- Home
- Entertainment
- TV Talk
- Lakshmi Nivasa Serial ಜಾಹ್ನವಿ ಯಾರ ಜೊತೆ ಬದುಕಬೇಕು? ಚಂದನಾ ಅನಂತಕೃಷ್ಣ ರಿಯಲ್ ಅತ್ತೆ ಏನಂದ್ರು? Interview
Lakshmi Nivasa Serial ಜಾಹ್ನವಿ ಯಾರ ಜೊತೆ ಬದುಕಬೇಕು? ಚಂದನಾ ಅನಂತಕೃಷ್ಣ ರಿಯಲ್ ಅತ್ತೆ ಏನಂದ್ರು? Interview
ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿದ್ದ ನಟಿ ಚಂದನಾ ಅನಂತಕೃಷ್ಣ ಅವರು Asianet Suvarna News ಜೊತೆಗೆ ಸೀರಿಯಲ್, ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

‘ಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಇತ್ತೀಚೆಗೆ ಶ್ರೀಲಂಕಾ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದಿರೋದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಸಾಕಷ್ಟು ಟ್ವಿಸ್ಟ್ ಜೊತೆ ಸಾಗುತ್ತಿರೋ ಈ ಧಾರಾವಾಹಿ ಬಗ್ಗೆ ನಟಿ ಚಂದನಾ ಅನಂತಕೃಷ್ಣ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
ಶ್ರೀಲಂಕದಲ್ಲಿ ಬಿದ್ದು ಚೆನ್ನೈಯಲ್ಲಿ ಹೇಗೆ ಎದ್ರಿ?
ಚೆನ್ನೈ ಮತ್ತೆ ಶ್ರೀಲಂಕ ತುಂಬಾ ಏನು ದೂರ ಇಲ್ಲ. ರಾಮೇಶ್ವರಂ ನಮ್ಮಿಂದ ಏನು ತುಂಬಾ ಏನು ದೂರ ಇಲ್ಲ. ಹೀಗಾಗಿ ಅಲೆಗಳಲ್ಲಿ ತೇಲ್ಕೊಂಡು ಬಂದ್ಬಿಟ್ಟೆ.
ಶ್ರೀಲಂಕದ ಸಮುದ್ರದಲ್ಲಿ ಬಿದ್ದು, ಚೆನ್ನೈ ಸಮುದ್ರದಲ್ಲಿ ಎದ್ದಿದ್ದರೂ ಕೂಡ ಸ್ಟಿಕ್ಕರ್ ಏನು ಚೇಂಜ ಆಗಿಲ್ಲ.
ಸೀರಿಯಲ್‌ನಲ್ಲಿ ಲಾಜಿಕ್ ಕೇಳಬಾರದು, ಮ್ಯಾಜಿಕ್ ಅಷ್ಟೇ. ಆಕ್ಚುಲಿ ನಾನು ಲಿಪ್‌ಸ್ಟಿಕ್ ಹಚ್ಚಿರಲಿಲ್ಲ, ನಾನು ಮೇಕಪ್ ಮಾಡಿರಲಿಲ್ಲ. ಎಡಿಟಿಂಗ್ ವೇಳೆ DI ಮಾಡೋವಾಗ ಲಿಪ್‌ಸ್ಟಿಕ್ ಹಾಕಿರೋ ಥರ ಕಾಣುತ್ತದೆ. ಮುಖದಲ್ಲಿ ಸ್ಟಿಕ್ಕರ್ ಇಲ್ಲ ಅಂದ್ರೆ ಚೆನ್ನಾಗಿ ಕಾಣಿಸಲ್ಲ ಅಂತ ಸಣ್ಣದಾಗಿ ಸ್ಟಿಕ್ಕರ್ ಹಾಕಿಕೊಂಡ್ರೆ ಚೆನ್ನಾಗಿರುತ್ತದೆ ಅಂತ ಚರ್ಚೆ ಮಾಡಿ ಇಟ್ಟುಕೊಂಡೆವು. ಎಪಿಸೋಡ್ ಪ್ರಸಾರ ಆದ್ಮೇಲೆ ಎಲ್ಲ ಪೇಜ್‌ನಲ್ಲೂ ಇದೇ ಮಾತು. ಎಲ್ಲರೂ ಈ ಪೋಸ್ಟ್ ಕಳಿಸಿ ಕಳಿಸಿ ಸಾಯಿಸಿಬಿಟ್ರು.
ಶ್ರೀಲಂಕಾದಲ್ಲಿ ಏನಾದರೂ ಮರೆಯಲಾರದ ಘಟನೆ ನಡೆಯಿತಾ?
ಶ್ರೀಲಂಕಾಕ್ಕಿಂತ ಚೆನ್ನೈನಲ್ಲಿ ಶೂಟಿಂಗ್ ಆಯ್ತು. ಅದನ್ನು ಮಾತ್ರ ಮರೆಯೋಕೆ ಆಗೋದಿಲ್ಲ. ಚೆನ್ನೈನಲ್ಲಿ ಬಿಸಿಲು, ಅಲ್ಲಿ ಚಪ್ಪಲಿ ಇಲ್ಲದೆ ಓಡಾಡಬೇಕು. ಅಲ್ಲಿ ಒಣ ಮೀನು ಇಟ್ಟಿದ್ದರು. ನಾನು ಸಸ್ಯಾಹಾರಿ ಆಗಿದ್ದಕ್ಕೆ ಆ ವಾಸನೆ ತಡೆದುಕೊಳ್ಳಲಾಗಲಿಲ್ಲ. ಸಿದ್ದೇಗೌಡ್ರು-ಭಾವನಾ ಮಾತ್ರ ಸಖತ್ ಆರಾಮಾಗಿ ಶೂಟಿಂಗ್ ಮಾಡಿದ್ದಾರೆ. ಆದರೆ ನಾವು ಶ್ರೀಲಂಕಾದಲ್ಲಿ ಬೆಟ್ಟದ ಮೇಲೆ ಶೂಟಿಂಗ್ ಮಾಡಿದ್ದು, ಬೇರೆ ಎಲ್ಲಿಯೂ ಹೋಗೋಕಾಗಲಿಲ್ಲ.
ಜಯಂತ್‌ನನ್ನು ಜಾಹ್ನವಿ ಸಾಯಿಸುವ ದೃಶ್ಯವನ್ನು ನೋಡೋಕೆ ಆಗಲಿಲ್ಲ.
ಎಲ್ಲ ವಿಷಯ ಜಾಹ್ನವಿಗೆ ಗೊತ್ತಾಗುತ್ತದೆ. ಇಷ್ಟುದಿನ ನಟನೆಗೆ ಒತ್ತು ಕೊಡುವ ದೃಶ್ಯವನ್ನು ಜಯಂತ್‌ಗೆ ಕೊಡಲಾಗ್ತಿತ್ತು. ಈಗ ನನಗೆ ಸಿಕ್ಕಿತ್ತು. ಜಯಂತ್‌ನನ್ನು ನಾನು ವಿರೋಧಿಸುವ ದೃಶ್ಯ ಬಂದಾಗ ವೀಕ್ಷಕರು ಇಷ್ಟಪಟ್ಟಿದ್ದರು. ಸಮುದ್ರದ ಮಧ್ಯೆ ತೆಗೆದ ಶೂಟ್‌ನ್ನು ಒನ್ ಟೇಕ್‌ನಲ್ಲಿ ಮಾಡಿದ್ದೆ. ಬಹುತೇಕ ಎಲ್ಲರೂ ಈ ಸೀನ್ ನೋಡಿ ಇಷ್ಟಪಟ್ಟರು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಡ್‌ನಲ್ಲಿ ಹೋಗುವಾಗ ಸಿಕ್ಕಿದ ಕೆಲ ವೀಕ್ಷಕರು, ಮನೆಯಲ್ಲಿ ಎಲ್ಲರೂ ಹೊಗಳಿದ್ರು.
ಒಂದೇ ಮನೆಯಲ್ಲಿದ್ರೂ ವಿಶ್ವ-ಜಾನು ಭೇಟಿ ಆಗಿಲ್ಲ.
ನನಗೂ ಯಾಕೆ ಅಂತ ಗೊತ್ತಾಗಿಲ್ಲ. ಆದರೆ ಎಷ್ಟೋ ಮನೆಯಲ್ಲಿ ಹುಡುಗರು ಮನೆಕೆಲಸದವರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ, ಗಮನ ಕೊಡೋದಿಲ್ಲ. ಹಾಗೆಯೇ ಆಗಬಹುದು.
ಜಾನು-ವಿಶ್ವ ಮದುವೆ ಆಗಬೇಕು ಎಂದು ಹೇಳುವವರಿದ್ದಾರೆ. ಈ ಬಗ್ಗೆ ಏನು ಹೇಳ್ತೀರಾ?
ಜಯಂತ್ ಯಾಕೆ ಹೀಗಾದ ಎನ್ನೋದನ್ನು ತಿಳಿದುಕೊಂಡು, ಜಯಂತ್‌ನನ್ನು ಸರಿಯಾಗಿ ಮಾಡಬೇಕು. ಅವನ ಜೊತೆ ಜೀವನ ಮಾಡಬೇಕು.
ದೊಡ್ಡ ಧಾರಾವಾಹಿ ಬಳಗದ ಭಾಗವಾಗಿದ್ದೀರಿ..
ಟೈಟಲ್ ಕಾರ್ಡ್‌ನಲ್ಲಿ ನೀವಿಲ್ಲ ಅಂತ ಕೆಲವರು ಹೇಳಿದ್ದುಂಟು. ಆದರೆ ಈ ಧಾರಾವಾಹಿ ತಂಡ ನನಗೆ ತುಂಬ ಇಷ್ಟ ಆಗಿದೆ.
ಜಡೆ ನೋಡಿ ತುಂಬ ಜನ ಇಷ್ಟಪಟ್ಟರು..
ಹೌದು, ಆರಂಭದಲ್ಲಿ ಜಡೆ ಅಂತ ಅಂದಾಗ ಬೇಡ ಅಂತ ಹೇಳಿದ್ದೆ. ವಾಹಿನಿಯವರೇ ಜಡೆ ಹಾಕಿಕೊಳ್ಳಿ ಅಂತ ಹೇಳಿದರು..ಈಗ ಈ ಲುಕ್ ಎಲ್ಲರಿಗೂ ಇಷ್ಟ ಆಗಿದೆ..
ವೀಕ್ಷಕರು ಏನು ಹೇಳುತ್ತಾರೆ?
ಜಯಂತ್ ಹತ್ರ ವಾಪಾಸ್ ಹೋಗಿ ಅಂತ ಕೆಲವರು ಹೇಳಿದರೆ, ಇನ್ನೂ ಕೆಲವರು ವಿಶ್ವನನ್ನು ಮದುವೆ ಆಗಿ ಅಂತಾರೆ. ಜಯಂತ್ ಬೇಸರ ಮಾಡಿಕೊಂಡಿದ್ದಾನೆ, ಅವನ ಬಳಿ ಹೋಗು ಅಂತ ನನ್ನ ಅತ್ತೆ ಹೇಳಿದ್ದುಂಟು.
ನಿಮ್ಮ ಅತ್ತೆ ಕೂಡ ಕಲಾವಿದೆ. ಅವರೇ ಹೀಗೆಲ್ಲ ಹೇಳೋದು ಅಂದ್ರೆ ನಿಮ್ಮ ಪಾತ್ರಕ್ಕೆ ಅಟ್ಯಾಚ್ ಆಗಿರೋದು ಹೇಗೆ ಅನಿಸುತ್ತದೆ?
ಹೌದು. ನಮ್ಮ ಅತ್ತೆಗೆ ಧಾರಾವಾಹಿ ಅಪ್‌ಡೇಟ್ ಬಗ್ಗೆ ಗೊತ್ತಿರುತ್ತದೆ. ಅವರಿಗೂ ಚಂದನಾ, ಜಾನುಗೆ ವ್ಯತ್ಯಾಸ ಗೊತ್ತಿದೆ.
ನೀವು ನಟಿಸೋದನ್ನು ನೋಡಿ ನಿಮ್ಮ ಅತ್ತೆ ಖುಷಿಪಡುತ್ತಿದ್ದಾರೆ..
ಹೌದು, ಸಪೋರ್ಟಿವ್ ಆಗಿರೋ ಕುಟುಂಬ ಬೇಕು ಅಂತ ನಾನು ಕಾಯುತ್ತಿದ್ದೆ. ಈಗ ಒಳ್ಳೆಯ ಕುಟುಂಬ ಸಿಕ್ಕಿರೋದು ತುಂಬ ಖುಷಿ ಕೊಟ್ಟಿದೆ.