಣ್ಣೀರಿಟ್ಟ ವಿಶ್ವ
Lakshmi Nivasa Serial: ಜಾನು ಸಮುದ್ರಕ್ಕೆ ಹಾರಿದರೂ ಬದುಕುಳಿದು ವಿಶ್ವನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ವಿಶ್ವ ದೇವಸ್ಥಾನದಲ್ಲಿ ಜಾನು ಬದುಕಿರುವ ಬಗ್ಗೆ ಚೀಟಿ ಪಡೆದು ಖುಷಿಪಡುತ್ತಾನೆ. ಜಯಂತ್ ಜಾನುವನ್ನು ಹುಡುಕುತ್ತಿದ್ದಾನೆ.
16

ಅಣ್ಣಯ್ಯ ಮತ್ತು ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮಹಾಸಂಚಿಕೆಗಾಗಿ ಲಕ್ಷ್ಮೀ ನಿವಾಸವನ್ನು ಅರ್ಧ ಗಂಟೆಗೆ ಮಾತ್ರ ಮೊಟಕುಗೊಳಿಸಿತ್ತು. ಇಂದು ಎಂದಿನಂತೆ ಲಕ್ಷ್ಮೀ ನಿವಾಸ ಒಂದು ಗಂಟೆ ಪ್ರಸಾರವಾಗಿತ್ತು.
26
ಸೈಕೋ ಗಂಡನಿಂದ ದೂರವಾಗಬೇಕೆಂದು ಜಾನು ಸಮುದ್ರಕ್ಕೆ ಜಿಗಿದಿದ್ದಳು. ಆದ್ರೆ ಬದುಕುಳಿದ ಜಾನು ಗೆಳೆಯ ವಿಶ್ವನ ಮನೆಯಲ್ಲಿ ಆಶ್ರಯ ಪಡೆದುಕೊಂಡದ್ದಾಳೆ. ಆದರೆ ಇದು ತನ್ನ ಆಪ್ತ ಗೆಳೆಯ ವಿಶ್ವನ ಮನೆ ಎಂದು ಜಾನುಗೆ ಗೊತ್ತಿಲ್ಲ. ಇತ್ತ ತಮ್ಮ ಮನೆಯಲ್ಲಿರುವ ಚಂದನಾ ಹೆಸರಿನ ಕೆಲಸದವಳು ತಾನು ಮೆಚ್ಚಿದ ಹುಡುಗಿ ಎಂದು ವಿಶ್ವನಿಗೆ ಗೊತ್ತಿಲ್ಲ.
36
ಈಗಾಗಲೇ ಮನೆ ಸೇರಿ ಹಲವು ದಿನಗಳು ಕಳೆದರೂ ಜಾನು ಮತ್ತು ಜಾನು ಮುಖಾಮುಖಿಯಾಗಿಲ್ಲ. ಜಾನು ಮತ್ತು ವಿಶ್ವನನ್ನು ಭೇಟಿ ಮಾಡಲು ತನು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಲಲಿತಾ ಜೊತೆ ಜಾನು ದೇವಸ್ಥಾನಕ್ಕೆ ಬಂದಿದ್ದಾಳೆ. ಇದೇ ದೇವಸ್ಥಾನಕ್ಕೆ ವಿಶ್ವ ಸಹ ಬಂದಿದ್ದಾನೆ. ಆದ್ರೆ ಇಲ್ಲಿಯೂ ಇಬ್ಬರ ಭೇಟಿಯಾಗಿಲ್ಲ. ಇತ್ತ ದೇವಸ್ಥಾನದಲ್ಲಿರುವ ವಿಶ್ವನನ್ನು ನೋಡಿದರೂ ಆತನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಹೊಸ ಅಸ್ತಿತ್ವದ ಹುಡುಕಾಟದಲ್ಲಿರುವ ನಾನು ವಿಶ್ವನನ್ನು ಭೇಟಿಯಾಗಬಾರದು ಎಂದು ಅಲ್ಲಿಂದ ಹೋಗಿದ್ದಾಳೆ.
46
ಜಾನು ಮತ್ತು ಲಲಿತಾ ಹೋಗ್ತಿದ್ದಂತೆ ವಿಶ್ವ ದೇವರ ಮುಂದೆ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಜಾನು ಸತ್ತಿದ್ದಾಳೆ ಅಂದ್ರೆ ನನಗೆ ನಂಬಲು ಆಗ್ತಿಲ್ಲ. ಈಗ ನೀನೇ ನನಗೆ ದಾರಿ ತೋರಿಸಬೇಕು ಎಂದು ದೇವರಲ್ಲಿ ಕೇಳಿಕೊಂಡಿದ್ದಾನೆ. ಈ ವೇಳೆ ಎರಡು ಚೀಟಿ ಬರೆದು ದೇವರ ಮುಂದೆ ಇರಿಸಿದ್ದಾನೆ. ಒಂದು ಚೀಟಿಯಲ್ಲಿ ಜಾನು ಸತ್ತಿದ್ದಾಳೆ, ಮತ್ತೊಂದರಲ್ಲಿ ಜಾನು ಬದುಕಿದ್ದಾಳೆ ಎಂದು ಬರೆದಿದ್ದಾನೆ.
56
ಚೀಟಿಗಳಿಗೆ ಪೂಜೆ ಸಲ್ಲಿಸುತ್ತಾನೆ. ನಂತರ ಒಂದು ಚೀಟಿಯನ್ನು ತೆಗೆದು ವಿಶ್ವ ನೋಡುತ್ತಾನೆ. ಆ ಚೀಟಿಯಲ್ಲಿ ಜಾನು ಬದುಕಿದ್ದಾಳೆ ಎಂದು ಬರೆಯಲಾಗಿರುತ್ತದೆ. ಇದರಿಂದ ವಿಶ್ವನ ನಂಬಿಕೆ ದೃಢವಾಗಿದೆ. ತನ್ನ ಪ್ರೇಯಸಿ ಬದುಕಿದ್ದಾಳೆ ಎಂದು ವಿಶ್ವ ಖುಷಿಯಾಗಿ ಕಣ್ಣೀರು ಹಾಕಿದ್ದಾನೆ. ಇವಾಗ ಬದುಕಿದ್ದಾಳೆ ಎಂದು ನಂಬಲು ಹೇಗೆ ಸಾಧ್ಯ ಎಂದು ವಿಶ್ವ ಕಣ್ಣೀರು ಹಾಕಿದ್ದಾನೆ. ಇತ್ತ ವಿಶ್ವನೊಂದಿಗೆ ಕಳೆದ ಸಂತೋಷ ಕ್ಷಣಗಳನ್ನು ನೆನಪಿಸಿಕೊಂಡು ಜಾನು ಖುಷಿಯಾಗಿದ್ದಾಳೆ.
66
ಇತ್ತ ಸೈಕೋ ಜಯಂತ್‌ಗೆ ಜಾನು ಬದುಕಿರೋದು ಗೊತ್ತಾಗಿದೆ. ಚೆನ್ನೈನಲ್ಲಿಯೇ ಬೀಡು ಬಿಟ್ಟಿರುವ ಜಯಂತ್, ಸ್ಥಳೀಯ ಮೀನುಗಾರರ ಸಹಾಯ ಪಡೆದುಕೊಂಡು ಜಾನು ಹುಡುಕಾಟ ನಡೆಸುತ್ತಿದ್ದಾನೆ. ಖಾಸಗಿ ಸೆಕ್ಯೂರಿಟಿ ಏಜೆನ್ಸಿಗೂ ಹಣ ನೀಡಿರುವ ಅವರಿಂದಲೂ ಜಾಹ್ನವಿಯನ್ನು ಹುಡುಕಿಸುತ್ತಿದ್ದಾನೆ. ಸೀರಿಯಲ್ ಪ್ರೇಕ್ಷಕರು ಮಾತ್ರ ಆದಷ್ಟು ಬೇಗ ಇಬ್ಬರನ್ನು ಮುಖಾಮುಖಿ ಮಾಡಿಸಿ ಎಂದು ಕೇಳುತ್ತಿದ್ದಾರೆ.
Latest Videos